ಬೆಲೆ ಏರಿಕೆ ಖಂಡಿಸಿ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ
ಮಸ್ಕಿ ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಪೆಟ್ರೋಲ್ ಡೀಸೆಲ್, ಆಹಾರ ವಸ್ತುಗಳ ಬೆಲೆ ಏರಿಕೆ ಖಂಡಿಸಿ,ರೈತ ಮತ್ತು ಕಾರ್ಮಿಕ ವಿರೋಧಿ ಕಾನೂನುಗಳು ರಾಜ್ಯ ಸರ್ಕಾರ ಕೂಡಲೇ ವಾಪಸ್ ಪಡೆಯಬೇಕು ಹಾಗೂ ಅಗತ್ಯ ವಸ್ತುಗಳ ಬೆಲೆ, ಪೆಟ್ರೋಲ್, ಡೀಸೆಲ್ ಮತ್ತು ಸಿಲಿಂಡರ್ ಗ್ಯಾಸ್ ದರವನ್ನು ಇಳಿಸಲು ಆಗ್ರಹಿಸಿ ರಾಜ್ಯಾದ್ಯಂತ ಪ್ರತಿಭಟನೆ ಮಾಡಲಾಗುತ್ತದೆ ಎಂದು ಸಿಪಿಐಎಂಎಲ್ ಲಿಬರೇಷನ್ ಸಂಘಟನೆಯು ತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿದರು.
ಪೆಟ್ರೋಲ್ ಡೀಸೆಲ್ ದರ ಏರಿಕೆ ಯಿಂದ ಅದರ ಪರಿಣಾಮವಾಗಿ ದಿನಬಳಕೆಯ ಆಹಾರ ವಸ್ತುಗಳ ದರ ಏರಿಕೆಯ ಪರಿಣಾಮವಾಗಿ ಆಹಾರ ಹಣದುಬ್ಬರವು ಜುಲೈನಲ್ಲಿ ಶೇಕಡ 11.5 ರಷ್ಟನ್ನು ತಲುಪಿತ್ತು. ಅಗತ್ಯ ವಸ್ತುಗಳ ದರ ಏರಿಕೆಯನ್ನು ನಿಯಂತ್ರಿಸಲು ರಾಜ್ಯ ಸರ್ಕಾರವು ಕೆಲವು ದಿನಗಳಿಂದ ಈಚೆಗೆ ಹಲವು ಕ್ರಮಗಳನ್ನು ಕೈಗೊಳ್ಳದೆ. ಮುಂದಿನ ಕೆಲವು ತಿಂಗಳುಗಳವರೆಗೂ ಆಹಾರ ವಸ್ತುಗಳ ದರ ಏರುಗತಿಯಲ್ಲೇ ಸಾಗುವ ಸಾಧ್ಯತೆ ಇದೆ ಎಂಬ ಮುನ್ಸೂಚನೆಗಳಿವೆ. ಮುಂಗಾರು ಮಳೆಯ ಕಣ್ಣಾಮುಚ್ಚಾಲೆ ಮತ್ತು ಎಲ್ ನಿನೊ ಚಂಡಮಾರುತದ ಸಂಭವನೀಯ ದುಷ್ಪರಿಣಾಮಗಳಿಂದ ಮುಂಗಾರು ಮತ್ತು ಹಿಂಗಾರಿನ ಬೆಳೆಗಳು ವಿಫಲವಾಗುವ ಸಂಭವವಿದೆ ಎಂದು ಅಂದಾಜಿಸಲಾಗಿದೆ. ಈ ಬೆಳವಣಿಗೆಯು ಅಗತ್ಯ ವಸ್ತುಗಳ ದರ ಏರಿಕೆಗೆ ಕಾರಣವಾಗಲಿದೆ. ದರ ಏರಿಕೆಯನ್ನು ನಿಯಂತ್ರಿಸದೇ ಇದ್ದರೆ ಮುಂಬರುವ ಕೆಲವು ರಾಜ್ಯಗಳ ವಿಧಾನಸಭಾ ಚುನಾವಣೆ ಮತ್ತು 2024ರಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ ತಮಗೆ ಹಿನ್ನಡೆ ಉಂಟಾಗಬಹುದು ಎಂಬ ಆತಂಕ ಆಡಳಿತಾರೂಢ ರಾಜ್ಯ ಸರ್ಕಾರಕ್ಕೆ ಕಾಡುತ್ತಿದೆ. ಈ ಕಾರಣಕ್ಕಾಗಿಯೇ ಬೆಲೆ ಏರಿಕೆ ನಿಯಂತ್ರಣವನ್ನು ಅತ್ಯಂತ ತುರ್ತು ಕೆಲಸ ಎಂದು ಭಾವಿಸಿ ಸರ್ಕಾರವು ಕಾರ್ಯಪ್ರವೃತ್ತವಾಗಿದೆ. ಇಂತಹ ಬಹುತೇಕ ಕ್ರಮಗಳು ಮಾರುಕಟ್ಟೆ ಮಧ್ಯಪ್ರವೇಶದ ಮಾದರಿಯಲ್ಲಿದ್ದು, ಅಗತ್ಯ ಇರುವಷ್ಟು ಆಹಾರ ವಸ್ತುಗಳ ಪೂರೈಕೆ ಮತ್ತು ಅವುಗಳ ಬೆಲೆ ನಿಯಂತ್ರಣಕ್ಕೆ ಪೂರಕವಾಗಿವೆ. ಈ ಪ್ರಕ್ರಿಯೆಯಲ್ಲಿ ಸರ್ಕಾರವು ಕೈಗೊಂಡಿರುವ ಬಹುತೇಕ ಕ್ರಮಗಳು ಆಹಾರ ವಸ್ತುಗಳನ್ನು ಉತ್ಪಾದಿಸುವ ರೈತರ ಹಿತಾಸಕ್ತಿಗೆ ಧಕ್ಕೆ ಉಂಟುಮಾಡುವ ಸಾಧ್ಯತೆ ಇದೆ.
ಈರುಳ್ಳಿ ರಫ್ತಿನ ಮೇಲೆ ಶೇಕಡ 40ರಷ್ಟು ಸುಂಕ ವಿಧಿಸಿರುವ ಕೇಂದ್ರ ಸರ್ಕಾರವು ಅದನ್ನು ಡಿಸೆಂಬರ್‌ವರೆಗೂ ಮುಂದುವರಿಸಲಿದೆ. ಬಾಸ್ಮತಿಯೇತರ ಅಕ್ಕಿ ರಫ್ತನ್ನು ನಿಷೇಧಿಸಲಾಗಿದೆ. ಬಾಸ್ಮತಿ ಹೆಸರಿನಲ್ಲಿ ಬಾಸ್ಮತಿಯೇತರ ಬಿಳಿ ಅಕ್ಕಿ ರಫ್ತಾಗುವುದನ್ನು ತಡೆಯಲು ಕ್ರಮ ಕೈಗೊಳ್ಳಲಾಗಿದೆ. ಬೇಳೆ ಕಾಳುಗಳು ಮತ್ತು ಗೋಧಿಯ ದಾಸ್ತಾನಿನ ಮೇಲೆ ಜೂನ್‌ನಿಂದಲೇ ಮಿತಿ ಹೇರಲಾಗಿದೆ. ಈರುಳ್ಳಿಯ ಕಾಪು ದಾಸ್ತಾನಿನ ಪ್ರಮಾಣವನ್ನೂ ಹೆಚ್ಚಿಸಲಾಗಿದೆ. ಈರುಳ್ಳಿ ಬೆಲೆ ಏರಬಹುದು ಎಂಬ ವರದಿಗಳ ಹಿನ್ನೆಲೆಯಲ್ಲಿ ಖುಷಿಯಲ್ಲಿದ್ದ ಈರುಳ್ಳಿ ಬೆಳೆಗಾರರು ಮತ್ತು ವರ್ತಕರು, ಸರ್ಕಾರದ ಕ್ರಮಗಳಿಂದ ದರ ಕುಸಿಯಬಹುದು ಎಂಬ ಭೀತಿಯಲ್ಲಿದ್ದಾರೆ. ಈ ಕಾರಣದಿದಂದಾಗಿಯೇ ಸರ್ಕಾರದ ತೀರ್ಮಾನಗಳ ವಿರುದ್ಧ ಪ್ರತಿಭಟನೆಯನ್ನೂ ನಡೆಸಿದ್ದಾರೆ. ಕುಚ್ಚಿಲಕ್ಕಿಯ ರಫ್ತಿನ ಮೇಲೆ ಶೇ 20ರಷ್ಟು ರಫ್ತು ತೆರಿಗೆ ಹೇರಲಾಗಿದೆ. 2021–22ರಲ್ಲಿ ಅಕ್ಕಿ ರಫ್ತಿನಲ್ಲಿ ಶೇ 30ರಷ್ಟು ಕುಚ್ಚಿಲಕ್ಕಿಯೇ ಇತ್ತು. ಇದೇ ಅವಧಿಯಲ್ಲಿ ಬಾಸ್ಮತಿಯೇತರ ಬಿಳಿ ಅಕ್ಕಿಯ ರಫ್ತಿನ ಪ್ರಮಾಣವು ಶೇ 30ರಷ್ಟಿತ್ತು. ದೇಶದ ಮಾರುಕಟ್ಟೆಯಲ್ಲಿ ಅಕ್ಕಿಯ ಕೊರತೆ ಉದ್ಭವಿಸುವುದನ್ನು ತಡೆಯುವುದು ಮತ್ತು ಬೆಲೆ ಏರಿಕೆ ನಿಯಂತ್ರಿಸುವುದು ಈ ಕ್ರಮಗಳ ಹಿಂದಿನ ಉದ್ದೇಶ.
ಅಗತ್ಯ ವಸ್ತುಗಳ ಬೆಲೆ ನಿಯಂತ್ರಣಕ್ಕಾಗಿಯೇ ಕೈಗೊಂಡಿರುವ ಈ ಕ್ರಮಗಳು ರೈತರ ಹಿತಾಸಕ್ತಿಗೆ ಧಕ್ಕೆಯುಂಟು ಮಾಡಲಿವೆ ಮತ್ತು ಅವರ ಆದಾಯ ಕುಸಿತಕ್ಕೂ ಕಾರಣವಾಗುವ ಅಪಾಯವಿದೆ. ಕೃಷಿ ಅತ್ಯಂತ ಕಡಿಮೆ ಲಾಭವಿರುವ ವೃತ್ತಿ. ಬೆಳೆ ನಷ್ಟದ ಸಂದರ್ಭದಲ್ಲಿ ರೈತರಿಗೆ ಸರ್ಕಾರದ ಕಡೆಯಿಂದ ಹೆಚ್ಚಿನ ನೆರವು ದೊರಕುತ್ತಿಲ್ಲ. ಸಾಮಾನ್ಯವಾಗಿ ರೈತರು ತಮ್ಮ ಉತ್ಪನ್ನಗಳಿಗೆ ಹೆಚ್ಚಿನ ಬೆಲೆಯನ್ನು ಪಡೆಯುತ್ತಿಲ್ಲ. ಲಾಭದ ಬಹುಪಾಲು ಮಧ್ಯವರ್ತಿಗಳ ಪಾಲಾಗುತ್ತಿದೆ. ಸಂಘಟಿತರಾಗಿ ಸರ್ಕಾರದ ವಿರುದ್ಧ ಅಭಿಪ್ರಾಯ ರೂಪಿಸಬಲ್ಲ ಶಕ್ತಿ ಹೊಂದಿರುವ ಗ್ರಾಹಕರಿಗೆ ಬೆಲೆ ಏರಿಕೆಯಿಂದ ಆಗುವ ತೊಂದರೆಗಳ ಕುರಿತು ಸರ್ಕಾರ ಕಾಳಜಿ ತೋರಿದೆ. ಆದರೆ, ಕೃತಕವಾಗಿ ಕೃಷಿ ಉತ್ಪನ್ನಗಳ ಬೆಲೆ ಕುಸಿಯುವಂತೆ ಮಾಡಿದಾಗ ರೈತರು ನಷ್ಟ ಅನುಭವಿಸುತ್ತಾರೆ ಎಂಬುದು ವಾಸ್ತವ. ಈ ಬಗೆಯ ನಿರ್ಬಂಧಗಳು ಗ್ರಾಮೀಣ ಪ್ರದೇಶದ ಬೇಡಿಕೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತವೆ. ಗ್ರಾಮೀಣ ಪ್ರದೇಶದಲ್ಲಿನ ಬೇಡಿಕೆಯು ಕೈಗಾರಿಕೆ ಮತ್ತು ವ್ಯಾಪಾರ ವಹಿವಾಟಿನ ಹಲವು ವಿಭಾಗಗಳಿಗೆ ಪೂರಕವಾದುದು. ಈ ನಿರ್ಬಂಧಗಳಿಂದ ಆ ಕ್ಷೇತ್ರಗಳ ಮೇಲೂ ದುಷ್ಪರಿಣಾಮ ಆಗುತ್ತದೆ. ಈ ಬಾರಿ ಬೆಲೆ ನಿಯಂತ್ರಣಕ್ಕೆ ಸರ್ಕಾರ ಕೈಗೊಂಡಿರುವ ಕ್ರಮಗಳು ಗ್ರಾಹಕರಿಗಷ್ಟೇ ಅನುಕೂಲಕರವಾಗಿವೆ. ಇಂತಹ ವಿಚಾರಗಳಲ್ಲಿ ರೈತರು ಮತ್ತು ಗ್ರಾಹಕರು ಇಬ್ಬರ ಹಿತವನ್ನೂ ರಕ್ಷಿಸುವಂತಹ ಸಮತೋಲನದ ನಿರ್ಧಾರಗಳನ್ನು ಕೈಗೊಳ್ಳುವುದು ಅಗತ್ಯ. ನಿರ್ಬಂಧಗಳನ್ನು ಹೇರುವ ಮೂಲಕ ರಫ್ತು ಒಪ್ಪಂದಗಳನ್ನು ಮುರಿಯುವುದು ಕೂಡ ‘ನಂಬಿಕೆಯ ರಫ್ತುದಾರ’ ಎಂಬ ದೇಶದ ವಿಶ್ವಾಸಾರ್ಹತೆಗೆ ಧಕ್ಕೆ ಉಂಟುಮಾಡುವ ಸಾಧ್ಯತೆ ಇದೆ. ಈ ಬಗ್ಗೆಯೂ ಎಚ್ಚರಿಕೆ ಅಗತ್ಯ.
ಆಡಳಿತಾರೂಢ ಕಾಂಗ್ರೆಸ್ ನೇತೃತ್ವದ ಸರ್ಕಾರ ರಾಜ್ಯದ ಬಡ ಮತ್ತು ಮಧ್ಯಮ ವರ್ಗದ ಜನರ ಮೇಲೆ ಪರೋಕ್ಷವಾಗಿ ಯುದ್ಧ ಸಾರಿದೆ. ರಾಜ್ಯದ ಜನರಿಗೆ ತೆರಿಗೆಯ ಬರೆ ಹಾಕುವ ಮೂಲಕ ಉಡುಗೊರೆ ನೀಡಿರುವುದು ಜನದ್ರೋಹಿ ನೀತಿಯಾಗಿದೆ. ಈ ನೀತಿಯನ್ನು ಸಿಪಿಐ(ಎಂಎಲ್) ಲಿಬರೇಶನ್ ಬಲವಾಗಿ ಖಂಡಿಸುತ್ತದೆ.
ಜಿಎಸ್‌ಟಿ ವಿಧಿಸಿರುವ ಈ ಮೇಲಿನ ಅಗತ್ಯ ವಸ್ತುಗಳನ್ನು ಹೆಚ್ಚಿನ ಮಟ್ಟದಲ್ಲಿ ತಳಮಟ್ಟ-ಮಧ್ಯಮ ವರ್ಗದವರೇ ಬಳಕೆ ಮಾಡುವುದರಿಂದ ಅದರ ಹೊರೆ ಈ ವರ್ಗಗಳ ಮೇಲೆ ಬೀಳುತ್ತದೆ.
ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಆದಾಯವು ವಾರ್ಷಿಕ ಆಧಾರದ ಹೀಗೆ ಲಕ್ಷಾಂತರ ಕೋಟಿ ರೂಪಾಯಿ ಹಣ ಜಿಎಸ್‌ಟಿ ಮೂಲಕ ಸಂಗ್ರಹವಾಗುತ್ತಿದ್ದರೂ, ಅದನ್ನು ದೇಶದ ಅಭಿವೃದ್ಧಿ ಮತ್ತು ಕಲ್ಯಾಣ ಕಾರ್ಯಕ್ರಮಗಳಿಗೆ ಬಳಸದೇ ಲೂಟಿ ಹೊಡೆಯಲಾಗುತ್ತಿದೆ. ದೇಶದ ಹೆಸರಿನಲ್ಲಿ ಇತ್ತ ಬಡವರು, ಜನಸಾಮಾನ್ಯರಿಂದ ಹೆಚ್ಚೆಚ್ಚು ತೆರಿಗೆ ವಸೂಲಿ ಮಾಡುವುದು, ಅತ್ತ ಕಾರ್ಪೊರೇಟ್ ಉದ್ಯಮಿಗಳ ತೆರಿಗೆ ಮನ್ನಾ ಮಾಡುವುದು ಕೇಂದ್ರ ಸರ್ಕಾರದ ಜನವಿರೋಧಿ ಮತ್ತು ತಾರತಮ್ಯ ಆಡಳಿತಕ್ಕೆ ಜ್ವಲಂತ ನಿದರ್ಶನವಾಗಿದೆ.
ವಿಪರೀತ ಬೆಲೆ ಏರಿಕೆ, ಗಗನಕ್ಕೇರುತ್ತಿರುವ ನಿರುದ್ಯೋಗ, ಕೆಳಕ್ಕೆ ಉರುಳುತ್ತಿರುವ ರೂಪಾಯಿ. ಅಭೂತಪೂರ್ವ ವ್ಯಾಪಾರ ಕೊರತೆ
ಮತ್ತು ಜಿಡಿಪಿ ಮುಗ್ಗರಿಸುತ್ತಿರುವ ಸನ್ನಿವೇಶದಲ್ಲಿ ಜನರ ಜೀವನೋಪಾಯದ ಮೇಲೆ ಈ ಕ್ರೂರ ಪ್ರಹಾರ ನಡೆಸಲಾಗಿದೆ. ಈ ಏರಿಕೆಗಳು ಜನರ ಜೀವನೋಪಾಯವನ್ನು ಮತ್ತಷ್ಟು ಹಾಳು ಮಾಡುತ್ತವೆ. ಸರ್ಕಾರದ ಈ ನೀತಿ ಬಡ, ಮಧ್ಯಮ ವರ್ಗದವರ ಬದುಕುವ ಹಕ್ಕನ್ನು ಬಲವಂತವಾಗಿ ಕಿತ್ತುಕೊಳ್ಳುವುದಾಗಿದೆ. ಅಲ್ಲದೇ ಬಡವರ ಮೇಲೆ ಹೆಚ್ಚು ತೆರಿಗೆ ಹೇರಿ, ಶ್ರೀಮಂತರ ತೆರಿಗೆ ಮತ್ತು ಸಾಲ ಮನ್ನಾ ಮಾಡುವ ಹುನ್ನಾರದ
ಭಾಗವಾಗಿದೆ. ಈ ಕೂಡಲೇ ಜನದ್ರೋಹಿ, ಆವೈಜ್ಞಾನಿಕ ಮತ್ತು ಸಂವಿಧಾನ ವಿರೋಧಿ ನೀತಿಯನ್ನು ವಾಪಸ್ ಪಡೆಯಬೇಕು ಎಂದು ರಾಜ್ಯಾದ್ಯಂತ ಪ್ರತಿಭಟನೆ ಮೂಲಕ ಸಿಪಿಐಎಂಎಲ್ ಲಿಬರೇಶನ್ ಸರ್ಕಾರಕ್ಕೆ ಒತ್ತಾಯ ಮಾಡುತ್ತಾ ತಹಶೀಲ್ದಾರರಾದ ಸುಧಾ ಅರಮನೆ ಇವರ ಮೂಲಕ ಮನವಿ ಪತ್ರವನ್ನು ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಗಂಗಪ್ಪ ತೋರಣದಿನ್ನಿ ತಾಲೂಕು ಕಾರ್ಯದರ್ಶಿ,ಚಂದ ಸಾಬ್ ಬೆಳ್ಳಿಗನೂರ ಸದಸ್ಯರು,ಬಸವರಾಜ್ ಹಿರೇದಿನ್ನಿ,ಸದಸ್ಯರುಹನುಮಂತ್ ದಿನಸಮುದ್ರ,ಸದಸ್ಯರುರಾಮಣ್ಣ ಮಸ್ಕಿ,ಸದಸ್ಯರು ಸೋಮಣ್ಣ ಮಸ್ಕಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ