ಉಚಿತ ಕಂಪ್ಯೂಟರ್ ತರಬೇತಿ ಕಾರ್ಯಕ್ರಮ ಉದ್ಘಾಟನೆ
ಮಸ್ಕಿ : ಪಟ್ಟಣದ ಗಚ್ಚಿನ ಮಠದಲ್ಲಿ ಜನ ಶಿಕ್ಷಣ ಸಂಸ್ಥಾನ ರಾಯಚೂರು ಇವರ ನೇತ್ರತ್ವದಲ್ಲಿ ಹೈಟೆಕ್ ಕಂಪ್ಯೂಟರ್ ಶಿಕ್ಷಣ ತರಬೇತಿ ಕೇಂದ್ರ ಮಸ್ಕಿಯಲ್ಲಿ ಉಚಿತ ಕಂಪ್ಯೂಟರ್ ತರಬೇತಿಯ ಉದ್ಘಾಟನೆ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸದಾನಂದ ಪೂಜಾರಿ ನಿರ್ದೇಶಕರು ಜೆಎಸ್ಎಸ್ ರಾಯಚೂರು ಅವರು ಎಲ್ಲಾ ಕಲಿಕಾರ್ಥಿಗಳಿಗೆ ಉತ್ತಮ ಶಿಕ್ಷಣವನ್ನು ಪಡೆಯಬೇಕು ನೀವು ಕಂಪ್ಯೂಟರ್ ತರಬೇತಿ ಪಡೆದು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ನಿಮ್ಮ ಕುಟುಂಬವನ್ನು ಮುನ್ನಡೆಸಬೇಕಾದರೆ ಸ್ವಯಂ ಉದ್ಯೋಗ ಮಾಡಬೇಕು ಹಾಗಾಗಿ ಇಂತಹ ಕೌಶಲ್ಯ ತರಬೇತಿಗಳನ್ನು ಪಡೆದು ಸ್ವಯಂ ಉದ್ಯೋಗ ಸೃಷ್ಟಿಸಿಕೊಳ್ಳಿ ಎಂದು ಮತ್ತು ನಿರಂತರವಾಗಿ ಆಸಕ್ತಿಯಿಂದ ಶ್ರಮಪಟ್ಟು ಹೆಚ್ಚಿನ ಆದಾಯವನ್ನು ಪಡೆದುಕೊಳ್ಳಬೇಕೆಂದು ನಮ್ಮ ನಾಡಿಗೆ ದೇಶಕ್ಕೆ ಮಾದರಿಯಾಗಬೇಕೆಂದು ಎಲ್ಲಾ ಕಲಿಕಾರ್ಥಿಗಳಿಗೆ ಕಿವಿಮಾತು ಹೇಳಿದರು.
ಈ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಮಾತನಾಡಿದ ಸಿದ್ದಪ್ಪ ಸೆಳ್ಳೆದ್ ಪ್ರಾಚಾರ್ಯರು ಸುಮಾರು ವರ್ಷಗಳಿಂದ ಹೈಟೆಕ್ ಕಂಪ್ಯೂಟರ್ ಶಿಕ್ಷಣ ತರಬೇತಿ ಕೇಂದ್ರದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಾ ಬಂದಿದ್ದು ಸುಮಾರು ಯುವಕರು ಯುವತಿಯರು ಈ ಕಂಪ್ಯೂಟರ್ ತರಬೇತಿಯಲ್ಲಿ ಕಲಿತು ಸರಕಾರಿ ಉದ್ಯೋಗಗಳಲ್ಲಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಹಾಗೂ ಸ್ವಯಂ ಉದ್ಯೋಗವನ್ನು ಸೃಷ್ಟಿಸಿಕೊಂಡು ಉತ್ತಮ ಜೀವನವನ್ನು ನಡೆಸುತ್ತಿದ್ದು ಈ ಒಂದು ಸಾಧನೆಯು ಕಂಪ್ಯೂಟರ್ ಶಿಕ್ಷಣ ಸಂಸ್ಥೆಯಿಂದ ಮಾತ್ರ ಸಾಧ್ಯ ಹಾಗೂ ನಿರಂತರವಾಗಿ ಹಲವು ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳಿಗೆ ಉಚಿತವಾಗಿ ತರಬೇತಿ ನೀಡುತ್ತಾ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುತ್ತಾ ಬಂದಂತ ಹೈಟೆಕ್ ಕಂಪ್ಯೂಟರ್ ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕರಾದ ಯಮನೂರ್ ಕನ್ನಾರಿ ಅವರಿಗೆ ಧನ್ಯವಾದಗಳು ಹಾಗೂ ಹೀಗೆ ನೂರಾರು ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟ ಶಿಕ್ಷಣ ನೀಡಲೆಂದು ಮತ್ತು ಎಲ್ಲಾ ವಿದ್ಯಾರ್ಥಿಗಳು ಉತ್ತಮ ರೀತಿಯಲ್ಲಿ ಕಲಿತು ಒಳ್ಳೆ ಸಂಸ್ಕಾರವನ್ನು ಬೆಳೆಸಿಕೊಂಡು ಸ್ವಯಂ ಉದ್ಯೋಗವನ್ನು ಸೃಷ್ಟಿಸಿಕೊಂಡು ಈಗಿನ ಟೆಕ್ನಾಲಜಿಯನ್ನು ಬಳಸಿಕೊಂಡು ಬದುಕನ್ನು ನಡೆಸಿಕೊಂಡು ಹೋಗಬೇಕೆಂದು ತಿಳಿಸಿದರು.
ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಸದಾನಂದ ಪೂಜಾರಿ ನಿರ್ದೇಶಕರು ಜನ ಶಿಕ್ಷಣ ಸಂಸ್ಥಾನ ರಾಯಚೂರು, ಸಿದ್ದಪ್ಪ ಸೆಳ್ಳೆದ್ ಪ್ರಾಂಶುಪಾಲರು SDRB ಮಸ್ಕಿ, ಯಮನೂರ ಕನ್ನಾರಿ ವ್ಯವಸ್ಥಾಪಕರು, ಬಸವರಾಜ ಬುಕ್ಕಣ್ಣ ಮಸ್ಕಿ ಸದಸ್ಯರು, ಇಂದ್ರಪಾಷ ಪತ್ರಕರ್ತರು ಮಸ್ಕಿ, ಹನುಮಂತ ನಾಯಕ್ ಪತ್ರಕರ್ತರು ಮಸ್ಕಿ, ಸೋಮಣ್ಣ ಜೆ ಎಸ್ ಎಸ್ ರಾಯಚೂರು, ಸಂಪನ್ಮೂಲ ವ್ಯಕ್ತಿಗಳಾದ ಮಹಾಲಕ್ಷ್ಮಿ ಮಸ್ಕಿ,ವಿನೋದ್ ಗೋನಾಳ್, ಕಲಿಕಾರ್ಥಿಗಳು ಭಾಗವಹಿಸಿದ್ದರು.
👌👌👌👌
ಪ್ರತ್ಯುತ್ತರಅಳಿಸಿ