"ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಮೇರೆಗೆ ಪತ್ರಿಕಾ ಪಕಡಣೆ"

ಕೊಟ್ಟೂರು ತಾಲೂಕನ್ನು ಘನ ಸರ್ಕಾರ ಈಗಾಗಲೇ ಬರಪೀಡಿತ ೆಂದು ಘೋಷಣೆ ಮಾಡಿದ್ದು, ಜಾನುವಾರುಗಳಿಗೆ ಮೇವಿನ ಅಗತ್ಯವಿರುವ ಪ್ರಯುಕ್ತ ಮೇವು ಖರೀದಿ ಮಾಡಬೇಕಾಗಿರುತ್ತದೆ. ಆದ್ದರಿಂದ ಕೊಟ್ಟೂರು ತಾಲೂಕಿನ ರೈತರು ತಮ್ಮ ಬಳಿ ಇರುವ ಮೇವಿನ ಒಂದು ಟನ್ ಭತ್ತ ಅಥವಾ ರಾಗಿ ಹುಲ್ಲಿಗೆ ರೂ.6,000/- ಮತ್ತು 1 ಟನ್ 1ಕಿ.ಮೀ ಸಾಗಾಣಿಕೆ ವೆಚ್ಚ ರೂ.15/- ರಂತೆ ನಿಗಧಿಯಾಗಿರುತ್ತದೆ. ಕಾರಣ ಮಾನ್ಯ ಜಿಲ್ಲಾಧಿಕಾರಿಗಳು, ವಿಜಯನಗರ ಜಿಲ್ಲೆ, ಹೊಸಪೇಟೆ ಇವರ ನಿರ್ದೇಶನದಂತೆ ಆಸಕ್ತಿ ಉಳ್ಳವರು ಧರ ಪಟ್ಟಿಗಳನ್ನು ಮುಖ್ಯ ಪಶು ವೈಧ್ಯಖಾಧಿಕಾರಿಗಳು(ಆಡಳಿತ), ಪಶು ಆಸ್ಪತ್ರೆ, ಕೊಟ್ಟೂರು ವಿಜಯನಗರ ಜಿಲ್ಲೆ-583134 ಇವರ ಕಛೇರಿಗೆ ದಿನಾಂಕ: 24.02.2024ರ ಸಂಜೆ 4.00 ಗಂಟೆಯೊಳಗೆ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸುವಂತೆ ಮುಖ್ಯ ಪಶುವೈಧ್ಯಾಧಿಕಾರಿಗಳು(ಆಡಳಿತ) ಪಶು ಆಸ್ಪತ್ರೆ ಕೊಟ್ಟೂರು ಇವರು ಸಾರ್ವಜನಿಕರಲ್ಲಿ ಈ ಮೂಲಕ ಪತ್ರಿಕೆಗಳಿಗೆ ಉಚಿತವಾಗಿ ಪ್ರಕಟಣೆ ಮಾಡುವಂತೆ ಕೋರಿರುತ್ತಾರೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ