ವಿಕಲಚೇತನ ಮಂಜುನಾಥ್ ಇವರಿಗೆ ಶಾಸಕರಿಂದ ಅಭಿನಂದನೆ

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಹಿರೇ ಹೆಗ್ಡಾಳ್ ಗ್ರಾಮದ ಕೆಎನ್ ಮಂಜುನಾಥ ತಾಯಿ ವಿಜಯಲಕ್ಷ್ಮಿ ಇವರು ವಿಶೇಷ ಎನೆಂದರೆ ವೀಲ್ ಚೇರ್ ಬಾಸ್ಕೆಟ್ ಬಾಲ್ ಪುರುಷ ಆಟಗಾರರ ರಾಜ್ಯಮಟ್ಟದ ತಂಡಕ್ಕೆ ತಾಲೂಕಿನ ಹಿರೇ ಹೆಗ್ಡಾಳ್ ಗ್ರಾಮದ ಮಂಜುನಾಥ್ ಇವರು ಆಯ್ಕೆಯಾಗಿದ್ದಾರೆ ತಮಿಳುನಾಡಿನಲ್ಲಿ ಜುಲೈ 25ರಂದು ನಡೆಯುವ ಸೌತ್ ಜೂನ್ ಚಾಂಪಿಯನ್ಶಿಪ್ ಎರಡನೇ ಬಾರಿ ಕ್ರೀಡಾಕೂಟದಲ್ಲಿ ರಾಜ್ಯ ವಿಶೇಷ ಚೇತನರ ಹತ್ತು ಆಟಗಾರರು ತಂಡವನ್ನು ಸ್ಟೇಟ್ ವಿಲ್ ಶೇರ್ ಬಾಸ್ಕೆಟ್ ಬಾಲ್ ಅಸೋಸಿಯೇಷನ್ ಪ್ರಕಟಿಸಿದ್ದು ಹತ್ತು ಆಟಗಾರರ ಪೈಕಿ ಗ್ರಾಮದ ವಿಶೇಷ ಚೇತನ ಮಂಜುನಾಥ್ ಆಯ್ಕೆಯಾಗಿದ್ದಾರೆ ಕೆ ಎನ್ ಮಂಜುನಾಥ್ ಇವರಿಗೆ ಸಾಕಷ್ಟು ಪ್ರಶಸ್ತಿಗಳು ಲಭಿಸಿದ್ದು ಕರಿಬಸವೇಶ್ವರ ಯುವಕಲಾ ಸಂಘದ ವತಿಯಿಂದ ಕ್ರೀಡೆ ಪ್ರಶಸ್ತಿ ಕಲಾಭಾರತಿ ಕಲಾ ಸಂಘದ ವತಿಯಿಂದ ಕ್ರೀಡೋತ್ಸವ ರಾಜ್ಯ ಪ್ರಶಸ್ತಿ ಹಾಗೂ ಇನ್ನು ಇತರ ಸಂಘ ಸಂಸ್ಥೆಗಳಿಂದ ಪ್ರಶಸ್ತಿಯನ್ನು ತೆಗೆದುಕೊಂಡಿರುವ ವೀಲ್ ಚೇರ್ ಆಟಗಾರರಾಗಿರುವ ಹೆಮ್ಮೆಯ ವಿಕಲಚೇತನ ಮಂಜುನಾಥ್ ಇವರಿಗೆ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಡಾ ಎನ್ ಟಿ ಶ್ರೀನಿವಾಸ್ ಇವರಿಂದ ಅಭಿನಂದಿಸಿ ಧನಸಹಾಯ ಮಾಡಲಾಯಿತು ಈ ಸಂದರ್ಭದಲ್ಲಿ ಶಾಸಕರು ಮಾತನಾಡಿದರು ಇಂಥ ಹೊಸ ಹೊಸ ಪ್ರತಿಭೆಗಳು ನಮ್ಮ ಕೂಡ್ಲಿಗಿಯಲ್ಲಿ ಅತಿ ಹೆಚ್ಚಾಗಿ ಹೊರಹೊಮ್ಮಲಿ ನನ್ನ ಆಸೆ ಒಂದೇ ಕೂಡ್ಲಿಗಿಯನ್ನು ಒಂದು ಸುಂದರ ಶಾಂತಿಯ ತೋಟ ಮಾಡುವುದು ಪ್ರತಿಭೆಯನ್ನು ಗುರುತಿಸುವುದು ಅವರಿಗೆ ಸಹಕಾರ ನೀಡುವುದು ನನ್ನ ಉದ್ದೇಶ ಎಂದರು ಈ ಸಂದರ್ಭದಲ್ಲಿ ನೌಕರ ಘಟಕದ ಅಧ್ಯಕ್ಷರಾದ ಪಾಲ್ತೂರ್ ಸಿದ್ದರಾಧ್ಯ ಶಿಕ್ಷಕರು ನಾಗರಾಜ್ ಕೊಟ್ರಪ್ಪನವರು ಹಿರೇ ಹೆಗ್ಡಾಳ್ ಶಾಲೆಯ ಶಿಕ್ಷಕರು ಬಣಕಾರ್ ನಾಗರಾಜ್ ಗೋವಿಂದ ಗಿರಿ ಶಿಕ್ಷಕಿಯಾದ ವಿಜಯಲಕ್ಷ್ಮಿ ಹಾಗೂ ಸಮಾಜಸೇವಕರು ಕಾವಲಿ ಶಿವಪ್ಪ ನಾಯಕ ದಿನಕರ ಶಾಸಕರ ಆಪ್ತರಾದ ಮರಳು ಸಿದ್ದಪ್ಪ ದಿಬ್ಬದಳ್ಳಿ ಸಿದ್ದೇಶ್ ಹಾಗೂ ಇತರರು ಉಪಸ್ಥಿತರಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ