ಭದ್ರಾ ಭರ್ತಿಗೆ 5 ಅಡಿ 4 ಅಂಗುಲ ಮಾತ್ರ ಬಾಕಿ!

 


ದಾವಣಗೆರೆ:ಮಲೆನಾಡು ಭಾಗದಲ್ಲಿ ಆಗುತ್ತಿರುವ ಭಾರೀ ಮಳೆಯ ಕಾರಣಕ್ಕೆ ಭದ್ರಾ ಜಲಾಶಯಕ್ಕೆ ಭರಪೂರ ನೀರು ಹರಿದು ಬರುತ್ತಿದ್ದು ಇಂದು ಬೆಳಗಿನ ಜಾವ 6 ಗಂಟೆ ವೇಳೆಗೆ ಜಲಾಶಯದ ನೀರಿನ ಮಟ್ಟ 180 ಅಡಿ 7 ತಲುಪಿದೆ. 186 ಎತ್ತರದ ಜಲಾಶಯಕ್ಕೆ ಇನ್ನು 5 ಅಡಿ 4 ಅಂಗುಲ ನೀರು ಬಂದರೆ ಭರ್ತಿ ಆಗಲಿದೆ. ನಿನ್ನೆ 61.8 ಟಿಎಂಸಿ ಇದ್ದ ನೀರಿನ ಪ್ರಮಾಣ ಇಂದು 64.87 ಟಿಎಂಸಿ ಆಗಿದೆ. ಒಂದೇ ದಿನ 3 ಟಿಎಂಸಿ ನೀರು ಜಲಾಶಯಕ್ಕೆ ಬಂದು ಸೇರಿದೆ.
ಸದ್ಯ ಒಳ ಹರಿವು 35,557  ಕ್ಯೂಸೆಕ್ ನೀರು ಹಾರಿದು ಬರುತ್ತಿದೆ. ಇನ್ನು ಮೂರು ದಿನಗಳ ಕಾಲ ಇದೇ ರೀತಿ ಮಳೆ ಸುರಿಯುವ ನಿರೀಕ್ಷೆ ಇದ್ದು ಈ ಲೆಕ್ಕಾಚಾರದಲ್ಲಿ ಇಂದು ಜಲಾಶಯ ಭರ್ತಿ ಆಗಲಿದೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ