ಸಮಾಜ ಸೇವಾ ರತ್ನ ರಾಷ್ಟ್ರ ಪ್ರಶಸ್ತಿಗೆ ಶಾಂತಪ್ಪ ಸೋಮನಮರಡಿ ನೇಮಕ

 

ಮಸ್ಕಿ :ಇದೇ ಜುಲೈ 27ರಂದು ದೆಹಲಿ ಕರ್ನಾಟಕ ಸಂಘ ನವದೆಹಲಿಯಲ್ಲಿ ಸ್ನೇಹ ಯುವ ಸಾಂಸ್ಕೃತಿಕ ಸಂಘ (ರಿ)ಬೆಂಗಳೂರು ಹಾಗೂ ಭಾರತೀಯ ಕಲೆ ಸಾಹಿತ್ಯ ಸಾಂಸ್ಕೃತಿಕ ಸಂಘಟನಾ ಸಂಸ್ಥೆ ಇವರುಗಳ ನೇತೃತ್ವದಲ್ಲಿ ಆ ಯೋಜನೆಗೊಂಡ ಕನ್ನಡ ನಾಡು ನುಡಿ ಉತ್ಸವ 2024ರ ಕಾರ್ಯಕ್ರಮದಲ್ಲಿ ಶ್ರೀ ಶಾಂತಪ್ಪ ಸೋಮನಮರಡಿ ಇವರಿಗೆ ಇವರು ನೀಡಿದಂತಹ ಹಲವಾರು ಸಮಾಜ ಸೇವೆಗಳ ಸಮಾಜ ಸೇವಾ ಕಾರ್ಯಗಳನ್ನು "ಕಸದಲ್ಲಿ ರಸ ಹುಡಿಕಿ" ಎಂಬಂತೆ ಇವರು ಮಾಡಿದಂತಹ ಅಮೋಘವಾದ ಸಮಾಜ ಸೇವೆಯನ್ನು ಎಲೆ ಮರೇಯ ಬಳ್ಳಿಯಂತೆ ಇರುವ ಇವರನ್ನು ಮತ್ತು ಇವರು ಮಾಡಿರುವ ಸಮಾಜ ಸೇವೆಯನ್ನು ಗುರುತಿಸಿದ್ದಾರೆ.

 ಶಾಂತಪ್ಪನವರು 1995 ರಿಂದ 1996 ರವರೆಗೆ ಹಿರೇನಗನೂರು ಗ್ರಾಮದಲ್ಲಿ ಮಹಿಳಾ ಸ್ವಸಹಾಯ ಸಂಘದ ಸದಸ್ಯರುಗಳಿಗೆ ಅಕ್ಷರ ಅಭ್ಯಾಸ ಮಾಡಿಸುವುದರಲ್ಲಿ ಸ್ವಯಂಸೇವಕರಾಗಿ ಪ್ರಾರಂಭವಾದ ಸೇವೆ ನಂತರ 1996 ರಿಂದ 1999 ರವರೆಗೆ ಬಳ್ಳಾರಿ ಧರ್ಮ ಪ್ರಾಂತ್ಯದ ಯುವ ಜನರ ಪ್ರತಿನಿಧಿಯಾಗಿ ಸೇವೆ ಮಾಡಿ ಯುವಕ ಯುವತಿಯರಿಗೆ ಸ್ಥಳೀಯ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಲು ಪ್ರೋತ್ಸಾಹಿಸಿ,ಆ ಸಮಯದಲ್ಲಿ ಕೌಶಲ್ಯ ಆಧಾರಿತವಾಗಿ ಮಾನ್ವಿ,ಟಿಬಿ ಡ್ಯಾಮ ಹಾಗೂ ಹಿರೇನಗನೂರು ಗ್ರಾಮದಿಂದ ಯುವಕರಿಗೆ ಯುವತಿಯರಿಗೆ ಗಣಕಯಂತ್ರದ(ಬೇಸಿಕ್ ಕಂಪ್ಯೂಟರ್) ಪಡೆಯಲು ಪ್ರೇರಣೆಯಾದರು.

1999 ರಿಂದ 2000 ರಲ್ಲಿ ಗ್ರಾಮ್ಸ್ ಸಂಸ್ಥೆಯಲ್ಲಿ ಕೇಂದ್ರ ಸರ್ಕಾರದ ಬಾಲಕಾರ್ಮಿಕ ವಿಶೇಷ ಶಾಲೆಯಲ್ಲಿ 50 ಮಕ್ಕಳಿಗೆ ಬೋಧಕರಾಗಿ ಹಾಗೂ ಹೊಲಿಗೆ ತರಬೇತಿ ಮಕ್ಕಳಿಗೆ ಪ್ರೋತ್ಸಾಹಿಯಾಗಿ ಮಕ್ಕಳನ್ನು ಬೆಳೆಸಿದರು. 

2000 ದಿಂದ 2004ರವರೆಗೆ ಮಾನ್ವಿ ತಾಲೂಕಿನ ಜನೋದಯ ಸಂಸ್ಥೆಯಲ್ಲಿ ಸ್ವಶಕ್ತಿ (ಕರ್ಮಣಿ) ಯೋಜನೆಯಲ್ಲಿ ಸಾಮಾನ್ಯ ಕಾರ್ಯಕರ್ತರಾಗಿ ಮಹಿಳಾ ಸಬಲೀಕರಣದಲ್ಲಿ 20 ಮಹಿಳಾ ಸ್ವಶಕ್ತಿ ಸ್ವಸಹಾಯ ಸಂಘದ ಸದಸ್ಯರುಗಳಿಗೆ ಆದಾಯ ಉತ್ಪಾದನೆ ಚಟುವಟಿಕೆ,ನಡೆಸುವ ಗುಡಿ ಕೈಗಾರಿಕೆ ಹಾಗೂ ಸಾಕ್ಷರತೆ ತರಬೇತಿಗಳನ್ನು,ಜಾಗೃತಿ ಕಾರ್ಯಕ್ರಮಗಳನ್ನು ಮಹಿಳಾ ಮಣಿಗಳಿಗೆ ನೀಡಿ ಉತ್ತೇಜಿಸಿದ್ದಾರೆ ಜೊತೆಗೆ ಮಾನ್ವಿ ತಾಲೂಕಿನಲ್ಲಿ ದೇವದಾಸಿ ಮಹಿಳೆಯರನ್ನು ದೇವದಾಸಿ ಪದ್ಧತಿಯಿಂದ ಹೊರಬರಲು ಬೀದಿ ನಾಟಕದ ಮುಖಾಂತರ ಮಾದರಿಯಾಗಿದ್ದಾರೆ. 

2004 ರಿಂದ 2008ರ ವರೆಗೆ ಸಮೂಹ ಸಂಸ್ಥೆಯ ಅಂಗವಾದ ಸಮೂಹ ಸಂರಕ್ಷ ನಂಬದುಕು ಕಾರ್ಯಕ್ರಮದಲ್ಲಿ ಎಚ್.ಐ.ವಿ ಅರಿವು ಜಾಗೃತಿ ಬೀದಿ ನಾಟಕಗಳ ಮುಖಾಂತರ ಗ್ರಾಮಗಳಿಗೆ ಭೇಟಿ ಮಾಡಿ,ಗ್ರಾಮಗಳಲ್ಲಿ ವಾಸ್ತವ ಮಾಡಿ,ಮನೆ ಮನೆಗೆ ಭೇಟಿ ಮಾಡಿ ಮಹಿಳೆಯರು ಯುವಕರು ಪ್ರತಿಯೊಬ್ಬ ನಾಗರಿಕರಿಗೂ ಎಚ್ಐವಿ ಏಡ್ಸ್ ಕುರಿತು ಅರಿವು ನೀಡಿದರು.ಸೋಂಕಿನಿಂದ ಜೀವಿಸುತ್ತಿರುವ ಸೋಂಕಿತರಿಗೆ ಆರೈಕೆ- ಬೆಂಬಲ,ತಾರತಮ್ಯ ಅನೇಕ ಎಚ್.ಐ.ವಿ ಏಡ್ಸ್ ಸೋಂಕಿತರ ಜೀವನಾಡಿಯಾಗಿ ಮಾರ್ಗದರ್ಶಿಯಾಗಿ ಆಪ್ತ ಸಮಾಲೋಚಕರಾಗಿ ಪೂರ್ವ ಚಿಕಿತ್ಸಾ ಮಾಹಿತಿಯಲ್ಲಿ ಸೇವೆಯಲ್ಲಿದ್ದಾರೆ. 

2008ರಿಂದ 2013ರ ವರೆಗೆ ಬಳ್ಳಾರಿಯ ಬಿಡಿಡಿಎಸ್ ಸಂಸ್ಥೆಯಲ್ಲಿ ಮಹಿಳಾ ಸಬಲೀಕರಣದಲ್ಲಿ ಹಕ್ಕು ಆಧಾರಿತ ಸೇವೆ,ಕಾನೂನು ಅರಿವು ತಿಳುವಳಿಕೆ,ಸ್ಥಳೀಯ ಮಟ್ಟದಲ್ಲಿ ಮಹಿಳಾ ನಾಯಕತ್ವ ಹಾಗೂ ಲಿಂಗ ಸೂಕ್ಷ್ಮತೆಯ ಬಗ್ಗೆ ಈ ರೀತಿಯಾಗಿ ಮಹಿಳಾ ಸೇವೆಯಲ್ಲಿ ತಮ್ಮದೇ ಆದಂತಹ ರೀತಿಯಲ್ಲಿ ಬಳ್ಳಾರಿ,ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಸೇವೆಯನ್ನು ಸಲ್ಲಿಸಿದ್ದಾರೆ.

2013 ರಿಂದ 2019 ರವರೆಗೆ ಮಸ್ಕಿಯ ಅಮರ ಪ್ರೇಮ ಸ್ಪಂದನ ಸಂಸ್ಥೆಯಲ್ಲಿ ತಾಲೂಕಿನ ಹಳ್ಳಿಗಳಲ್ಲಿ ತಂದೆ ತಾಯಿಯನ್ನು ಕಳೆದುಕೊಂಡಂತಹ, ದಿಕ್ಕಿಲ್ಲದಂತಹ ದಲಿತರ,ದಮನಿತರ,ಶೋಷಿತರ ಮಕ್ಕಳನ್ನು ಸಹಭಾಗಿತ್ವ ಸಂಸ್ಥೆಗಳೊಂದಿಗೆ ಆರ್ಥಿಕ ನೆರವು ಮುಖಾಂತರ ವಿದ್ಯಾಭ್ಯಾಸ ಕೊಡಿಸುವುದು. 

ಎಚ್ಎಬಿ ಏಡ್ಸ್ ಟಿವಿ ಹಾಗೂ ಕ್ಯಾನ್ಸರ್ ಕಾಯಿಲೆಗಳಿಂದ ಬಳಲುತ್ತಿರುವ ಸೋಂಕಿತ ರೋಗಿಗಳಿಗೆ ಸಾಂತ್ವನ ನೀಡುವ ನಿಟ್ಟಿನಲ್ಲಿ ಸೇವೆಯನ್ನು ನೀಡಿದ್ದಾರೆ.

2019 ರಿಂದ 2022 ರ ವರೆಗೆ ಬಳ್ಳಾರಿಯ ಬಿ.ಡಿ.ಡಿ.ಎಸ್ ಸಂಸ್ಥೆಯಿಂದ ಕ್ಯಾನ್ಸರ್ ಕೇರ್ ಕ್ಯಾಂಪಿಯನ್ ಅಡಿಯಲ್ಲಿ ಕೊಪ್ಪಳ,ರಾಯಚೂರು ಹಾಗೂ ಬಳ್ಳಾರಿ ಜಿಲ್ಲೆಗಳ ಶಾಲಾ ಕಾಲೇಜುಗಳಲ್ಲಿ ಸಮಾಜ ಸೇವಾ ಸಂಸ್ಥೆಗಳ ಜೊತೆಗೂಡಿ ಜಾಗೃತಿ ಅಭಿಯಾನಗಳನ್ನು ನೀಡಿ ಕ್ಯಾನ್ಸರ್ ರೋಗಿಗಳಿಂದ ಬಳಲುತ್ತಿರುವ ರೋಗಿಗಳಿಗೆ ಸಾಂತ್ವಾನ,ಮನೆಗಳಿಗೆ ಭೇಟಿ,ಸೂಕ್ತ ಚಿಕಿತ್ಸಾ ಕೇಂದ್ರಗಳ ಮಾಹಿತಿಗಳನ್ನು ಹಾಗೂ ಸರಕಾರದಿಂದ ದೊರೆಯುವಂತಹ ಸೌಲಭ್ಯಗಳನ್ನು ಪಡೆದುಕೊಳ್ಳಲು ಮಾಹಿತಿಯನ್ನು ನೀಡುವುದು ಸರಿಸುಮಾರು ಕ್ಯಾನ್ಸರ್ ರೋಗಿಗಳನ್ನು ಕ್ಯಾನ್ಸರ್ ಕಾಯಿಲೆಯಿಂದ ಪಾರು ಮಾಡಿದ್ದಾರೆ. 

ಪ್ರಸ್ತುತ ಈಗ ಇವರು ರೈತರಿಗೆ ಸಾವಯವ ಕೃಷಿ ಬೇಸಾಯದೆಡೆಗೆ ಕೊಂಡುಯ್ಯುವ ನಿಟ್ಟಿನಲ್ಲಿ ಸಮಾಜ ಸೇವೆಯನ್ನು ಮಾಡುತ್ತಿದ್ದಾರೆ.

ಇಂತಹ ಒಳ್ಳೆಯ ಸಮಾಜ ಸೇವೆಯನ್ನು ಮಾಡಿರುವಂತಹ ಸರ್ವ ಸಮಾಜದ ಸೇವಕನಿಗೆ ಈ ಸಮಾಜ ಸೇವಾ ರತ್ನ ರಾಷ್ಟ್ರ ಪ್ರಶಸ್ತಿ ಸಿಕ್ಕಿರುವುದು ತುಂಬಾ ಸಂತೋಷದಾಯಕವಾಗಿದೆ ಎಂದು ಶಾಂತಪ್ಪ ಸೋಮನಮರಡಿ ಸಮಾಜ ಸೇವಕ ಪತ್ರಿಕೆಗೆ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದ್ದಾರೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ