ಅರ್ಚಕರನ್ನು ನೇಮಕ ಮಾಡಿ ಗುರುತಿನ ಚೀಟಿಯನ್ನು ನೀಡಲು : ಸಿದ್ದಯ್ಯ ಹೆಸರೂರು ಹಿರೇಮಠ ಮನವಿ


 ಮಸ್ಕಿ: ಧಾರ್ಮಿಕ ದತ್ತಿ ಇಲಾಖೆಗೆ ಒಳಪಡುವ ಸಿ ವರ್ಗದ ದೇವಸ್ಥಾನದ ಅರ್ಚಕರನ್ನು ನೇಮಕ ಮಾಡಿ ಗುರುತಿನ ಚೀಟಿಯನ್ನು ವಿತರಿಸಬೇಕು ಎಂದು ಅರ್ಚಕರು ಮಾನ್ಯ ಆಯಕ್ತರು ಧಾರ್ಮಿಕ ದತ್ತಿ ಇಲಾಖೆ ಕರ್ನಾಟಕ ಸರ್ಕಾರ ಬೆಂಗಳೂರು ಇವರಿಗೆ ಉಪ ತಹಶೀಲ್ದಾರರ ಮುಖಾಂತರ ಮನವಿಯನ್ನು ಸಲ್ಲಿಸಿದರು . ಈ ವೇಳೆ, ಮಸ್ಕಿ ಮಲ್ಲಿಕಾರ್ಜುನ ದೇವಸ್ಥಾನದ ಅರ್ಚಕರಾದ ಸಿದ್ದಯ್ಯ ಹಿರೇಮಠ ರವರು ಮಾತನಾಡಿ ರಾಯಚೂರು ಜಿಲ್ಲೆಯಾಧ್ಯಂತ ಧಾರ್ಮಿಕ ದತ್ತಿಗೊಳಪಡುವ ಸಿ ವರ್ಗದ ದೇವಸ್ಥಾನಗಳಿಗೆ ಅರ್ಚಕರನ್ನು ನೇಮಕ ಮಾಡುವಲ್ಲಿ ಜಿಲ್ಲಾಡಳಿತ ಹಾಗೂ ತಾಲೂಕಾಡಳಿತ ಸಂಪೂರ್ಣ ವಿಫಲಾರಾಗಿದ್ದಾರೆ. ಬೇರೆ ಜಿಲ್ಲೆಗಳಲ್ಲಿ ಸಿ ವರ್ಗದ ಅರ್ಚಕರನ್ನು ನೇಮಕ ಮಾಡಿ ಎಂದು ಸರಕಾರವು ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ 1997ರ ಕಾಯ್ದೆಯ ಕಲಂ 9(1) ರಿಂದ ವಿನಾಯ್ತಿ ನೀಡಿ ವಂಶಪಾರಂಪರ್ಯವಾಗಿ ಪೂಜಾ ಕೈಂಕರ್ಯಗಳನ್ನು ನಿರ್ವಹಿಸಿಕೊಂಡು ಅರ್ಚಕರ ನಿಧನರಾದ ನಂತರ ಅವರ ಮಕ್ಕಳಿಗೆ ತಹಶೀಲ್ದಾರ ಹಂತದಲ್ಲಿ ವರ್ಗಾವಣೆ ಮಾಡಲು ಸರಕಾರ ಆದೇಶ ಇದ್ದರೂ ಕೂಡ ನಮ್ಮ ಜಿಲ್ಲೆಯಲ್ಲಿ ಅರ್ಚಕರನ್ನು ನೇಮಕ ಮಾಡದೇ ವಿಳಂಬ ಮಾಡುತ್ತಿದ್ದು, ಆದಷ್ಟು ಬೇಗನೆ ಅರ್ಚಕರನ್ನು ನೇಮಕ ಮಾಡಿ ಅರ್ಚಕರಿಗೆ ಗುರುತಿನ ಚೀಟಿಯನ್ನು ನೀಡಬೇಕೆಂದು ಧಾರ್ಮಿಕ ದತ್ತಿ ಇಲಾಖೆ ಕರ್ನಾಟಕ ಸರಕಾರ ಇವರಿಗೆ ತಹಶೀಲ್ ಕಚೇರಿಯ ಶಿರಸ್ತೇದಾರರಾದ ಅಕ್ತರ್ ಅಲಿ ಇವರಲ್ಲಿ ಮನವಿ ಪತ್ರವನ್ನು ಸಲ್ಲಿಸಲಾಯಿತು. ಈ ವೇಳೆ,ಅರ್ಚಕರಾದ ಅಯ್ಯಪ್ಪ ಸ್ವಾಮಿ ಹಂಚಿನಾಳ, ಆಕಾಶ ಹಿರೇಮಠ,ಶರಣಬಸವಯ್ಯ ಸ್ವಾಮಿ ಸೊಪ್ಪಿಮಠ, ಇದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ