ಹಾಸ್ಟೆಲ್ ಗುಣ ಮಟ್ಟದ ಫಲಿತಾಂಶ ಕ್ಕೆ ಕಾರಣಿಭೂತ ಉಮೇಶ್ ಸಿದ್ನಾಳ್ ಅವರಿಗೆ ಮೆಚ್ಚುಗೆಯ ಮಹಾಪೂರ

ಗ್ಯಾನಪ್ಪ ದೊಡ್ಡಮನಿ 

ಮಸ್ಕಿ : ಸಮಾಜ ಕಲ್ಯಾಣ ಇಲಾಖೆಯಲ್ಲಿ ಬದಲಾವಣೆಯ ಗಾಳಿ‌ಬೀಸಿದ ಅಧಿಕಾರಿ ಉಮೇಶ ಸಿದ್ನಾಳ ಎಂದು ಸಾರ್ವಜನಿಕರ ವಲಯದ ಅಭಿಪ್ರಾಯ ವಾಗಿದೆ

ಹೌದು ಮಸ್ಕಿಯ ಕೆಲವು ಹಾಸ್ಟೆಲ್ ಗಳು ಆಶ್ರಮ ಶಾಲೆಗಳು ಹಾಗೂ ಲಿಂಗಸಗುರು ತಾಲ್ಲೂಕಿನ ಬಹುತೇಕ ಹಾಸ್ಟೆಲ್ ಗಳಲ್ಲಿ ಹಿಂದೆ

ಸಾವಿರಾರು ಸಮಸ್ಯೆಗಳು ಒಂದಿಲ್ಲ ಒಂದು‌ದೂರುಗಳು ಪ್ರತಿ ನಿತ್ಯ ಸಮಾಜ ಕಲ್ಯಾಣ ಇಲಾಖೆಯದ್ದೇ ಸುದ್ದಿಗಳು. 

ಇಂತಹ ಸಂದರ್ಭದಲ್ಲಿ ತಾಲ್ಲೂಕು ಅಧಿಕಾರಿಗಳಾಗಿ ಅಧಿಕಾರ ವಹಿಸಿಕೊಂಡ ಕೇವಲ 6/7 ತಿಂಗಳಲ್ಲಿ ಉಮೇಶ್ ಸಿದ್ನಾಳ್ ರವರು ವಿದ್ಯಾರ್ಥಿಗಳ ಸಮಸ್ಯೆಗೆ ಬೇಗನೆ ಸ್ಪಂದಿಸಿ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಹಾಗೂ ವಸತಿ ನಿಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ಎಸ್ ಎಸ್ ಎಲ್ ಸಿ .ಪಿಯುಸಿ ವಿದ್ಯಾರ್ಥಿಗಳಿಗೆ ವಿಶೇಷ ಕಾಳಜಿ ವಹಿಸಿ ವಸತಿ ನಿಲಯದ ಮೇಲ್ವಿಚಾರಕರಿಗೆ ಸಾಕಷ್ಟು ಸಲಹೆಗಳನ್ನು ನೀಡುವ ಮೂಲಕ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿಗಳು ಗುಣಮಟ್ಟದ ಫಲಿತಾಂಶ ಪಡೆಯಲು ಪರೀಕ್ಷಾ ಸಂದರ್ಭದಲ್ಲಿ ಸೌಲಭ್ಯಗಳ ಜೊತೆಗೆ ಶಿಕ್ಷಣದ ಬಗ್ಗೆ ಅರಿವು ಮೂಡಿಸಿ ಲಿಂಗಸ್ಗೂರ ತಾಲ್ಲೂಕಿನ ಹಾಸ್ಟೆಲ್ ಗುಣ ಮಟ್ಟದ ಫಲಿತಾಂಶ ಕ್ಕೆ ಕಾರಣಿಭೂತರಾಗಿದ್ದಾರೆ. ರಾಜ್ಯದ ಟಾಪ್ 30 ವಿದ್ಯಾರ್ಥಿಗಳ ಪೈಕಿ ಅದರಲ್ಲಿ ನಾಲ್ಕು ವಿದ್ಯಾರ್ಥಿಗಳು ಲಿಂಗಸುಗೂರು ತಾಲ್ಲೂಕಿನವರಾಗಿದ್ದು ಲಿಂಗಸುಗೂರ ತಾಲ್ಲೂಕಿಗೆ ಕೀರ್ತಿ ತಂದಿದ್ದಾರೆ ಇದಕ್ಕೆ ದಕ್ಷ ಅಧಿಕಾರಿಗಳಾದ ಉಮೇಶ್ ಸಿದ್ನಾಳ ಹಾಗೂ ಅವರ ಇಲಾಖೆಯ ಎಲ್ಲರ ಶ್ರಮವಿದೆ ಎಂದು ಸಾರ್ವಜನಿಕರು ಹಾಗೂ ಪಾಲಕರು ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದನೆ ತಿಳಿಸಿದ್ದಾರೆ.

ಸಿಬ್ಬಂದಿಗಳಿಗೆ ಧ್ವನಿಯಾದ ಅಧಿಕಾರಿ ಇಲಾಖೆಯಲ್ಲಿ ಎರಡೂ ಮೂರು ವರ್ಷಗಳಿಂದ ಹಗಲು ರಾತ್ರಿಯನ್ನದೇ ದುಡಿದ ಸಿಬಂದ್ದಿಗಳಿಗೆ ಸಂಬಳವಿಲ್ಲದೇ ಪ್ರತಿ ನಿತ್ಯ ಕಷ್ಟಗಳ ನಡುವೆ ಬದುಕುತ್ತಿದ್ದರು ಕೆಲ ಅಧಿಕಾರಿಗಳಿಗೆ ತಿಳಿಯಲೇ ಇಲ್ಲ ಸತ್ತರೇ ಅಷ್ಟೇ ನ್ಯಾಯ ಎಂದು ಕಣ್ಣು ಮುಚ್ಚಿಕುಳಿತ್ತಿದ್ದರು ಆದರೇ ಉಮೇಶ ಸಿದ್ನಾಳ ಅವರು ಅಧಿಕಾರಿ ವಹಿಸಿಕೊಂಡ ನಂತರ ದೂಳು ಹಿಡಿದ ಹಲವು ಸಮಸ್ಯೆಗಳಿಗೆ ಮುಕ್ತಿ ಕೊಡಿಸಿದ್ದಾರೆ

ಹಿಂದೆ ಸಮಾಜ ಕಲ್ಯಾಣ ಇಲಾಖೆ ಲಿಂಗಸ್ಗೂರ ನಲ್ಲಿ ಸುಮಾರು ಎರಡು ವರ್ಷಗಳಿಂದಲೂ ಯಾವೊಬ್ಬ ಖಾಯಂ ತಾಲ್ಲೂಕ ಅಧಿಕಾರಿ ಇಲ್ಲದೇ ಸಿಬ್ಬಂದಿಗಳು ಸರಿಯಾದ ಸಮಯಕ್ಕೆ ಕೆಲಸಕ್ಕೆ ಹೋಗದೇ ಹಾಸ್ಟೇಲ್ ಗಳ ಬಗ್ಗೆ ಗಮನ ಹರಿಸಿದೆ ಕೆಲವು ಸಿಬ್ಬಂದಿಗಳು ವರ್ತಿಸುತ್ತಿದ್ದರು ಎನ್ನುವ ಆರೋಪವ ಸಾರ್ವಜನಿಕ ವಲಯದಲ್ಲಿ ಇತ್ತು

ಆದರೇ ಅವರ ಬಂದ ನಂತರ ಸಿಬ್ಬಂದಿಗಳು ಪ್ರತಿನಿತ್ಯ ಕೆಲಸಕ್ಕೆ ಹಾಜರಾಗುತ್ತಿದ್ದಾರೆ ಉತ್ತಮ ಬದಲಾವಣೆ ಆಗುತ್ತಿದೆ ಎಂದು ಸಾರ್ವಜನಿಕ ರ ಮಾತಾನಾಡುತ್ತಿದ್ದಾರೆ

ಇನ್ನು ತಾಲ್ಲೂಕ ಕಛೇರಿಗೆ ಹೊದರೇ ತಾಲ್ಲೂಕು ಅಧಿಕಾರಿ ಬಗ್ಗೆ ಕೇಳಿದರೇ ಹಿಂದೆ ಅವರಿಂದ ಬರುತ್ತಿದ್ದ ಸಿದ್ದ ಉತ್ತರ "ಸಾಹೇಬ್ರು ಬೇರೆ ಇಲಾಖೆಯವರು ಅದಕ್ಕಾಗಿ ಅಲ್ಲಿ ಇದ್ದಾರೆ ಇಲ್ಲಿ ಇದ್ದಾರೆ ಎಂಬುವ ಸಿದ್ದ ಉತ್ತರ " 

ಸದ್ಯ ಬಂದಿರುವ ಅಧಿಕಾರಿ ಯಾವ ಸಮಯಕ್ಕಾದಾರೂ ಕಛೇರಿಯಲ್ಲಿ ಲಭ್ಯ ವಿರುತ್ತಾರೆ...! ತನ್ನದೇ ಇಲಾಖೆಯಲ್ಲಿ ವರ್ಷನುಗಟ್ಟಲೇ ಕಾರ್ಯ ನಿರ್ವಹಿಸುತ್ತಿದ್ದ ಖಾಯಂ ಸಿಬ್ಬಂದಿಗೆ ಸಂಬಳವೇ ಇಲ್ಲದೆ ಇಲಾಖೆಗೆ ದುಡಿಯುವ ಬಡ ಕಾರ್ಮಿಕರ ಸಂಬಳದ ಬಗ್ಗೆ ಯೋಚಿಸಲೂ ಸಮಯವೆ ಇರಲಿಲ್ಲ....ಆದರೇ ಉಮೇಶ ಸಿದ್ನಾಳ ಅವರು ಅಧಿಕಾರ ವಹಿಸಿಕೊಂಡ ನಂತರ ಸುಮಾರು ಎರಡು ವರ್ಷಗಳಿಂದ ಸಂಬಳ ಕಾಣದೇ ಅಕ್ಷರಶಃ ಮೂಕ ಪ್ರೇಕ್ಷಕರಾಗಿ ದುಡಿದ ಅದೆಷ್ಟೋ ಸಿಬ್ಬಂದಿ ಗಳಿಗೆ ಸದ್ಯ ಸಂಬಳವಾಗಿದೆ. 

ಹಿಂದೆ ಇಲಾಖೆಯ ಕಛೇರಿಯಲ್ಲಿ ಹಿರಿಯ ಅಧಿಕಾರಿಗಳಲ್ಲಿ ಕೆಲವರು ಸರಿಯಾಗಿ ಕಛೇರಿಗೆ ಬರುತ್ತಿರಲಿಲ್ಲ ಹಣದ ರಾಜಕೀಯ ಪ್ರಭಾವ ಬೆಳಸಿ ಮನೆಯಲ್ಲಿ ಇರುತ್ತಿದ್ದರು ಎಂಬ ಆರೋಪವಿತ್ತು ಆದರೇ ಉಮೇಶ ಸಿದ್ನಾಳ ರವರು ಬಂದ ನಂತರ ಎಲ್ಲವೂ ಬದಲಾಗಿದೆ ಎಂದು ಹೆಸರು ಹೇಳದ ಸಮಾಜಕಲ್ಯಾಣ ಇಲಾಖೆಯ ನೌಕರರೊಬ್ಬರು ಪತ್ರಿಕೆಗೆ ತಿಳಿಸಿದರು.

ಉಮೇಶ್ ಸಿದ್ನಾಳ ರವರು ಇಲಾಖೆಯ ಬಗ್ಗೆ ಕೇಳಿದರೆ ಸರಿಯಾದ ಮಾಹಿತಿಯನ್ನು ನೀಡುವುದಿಲ್ಲ ಎಂಬ ಆರೋಪವು ಇವರ ಮೇಲೆ ಇದೆ.

ಹೇಳಿಕೆ ೧

ಲಿಂಗಸಗೂರು ಸಮಾಜ ಕಲ್ಯಾಣ ಇಲಾಖೆಯಲ್ಲಿ ಹಲವಾರು ಸಮಸ್ಯೆಗಳನ್ನು ಸಮರ್ಥವಾಗಿ ನಿಭಾಯಿಸಿ ಉತ್ತಮ ಆಡಳಿತವನ್ನು ನೀಡುತ್ತಿದ್ದಾರೆ ಎಂದು ಮಸ್ಕಿಕರ್ನಾಟಕದ ರಕ್ಷಣಾ ವೇದಿಕೆ (ಎಚ್ ಶಿವರಾಮೆ ಗೌಡ ಬಣ ) ತಾಲ್ಲೂಕು ಅಧ್ಯಕ್ಷ ಆರ್.ಕೆ ನಾಯಕ ರವರು ಹೇಳಿದರು.

ಹೇಳಿಕೆ.೨

ಮಕ್ಕಳ ಪರವಾಗಿ ಕಾರ್ಯ ನಿರ್ವಹಿಸುತ್ತಿರುವ ಇಂಥಹ ಅಧಿಕಾರಿಗಳು ನಮ್ಮ ಜಿಲ್ಲೆಯಲ್ಲಿ ಇರುವುದು ನಮ್ಮ ಶೋಷಿತರ ಹಾಗೂ ಸಮಾಜದ ಕಟ್ಟ ಕಡೆಯ ಮಕ್ಕಳ ಅಭಿವೃದ್ಧಿಗೆ ಸಹಾಯಕವಾಗುತ್ತದೆ ಎಂದು ಮಸ್ಕಿಕರುನಾಡ ವಿಜಯ ಸೇನೆ ನಗರ ಘಟಕದ ಅಧ್ಯಕ್ಷ ಸಿದ್ದು ಮುರಾರಿ ಯವರ ಮನದಾಳದ ಮಾತು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ