"ಕ್ರಿಯಾಯೋಜನೆ ರೂಪಿಸಲು ಒತ್ತಾಯ"

ಮಸ್ಕಿ: ತಾಲೂಕಿನಲ್ಲಿ ಬಹುತೇಕ ಕಡೆ ಗಟಾರು, ರಸ್ತೆ, ಶೌಚಾಲಯ, ಜೆಜೆ ಎಂ, ಮೆಟ್ಲಿಂಗ್ ರಸ್ತೆಗಳು ಕಳಪೆ ಹಾಗೂ ಅನೇಕ ಸಮಸ್ಯೆ ತಾಂಡವಾಡುತ್ತಿದ್ದು, ಅವುಗಳ ಬಗ್ಗೆ ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ನಿರ್ಲಕ್ಷ ವಹಿಸಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ( ಅಂಬೇಡ್ಕರ್ ವಾದ ) ಮಸ್ಕಿ ಸಮಿತಿ ವತಿಯಿಂದ ಆರೋಪಿಸಿದರು.

 ಈ ಕುರಿತು ಗುರುವಾರ ಪಟ್ಟಣದ ತಾಲೂಕ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಉಮೇಶ್ ಅವರಿಗೆ ಮನವಿ ಪತ್ರ ಸಲ್ಲಿಸುವುದರ ಮುಖಾಂತರ ಮಾತನಾಡಿದ ಬಸವರಾಜ್ ಕೊಠಾರಿ ಗ್ರಾಮ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಕಾರ್ಯಾಲಯದ ಮುಂದೆ ಅನೇಕ ಬಾರಿ ಮನವಿ ಪತ್ರ ಹಾಗೂ ಸತ್ಯಗ್ರಹ ಹೋರಾಟ ಮಾಡ್ತಾ ಬಂದರು ಅಧಿಕಾರಿಗಳ ಗಮನಕ್ಕೆ ತಂದರು ತಾಲೂಕಿನಲ್ಲಿ ಸಮಸ್ಯೆಗಳ ಬಗ್ಗೆ ಅಧಿಕಾರಿಗಳಿಗೂ ಗಮನಕ್ಕೂ ಇದ್ದರೂ ಇಲ್ಲದಂತೆ ವರ್ತಿಸುತ್ತಾ ಇದ್ದಾರೆ.ಗ್ರಾಮ ಪಂಚಾಯಿತಿಗಳಲ್ಲಿ ರಸ್ತೆಗಳು, ಕುಡಿಯುವ ನೀರಿನ ತೊಟ್ಟಿ, ನಮ್ಮ ಯೋಜನೆಯ ಗ್ರಾಮ ಗಟಾರು, ರಸ್ತೆ, ಬೀದಿ ದೀಪ, ಆರೋಗ್ಯ, ಶುದ್ಧ ಕುಡಿಯುವ ನೀರಿನ ಘಟಕ, ಶಾಲೆ ಆವರಣ ದುರಸ್ತಿ, ಶಾಲೆ ಸುತ್ತಲೂ ಕಾಪೌಂಡ್‌ ನಿರ್ಮಾಣ ಸೇರಿದಂತೆ ಮೂಲ ಸೌಲಭ್ಯಗಳ ಕುರಿತು ಕ್ರಿಯಾಯೋಜನೆ ರೂಪಿಸಿ ಮಂಜೂರು ಮಾಡಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಇಲ್ಲದಿದ್ದರೆ ಗ್ರಾಮ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿಗಳ ಹಂತ ಹಂತವಾಗಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಮನವಿ ಪತ್ರ ಸಲ್ಲಿಸುವುದರ ಮುಖಾಂತರ ಒತ್ತಾಯಿಸಿದರು.

 ಈ ಸಂದರ್ಭದಲ್ಲಿ ವಿ.ಸಂ.ಲಿಂಗಪ್ಪ, ಜಿಲ್ಲಾ ಪ್ರ.ಸಂ. ಚಿನ್ನಪ್ಪ ಹೇಡಿಗಿಬಾಳ,ತಾ. ಪ್ರ. ಸಂ.ಬಸವರಾಜ ಎಂ ಕೊಠಾರಿ, ಎಲ್ ಕೆ ಮರಿಯಣ್ಣ, ಪರಶುರಾಮ ಉಸ್ಕಿಯಾಳ,ಹುಚ್ಚಪ್ಪ,ನಾಗಪ್ಪ, ಬಸವ,ಹನುಮಂತ,ಹುಲಿಗೇಶ, ಮೌನೇಶ್,ರವಿ,ದೇಶಪ್ಪ,ನಿರುಪಾದಿ, ಹಾಗೂ ಸಂಘದ ವಿವಿಧ ಮುಖಂಡರು ಸದಸ್ಯರು ಭಾಗಿಯಾಗಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ