*ಆರ್ ಎಸ್ ಎಸ್ ಮತ್ತು ಬಿಜೆಪಿ ಮುಖಂಡರುಗಳು ಪಾದಯಾತ್ರೆ ಕೈಗೊಂಡಿರುವ ಶಿಪ್ರಾರ ಅವರಿಗೆ ಅಭಿನಂದನೆ*
ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ ಶನಿವಾರದಂದು ಶಿಪ್ರಾ ಪಾಠಾಕ್ ವಾಟರ್ ಹ್ಯೂಮನ್ ಎಂದೆ ಕ್ಯಾತೆಗೆ ಪ್ರಶಸ್ತಿ ತೆಗೆದುಕೊಂಡಂತಹ ಶಿಪ್ರಾ ಪಾಠಕ್ ರವರು ನವಂಬರ್ 27ರಿಂದ ಸರಿಸುಮಾರು ಐದು ರಾಜ್ಯಗಳ ಪಾದಯಾತ್ರೆ ಪ್ರಾರಂಭಿಸಿದ್ದು ಇವರು ರಾಮ ಮಂದಿರ ನಿರ್ಮಾಣ ವಾದ ನಂತರ ಭಾರತ ದೇಶವು ಸರ್ವ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಣುವಂತೆ ಕರ್ನಾಟಕ ಉತ್ತರ ಪ್ರದೇಶ್, ಮಹಾರಾಷ್ಟ್ರ ತಮಿಳುನಾಡು ಛತ್ತೀಸಘಡ್ ಈ ಎಲ್ಲಾ ರಾಜ್ಯಗಳ ಪಾದಯಾತ್ರೆಯ ಪ್ರವಾಸದಲ್ಲಿ ಪ್ರತಿದದಿನ 30 ಕಿಲೋಮೀಟರ್ ಪಾದಯಾತ್ರೆ ಮೂಲಕ ಪ್ರವಾಸ ಕೈಗೊಂಡು ಈ ಪ್ರವಾಸದ ಉದ್ದೇಶವು ದೇಶದಲ್ಲಿ ಹರಿಯುವ ನದಿಗಳ ಶುದ್ಧೀಕರಣ ಹಾಗೂ ಪಂಚಭೂತಗಳ ಶುದ್ಧೀಕರಣಕ್ಕಾಗಿ ಭಾರತ ದೇಶದದಲ್ಲಿ ಜೀವಿಸುವಂತಹ ಪ್ರಾಣಿ ಪಕ್ಷಿಗಳ ಹಿತ ದೃಷ್ಟಿಯಿಂದ ಶ್ರೀ ರಾಮನ ನಾಮದೊಂದಿಗೆ ಪಾದಯಾತ್ರೆ ಮೂಲಕ ಕೂಡ್ಲಿಗಿಗೆ ಸರಿಸುಮಾರು 3380 ಕಿಲೋಮೀಟರ್ ಮುಕ್ತಾಯಗೊಂಡಿದ್ದು ನಂತರ ಕೂಡ್ಲಿಗಿಯಿಂದ ಪಾದಯಾತ್ರೆಯ ಮೂಲಕ ರಾಮೇಶ್ವರ ಪುಣ್ಯಕ್ಷೇತ್ರದ ಮಾರ್ಗವಾಗಿ ಪಾದಯಾತ್ರೆ ಕೈಗೊಂಡಿರುವೆ ಎಂದು ಶಿಪ್ರಾ ಪಾಠಕ್ ತಿಳಿಸಿದರು,
ಕೂಡ್ಲಿಗಿ ಪಟ್ಟಣದ ವೆಂಕಟೇಶ್ವರ ದೇವಸ್ಥಾನದ ಡಾಕ್ಟರ್ ಶ್ರೀನಿವಾಸಲು ಹಾಗೂ ಅನೇಕರು ಸ್ವಾಗತಿಸಿಕೊಂಡರು ಈ ಸಂದರ್ಭದಲ್ಲಿ ಶಿಪ್ರಾ ಪಾಠಕ್ ಇವರು ವೆಂಕಟೇಶ್ವರ ದೇವರಿಗೆ ಪೂಜೆ ನಮನ ಸಲ್ಲಿಸಿ ಕೂಡ್ಲಿಗಿಯ ಹಿರಿಯ ಮುಖಂಡರಾದ ಲೋಕನ ಗೌಡರು ಮನೆಗೆ ಆಗಮಿಸಿ ಈ ಸಂದರ್ಭದಲ್ಲಿ ಕೂಡ್ಲಿಗಿ ತಾಲೂಕಿನ ಎಸ್ಸಿ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಸಾಣೆ ಹಳ್ಳಿ ಹನುಮಂತಪ್ಪ ವಕೀಲರು, ಶಿಪ್ರಾ ರವರ ಪಾದಯಾತ್ರೆ ಕೈಗೊಂಡಿರುವ ಕುರಿತು ಕೇಸರಿ ಶಾಲ್ ಓದಿಸುವುದರ ಮೂಲಕ ಹಣ್ಣನ್ನು ಕೊಟ್ಟು ಇವರ ಕುರಿತು ಮಾತನಾಡಿದರು, ಈ ಸಂದರ್ಭದಲ್ಲಿ ಬಿಜೆಪಿಯ ಮುಖಂಡರಾದ ಸುನಿಲ್ ಗೌಡ್ರು ಇವರು ಸಹ ಪ್ರಕೃತಿಯ ಹಿತವನ್ನು ಬಯಸುವ ಶಿಪ್ರಾ ಪಾಠಕ್ ರವರಿಗೆ ಅಭಿನಂದಿಸಿ ಕೇಸರಿ ಶಾಲ್ ಸನ್ಮಾನಸುವುದರ ಮೂಲಕ ಪಾದಯಾತ್ರೆಗೆ ಹೊರಟಿರುವ ಇವರಿಗೆ ಅಭಿನಂದನೆ ತಿಳಿಸಿದರು,
ವರದಿ ರಾಘವೇಂದ್ರ ಸಾಲುಮನೆ ಕೂಡ್ಲಿಗಿ
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ