ಮಾನಕ ಗುಣಮಟ್ಟ ಅರಿವು ಸಭೆ
ಬೆಂಗಳೂರು: ಕರ್ನಾಟಕದಲ್ಲಿ ಗುಣಮಟ್ಟದ ಮಾನದಂಡಗಳ ಬಗ್ಗೆ ಜಾಗೃತಿ ಮೂಡಿಸುವ ಸಂಬಂಧ ಜುಲೈ 25 ಗುರುವಾರದಂದು ಬೆಂಗಳೂರು ಜಾಲಹಳ್ಳಿ ಕ್ರಾಸ್ ಬಳಿ ಇರುವ ಭಾರತೀಯ ಮಾನದಂಡ ಬ್ಯೂರೋದಲ್ಲಿ “ಮಾನಕ ಮಂಥನ” ನಡೆಯಿತು.
ವಿವಿಧ ವಲಯಗಳಲ್ಲಿ ಭಾರತೀಯ ಮಾನದಂಡಗಳ ಕುರಿತಂತೆ ಮಾಡಲಾಗಿರುವ ಬದಲಾವಣೆಗಳ ಬಗ್ಗೆ ಸಭೆಯಲ್ಲಿ ಬೆಳಕು ಚೆಲ್ಲಲಾಯಿತು. ಭಾರತೀಯ ಮಾನದಂಡಗಳ ಸಂಸ್ಥೆಯ ಅಂಗವಾದ ಭಾರತೀಯ ಮಾನದಂಡಗಳ ಬ್ಯೂರೋ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಗುಣಮಟ್ಟ ಮಾನದಂಡಗಳಾದ ಉತ್ಪನ್ನ ಪ್ರಮಾಣೀಕರಣ, ನೋಂದಣಿ, ಮುದ್ರೆ, ಪ್ರಯೋಗಾಲಯ ಪರೀಕ್ಷೆ ಮೊದಲಾದವುಗಳನ್ನು ಅಳವಡಿಸಿಕೊಳ್ಳುವ ಬಗ್ಗೆ ಎಲ್ಲಾ ಸಂಬಂಧಿತ ಪಾಲುದಾರರಿಗೆ ತಿಳಿಸಲಾಯಿತು. ಪ್ರಸ್ತಾಪಿತ ಮಾನದಂಡಗಳ ಬಗ್ಗೆ ಸಂಬಂಧಪಟ್ಟವರಿಂದ ಸಲಹೆ ಮತ್ತು ಟೀಕೆಗಳನ್ನು ಆಹ್ವಾನಿಸಲಾಗಿದೆ.
ಬ್ಯೂರೋ ನಿರ್ದೇಶಕರಾದ ವಿಜ್ಞಾನಿ ವಿಜಯವೀರನ್. ಕೆ., ಮತ್ತಿತರರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ