ದಲಿತ ಸಾಹಿತ್ಯ ಪರಿಷತ್ ಪದಗ್ರಹಣ ಹಾಗೂ ಉಪನ್ಯಾಸ ಕಾರ್ಯಕ್ರಮ ಯಶಸ್ವಿ
ಮಸ್ಕಿ: ಪಟ್ಟಣದ ಗಚ್ಚಿನ ಹಿರೇ ಮಠದ ಸಭಾಂಗಣದಲ್ಲಿ ದಲಿತ ಸಾಹಿತ್ಯ ಪರಿಷತ್ತು ತಾಲೂಕ ಘಟಕ ಹಾಗೂ ದಲಿತ ಸಾಹಿತ್ಯ ಪರಿಷತ್ತು ತಾಲೂಕ ಯುವ ಘಟಕದ ಪದಾಧಿಕಾರಿಗಳ ಪದಗ್ರಹಣ ಹಾಗೂ ಉಪನ್ಯಾಸ ಕಾರ್ಯಕ್ರಮ ಸಾಯಂಕಾಲ ಜರುಗಿತು.
ಗಚ್ಚಿನ ಹಿರೇ ಮಠದ ಸಭಾಂಗಣದಲ್ಲಿ ಸಾಯಂಕಾಲ 6 ಗಂಟೆ ಸುಮಾರಿಗೆ ದಲಿತ ಸಾಹಿತ್ಯ ಪರಿಷತ್ತು ತಾಲೂಕ ಅಧ್ಯಕ್ಷರಾದ ನಾಗೇಶ್ ಜಂಗಮರಹಳ್ಳಿ ರವರ ನೇತೃತ್ವದ ಕಾರ್ಯಕ್ರಮದಲ್ಲಿ ಕಾರ್ಯಕ್ರಮದ ಸಾನಿಧ್ಯವನ್ನು ಶ್ರೀಶ್ರೀಶ್ರೀ ಷ.ಬ್ರ.ವರರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಗಚ್ಚಿನ ಹಿರೇ ಮಠ ಇವರು ವಹಿಸಿದ್ದರು.
ಕಾರ್ಯಕ್ರಮದ ಮೊದಲಿಗೆ ಹುಲುಗಪ್ಪ ಗೋನಾಳ ರವರು ಸಮತಾ ಗೀತೆಯನ್ನು ಹಾಡಿದರು.ವೀರೇಶ್ ಶಿಕ್ಷಕರು ವೇದಿಕೆಯ ಗಣ್ಯರನ್ನು ಸ್ವಾಗತಿಸಿದರು.
ಪ್ರಾಸ್ತಾವಿಕ ಭಾಷಣವನ್ನು ಹನುಮಂತ ನಾಯಕ ರವರು ನೆರವೇರಿಸಿದರು.ನಂತರ ಮಾಜಿ ಶಾಸಕರಾದ ಪ್ರತಾಪ್ ಗೌಡ ಪಾಟೀಲ್ ಮಸ್ಕಿ ಇವರ ನೇತೃತ್ವದಲ್ಲಿ ಗಣ್ಯರು ದೀಪ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕ್ರಾಂತಿ ಗೀತೆಯನ್ನು ಆರ್.ಸಿ.ಎಫ್ ಗಂಗಾಧರ ಹಿರಿಯ ಹೋರಾಟಗಾರರು ಇವರಿಂದ ಹಾಗೂ ಹಲಗೆ ಸಂಗಡಿಗರಿಂದ ಅಂಬೇಡ್ಕರ್ ಯಾರು ಅಂಬೇಡ್ಕರ ಎಂಬ ಹಾಡನ್ನು ವೇದಿಕೆಯ ಗಣ್ಯರ ಹಾಗೂ ಕಾರ್ಯಕ್ರಮದ ಪ್ರೇಕ್ಷಕರ ಮನಮುಟ್ಟುವಂತೆ ಅರ್ಥಗರ್ಭಿತವಾಗಿ ಹಾಡಿದರು.
ಹನುಮಂತಪ್ಪ ಮುದ್ದಾಪುರ ರವರ ನೇತೃತ್ವದಲ್ಲಿ ಸಂವಿಧಾನ ಶಿಲ್ಪಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರೆ ಗಣ್ಯರು ಪುಷ್ಪ ನಮನ ಸಲ್ಲಿಸಿದರು.
ಕಾರ್ಯಕ್ರಮದ ಉದ್ಘಾಟಕರಾದ ಪ್ರತಾಪಗೌಡ ಪಾಟೀಲ್ ರವರು ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರೂ ನಮ್ಮೆಲ್ಲರ ದಾರಿದೀಪ ಆಗಿ, ಪ್ರತಿಯೊಂದು ಕ್ಷೇತ್ರದಲ್ಲಿ ನಾವೆಲ್ಲರೂ ಕಡಿಮೆ ಇಲ್ಲ ಎಂಬುದನ್ನು ತೋರಿಸಿಕೊಟ್ಟವರು ಹೌದು ಸ್ವತಂತ್ರವಾಗಿ ಯಾವುದೇ ಕ್ಷೇತ್ರ ಇರಬಹುದು ಆ ಕ್ಷೇತ್ರದಲ್ಲಿ ಮುಂದುವರೆಯಲು ಸಹಕಾರಿಯಾದ ಅಂಬೇಡ್ಕರ್ ರವರ ಕಾರ್ಯ ಶ್ಲಾಘನೀಯ ಎಂದು ಕಾರ್ಯಕ್ರಮದ ಕುರಿತು ತಮ್ಮ ಹಿತನುಡಿಯನ್ನು ತಿಳಿಸಿದರು.
ನಂತರ ದಲಿತ ಸಾಹಿತ್ಯ ಪರಿಷತ್ ತಾಲೂಕ ಘಟಕ ಹಾಗೂ ತಾಲೂಕ ಯುವ ಘಟಕದ ಪದಾಧಿಕಾರಿಗಳ ಪದಗ್ರಹವನ್ನು ಸಂವಿಧಾನ ಪೂರ್ವ ಪೀಠಿಕೆಯನ್ನು ಹಾಡು ಹಾಡುವ ಮೂಲಕ ಪ್ರಮಾಣ ವಚನವನ್ನು ಸ್ವೀಕರಿಸಲಾಯಿತು.
ಕಾರ್ಯಕ್ರಮದ ಮುಖ್ಯ ಭಾಷಣಕಾರರಾದ ದಾನಪ್ಪ ಸಿ ನಿಲೋಗಲ್ ಇವರು ಶಿಕ್ಷಣ, ಸಂಘಟನೆ, ಹೋರಾಟ ಎಂಬ ಅಂಬೇಡ್ಕರ್ ಅವರ ಘೋಷ ವಾಕ್ಯದ ಶತಮಾನದ ಪ್ರಯುಕ್ತ ತಮ್ಮ ಅನಿಸಿಕೆಯಲ್ಲಿ ಬಹಳ ಅರ್ಥಗರ್ಭಿತವಾಗಿ ಭಾಷಣವನ್ನು ನೆರವೇರಿಸಿದರು.ದಲಿತ ಸಾಹಿತ್ಯ ಸವಾಲಿನ ಸಾಹಿತ್ಯ ಆಗಿರುತ್ತದೆ.
ಹಿಂದೂಗಳಿಗೆ ಸಂವಿಧಾನ ಬೇಕಿತ್ತು ಆಗ ನನ್ನನ್ನು ಕರೆಸಿದರು.ಎಂದು ಅಂದೇ ಬಾಬಾ ಸಾಹೇಬ್ ಅಂಬೇಡ್ಕರ್ ಅವರೂ ಹೇಳಿದರು.
ಮೂರು ರತ್ನಗಳಾದ ಶಿಕ್ಷಣ ವಿದ್ಯೆ ಎನ್ನುವುದು ಹುಲಿಯ ಹಾಲು ಇದ್ದಂತೆ,ಅದನ್ನು ಕುಡಿದವರು ಘರ್ಜಿಸಲೇಬೇಕು.ಒಂದು ದಿನಕ್ಕೆ 21 ತಾಸು ಓದುತ್ತಿದ್ದರು.
ಕೊಲಂಬಿಯಾ ವಿವಿ ಯಲ್ಲಿ 6ರಿಂದ 7ವರ್ಷ ಓದುವ ವ್ಯಾಸಂಗವನ್ನು 3 ವರ್ಷದಲ್ಲೇ ಕೋರ್ಸ್ ಮುಗಿಸುವರು.ಲಂಡನ್ ಮ್ಯೂಸಿಯಂ ನಲ್ಲಿ ಕಾರ್ಲಮಾರ್ಕ್ಸ್ ಮತ್ತು ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಇಬ್ಬರೇ ಮೂರ್ತಿಗಳು ಮಾತ್ರ ಇರುವದು.
ಮೀಸಲಾತಿಯಿಂದ ವಿದ್ಯೆ ಬುದ್ಧಿ ಕಲಿತೆವು,ಮತದಾನ ಮಾಡುವ ಅಧಿಕಾರಿ ಯಾರಿಗೆ ಕೊಡಬೇಕು ಎಂದಾಗ ಓದಿದವರಿಗೆ,ತೆರಿಗೆ ಪಾವತಿದಾರರ, ಭೂ ಮಾಲೀಕರಿಗೆ ನೀಡಿ ಎಂದು ಮೂರು ರೀತಿಯ ಒತ್ತಾಯ ಇದ್ದಂತಹ ಸಂದರ್ಭದಲ್ಲಿ ಭಾರತೀಯ ಪೌರತ್ವ ಪಡೆದ ಎಲ್ಲರೂ ಮತದಾನ ಮಾಡುವ ಹಕ್ಕನ್ನು ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕೊಡುಗೆ ಮಹತ್ವದ್ದು, ನಾನು ಕೊಟ್ಟಂತಹ ಸಂವಿಧಾನ ಎತ ವತ್ತಾಗಿ ಜಾರಿ ಮಾಡಬೇಕು ರಕ್ಷಣೆ ಮಾಡಬೇಕು ಎಂದು ತಮ್ಮ ಭಾಷಣಕ್ಕೆ ವಿರಾಮವಿಟ್ಟರು.
ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕೊನೆಯ ದಿನಗಳ ಸಂದರ್ಭ ಹಿಂಧೂವಾಗಿ ಹುಟ್ಟಿ ಹಿಂಧೂವಾಗಿ ಸಾಯಲಾರೆ ಎಂಬ ಸಂದೇಶ ಸಾರುವ ಸಿ ದಾನಪ್ಪ ನಿಲೊಗಲ್ ರಚಿತ ಹಾಡು
ಸತ್ಯ ಸಾರಿದ ನಮೋ ಬುದ್ಧನೇ ಎಂಬ ಕ್ರಾಂತಿಗೀತೆ ಆರ್.ಸಿ.ಎಫ್ ಗಂಗಾಧರ್ ಹಾಗೂ ಹಲಗೆ ಸಂಗಡಿದರು ಹಾಡಿದರು.
ದಲಿತರಷ್ಟೇ ದಲಿತ ಸಾಹಿತ್ಯದಲ್ಲಿ ದಲಿತಪರ ನಿಲುವನ್ನು ಅನುಸರಿಸುವ ಪಾಲನೆ ಮಾಡುವ ಅವರೆಲ್ಲರೂ ದಲಿತ ಸಾಹಿತ್ಯ ಪರಿಷತ್ ಪದಾಧಿಕಾರಿಗಳೇ.ಎಲ್ಲಾ ಸಮುದಾಯದ ಏಳಿಗೆಗೆ ಶ್ರಮಿಸಿದ ಮಹಾತ್ಮ.ಹೇಗೆ ಒಂದು ದೇವಸ್ಥಾನ ಕಟ್ಟಿದರೆ ಭಿಕ್ಷುಕರು ಹೆಚ್ಚಾಗುವರೋ ಹಾಗೆಯೇ ಒಂದು ಗ್ರಂಥಾಲಯ ಕಟ್ಟಿದರೆ ನೂರಾರು ವಿದ್ಯಾವಂತರು ಹುಟ್ಟುವರು.ಅಸ್ಪೃಶ್ಯತೆ ಹಾಗೂ ದಲಿತರ ಮೇಲಿನ ಶೋಷಣೆ ನಿಲ್ಲಲಿ.
ಅಮರೇಶ ವೆಂಕಟಾಪುರ ದಲಿತ ಸಾಹಿತ್ಯ ಪರಿಷತ್ ತಾಲೂಕ ಅಧ್ಯಕ್ಷರು ಲಿಂಗಸ್ಗೂರು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದ್ದಾರೆ.
ಕಾರ್ಯಕ್ರಮದ ಕುರಿತು ಮಾತನಾಡಿದವರು
ಗಚ್ಚಿನ ಹಿರೇ ಮಠದ ಶ್ರೀಗಳು,ದಲಿತ ಸಾಹಿತ್ಯ ಪರಿಷತ್ತು ಜಿಲ್ಲಾ ಅಧ್ಯಕ್ಷರಾದ ತಾಯರಾಜ್, ಪಂಪಾಪತಿ ಹೂಗಾರ ಶಿಕ್ಷಕರು,ಮಾಜಿ ಶಾಸಕರಾದ ಪ್ರತಾಪ್ ಗೌಡ ಪಾಟೀಲ್
ಇದೇ ಸಂದರ್ಭದಲ್ಲಿ ಉದ್ಘಾಟಕರಾಗಿ ಆಗಮಿಸಿದ ಮಾಜಿ ಶಾಸಕರಾದ ಪ್ರತಾಪ್ ಗೌಡ ಪಾಟೀಲ್,ಹನುಮಂತಪ್ಪ ಮುದ್ದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಮಸ್ಕಿ ಗ್ರಾಮೀಣ ಘಟಕ,ದಾನಪ್ಪ ಸಿ.ನಿಲೋಗಲ್ ಹಿರಿಯ ಸಾಹಿತಿ, ಗಂಗಾಧರ ಹಿರಿಯ ಹೋರಾಟಗಾರರು, ಪಾರ್ಥ ಸಿರವಾರ, ಬಾಲಸ್ವಾಮಿ ಹಂಪನಾಳ ಮುಖ್ಯ ಶಿಕ್ಷಕರು,ಪಂಪಾಪತಿ ಹೂಗಾರ, ಮೈಬೂಬ್ ಸಾಬ್ ಮುದ್ದಾಪುರ, ಅಬ್ದುಲ್ ಗನಿಸಾಬ್ ಹಿರಿಯ ಸಾಹಿತಿ,ಹನುಮಂತಪ್ಪ ಕಾಟಗಲ್,ಆನಂದ್ ಜೋಗಿನ್ ಸೇರಿದಂತೆ ದಲಿತ ಸಾಹಿತಿ ಆಸಕ್ತರು ಇದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ