ಗುಲಾಬಿ ತಾಯಂದಿರ ಬದುಕಿನ ಬಣ್ಣ ಬದಲಾಗುವುದು ಯಾವಾಗ...!

ಗುಲಾಬಿ ತಾಯಂದಿರ ಕಷ್ಟ ಕೇಳುವವರಾರು?

ಕೊಟ್ಟೂರು: ತಾಲ್ಲೂಕಿನಲ್ಲಿರುವ ಆಶಾ ಕಾರ್ಯಕರ್ತೆಯರ ಕಷ್ಟವನ್ನು ಕೇಳುವವರು ಯಾರೂ ಇಲ್ಲದಂತಾಗಿದೆ. ಬಿಸಿಲು ಮಳೆ ಎನ್ನದೇ ಮನೆ ಮನೆಗೆ ನಡೆದುಕೊಂಡು ತೆರಳಿ ಮಹಿಳೆಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಗುಲಾಬಿ ತಾಯಂದಿರು ಪಟ್ಟಣ ಮತ್ತು ಹಳ್ಳಿಗಳಲ್ಲಿರುವ ಮಹಿಳಾ ರೋಗಿಗಳನ್ನು, ಗರ್ಭಿಣಿ ಮಹಿಳೆಯರನ್ನು, ಬಾಣಂತಿಯರನ್ನು ಎರಡು ತಿಂಗಳಿನಿಂದ ಹಿಡಿದು ಮಗುವಿನ ಮೊದಲ ಎಲ್ಲಾ ಚುಚ್ಚುಮದ್ದುಗಳನ್ನು ಹಾಕಿಸುವವರೆಗೂ ಇವರ ಜವಾಬ್ದಾರಿ ಇರುತ್ತದೆ. ಮನೆ ಮನೆಗೂ ಹೋಗಿ ಡೆಂಗ್ಯೂ, ಮಲೇರಿಯಾ, ಅಸ್ತಮಾ ಹಾಗೂ ಇನ್ನಿತರೆ ಸಾಂಕ್ರಾಮಿಕ ರೋಗಗಳ, ರೋಗಿಗಳ ಬಗ್ಗೆ ಸರ್ವೆ ಮಾಡುವ ಹಾಗೂ ಇನ್ನಿತರ ಆರೋಗ್ಯ ಇಲಾಖೆಯು ವಹಿಸುವ ಎಲ್ಲಾ ಕೆಲಸಗಳನ್ನು ನಿರ್ವಹಿಸುತ್ತಾ, ಮಹಿಳೆಯರನ್ನು ಆಸ್ಪತ್ರೆಗೆ ಕರೆದೊಯ್ದು ಅವರಿಗೆ ಸರಿಯಾದ ಚಿಕಿತ್ಸೆ ದೊರೆಯುವಂತೆ ಮಾಡುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಸಿಗುವುದು ತಿಂಗಳಿಗೆ ಬರೀ ರೂ. ೫,೦೦೦ ಮಾತ್ರ. ತಮ್ಮ ಮನೆಯ ಜವಾಬ್ದಾರಿಗಳನ್ನು ಮರೆತು ಸಮಾಜದಲ್ಲಿರುವ ಮಹಿಳೆಯರ ಆರೋಗ್ಯ ಕಾಪಾಡುತ್ತಿರುವ ಹಾಗೂ ತಮ್ಮ ಆರೋಗ್ಯವನ್ನು ಕಡೆಗಣಿಸಿ ಸಮಾಜದ ಸೇವೆ ಮಾಡುತ್ತಿರುವ ಆಶಾ ಕಾರ್ಯಕರ್ತೆರನ್ನು ಸರ್ಕಾರ ಕಡೆಗಣಿಸುತ್ತಿದೆ ಎಂಬುದು ಮೇಲ್ನೋಟಕ್ಕೆ ಕಾಣುತ್ತಿದೆ. ಸಂಬಂಧಿಸಿದ ಅಧಿಕಾರಿಗಳು ತಿಂಗಳಿನಲ್ಲಿ ನಾಲ್ಕೈದು ಬಾರಿ  ಮೀಟಿಂಗ್ ಕರೆಯುವ ಪ್ರಯುಕ್ತ ತಮ್ಮ ಬದುಕನ್ನು ನಿರ್ಲಕ್ಷಿಸಿ ಸಮಾಜದ ಆರೋಗ್ಯ ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತಿರುವ ಆಶಾ ಕಾರ್ಯಕರ್ತೆಯರ ಇರುವಿಕೆಯ ಮಹತ್ವವನ್ನು ಅರಿತು ಸರ್ಕಾರ ಆಶಾ ಕಾರ್ಯಕರ್ತೆಯರಿಗೆ ವಿವಿಧ ಸೌಲಭ್ಯಗಳನ್ನು, ಬದುಕಿನ ಭದ್ರತೆಯನ್ನು, ಅಲ್ಲದೇ ಕನಿಷ್ಠ ವೇತನವನ್ನು ನಿಗದಿಗೊಳಿಸಬೇಕೆಂದು 

ಮೂರು ನಾಲ್ಕು ತಿಂಗಳ ಹಿಂದೆ ಅಷ್ಟೇ  ಬೆಂಗಳೂರು ಫ್ರೀಡಂ ಪಾರ್ಕ್ ನಲ್ಲಿ 10000 ಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರು ಪ್ರತಿಭಟನೆ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ ಈಗಲಾದರೂ ಸರ್ಕಾರ ಗಮನಹರಿಸಬೇಕು ಎನ್ ಎಫ್ ಐ ಡಬ್ಲ್ಯೂ ರಾಜ್ಯ ಕಾರ್ಯದರ್ಶಿ ಕೆ ರೇಣುಕಮ್ಮ, ಪ್ರವೀಣ್ ಕುಮಾರ್,ಅಂಜಿನಿ,ಒತ್ತಾಯಿಸಿದರು.

ಕೋಟ್-೧

ಗ್ರಾಮಗಳಲ್ಲಿರುವ ಬಡಹೆಣ್ಣುಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿರುವ ಆಶಾ ಕಾರ್ಯಕರ್ತೆಯರು ತಮ್ಮ ವೈಯಕ್ತಿಕ ಸುಖಸಂತೋಷಗಳನ್ನು ಅನುಭವಿಸದೇ ಸಮಾಜದ ಆರೋಗ್ಯಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿರುವ ಆಶಾ ಕಾರ್ಯಕರ್ತೆಯರನ್ನು ಸರ್ಕಾರ ಸರಿಯಾದ ರೀತಿಯಲ್ಲಿ ನಡೆಸಿಕೊಳ್ಳಬೇಕು. ತಿಂಗಳಿಗೆ ಸರಿಯಾಗಿ ವೇತನ ನೀಡುವುದಲ್ಲದೇ, ಕನಿಷ್ಟ ವೇತನ ನೀಡಿ, ಬದುಕಿನ ಭದ್ರತೆ ಒದಗಿಸಬೇಕು.ಎಂದು ಎನ್ ಎಫ್ ಐ ಡಬ್ಲ್ಯೂ ರಾಜ್ಯಾಧ್ಯಕ್ಷರು ಎ ಜೋತಿ ಕಾಮ್ರೇಡ್ ಹೇಳಿದರು.


ಕೊಟ್ -2

ಸದನದಲ್ಲಿ ಈ ವಿಚಾರವಾಗಿ ಸ್ಪೀಕರ್ ಹಾಗೂ ಸರ್ಕಾರದ ಗಮನಕ್ಕೆ ತಂದು  ಹಗರಿಬೊಮ್ಮನಹಳ್ಳಿ ಕ್ಷೇತ್ರದ ಮತ್ತು ರಾಜ್ಯದಲ್ಲಿರುವ ಎಲ್ಲಾ ಆಶಾ ಕಾರ್ಯಕರ್ತೆಯರಿಗೆ ನ್ಯಾಯ ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಹಗರಿಬೊಮ್ಮನಹಳ್ಳಿ ಕ್ಷೇತ್ರದ ಶಾಸಕರು ಕೆ ನೇಮಿರಾಜ ನಾಯ್ಕ್ ಹೇಳಿದರು 

ಕಾಮೆಂಟ್‌ಗಳು

  1. ತುಂಬಾ ಧನ್ಯವಾದಗಳು ನಮ್ಮ ಆಶಾ ಕಷ್ಟ ನಿಮಗೆ ಅರ್ಥ ಆಗಿದೆ ಅಲ್ವಾ ಹೃತ್ಪೂರ್ವಕ ವಂದನೆಗಳು

    ಪ್ರತ್ಯುತ್ತರಅಳಿಸಿ
  2. ಯಾರು ಕೇರ್ ಮಾಡಲ್ರಿ ರೀ ನಮ್ಮ್ ಆಶಾ ಬಗ್ಗೆ, 10.000 ಆದ್ರೂ ಪರವಾಗಿಲ್ಲ

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ