ಸೋಲು-ಗೆಲುವನ್ನು ಸಮಾನವಾಗಿ ಪರಿಗಣಿಸಿ : ಅಧ್ಯಕ್ಷ ನಿಂಗಪ್ಪ ನಾಗರಬೆಂಚಿ

ಮಸ್ಕಿ : ತಾಲೂಕಿನ ಮೆದಿಕಿನಾಳ ಗ್ರಾಮದಲ್ಲಿ ಭಾನುವಾರ ನಡೆದ ರೆಬಲ್ ಬಾಯ್ಸ್ ಕಮಿಟಿ ವತಿಯಿಂದ ಮೆದಿಕಿನಾಳ ಪ್ರೀಮಿಯರ್‌ ಲೀಗ್‌‌ ಸೀಜನ್ 02 ಪಂದಾವಳಿಯನ್ನು ಗ್ರಾಮ ಪಂಚಾಯತಿ ಅಧ್ಯಕ್ಷ ನಿಂಗಪ್ಪ  ನಾಗರಬೆಂಚಿ ಯವರು ಉದ್ಘಾಟಿಸಿ ನಂತರ ಮಾತನಾಡಿದ ಅವರು.

ಇಂದಿನ ದಿನಗಳಲ್ಲಿ ಕ್ರೀಡೆಗೆ ಹೆಚ್ಚಿನ ಆದ್ಯತೆಯ ಅಗತ್ಯವಿದ್ದು, ಯುವಜನತೆಯೂ ಅದರ ಮಹತ್ವವನ್ನು ಅರಿತುಕೊಳ್ಳಬೇಕು. 

ಯುವಜನರು ತಮ್ಮ ಅವಿಭಾಜ್ಯ ವರ್ಷಗಳಲ್ಲಿ ವಿಚಲಿತರಾಗಬೇಡಿ ಮತ್ತು ಕೆಟ್ಟ ಚಟಗಳಿಗೆ ಬಲಿಯಾಗಬೇಡಿ ಎಂದು ಮನವಿ ಮಾಡಿದ ಅವರು, ಕ್ರೀಡೆಗಳು ಹೋರಾಟದ ಮನೋಭಾವ ಮತ್ತು ತಂಡವನ್ನು ಬೆಳೆಸಲು ಸಹಾಯ ಮಾಡುತ್ತದೆ ಎಂದು ಹೇಳಿದರು.

ಕ್ರೀಡೆಯಲ್ಲಿ ಪಾಲ್ಗೊಳ್ಳುವ ಅಗತ್ಯವನ್ನು ಒತ್ತಿ ಹೇಳಿದ ಅವರು, ಸೋಲು-ಗೆಲುವನ್ನು ಸಮಾನವಾಗಿ ಪರಿಗಣಿಸಿ ಮುನ್ನಡೆಯುವ ಸಾಮರ್ಥ್ಯವನ್ನು ಕ್ರೀಡೆಗಳು ಕಲಿಸುತ್ತವೆ ಎಂದರು.

ಈ ಸಂದರ್ಭದಲ್ಲಿ, ರಾಮಣ್ಣ ಗ್ರಾ.ಪಂ ಉಪಾಧ್ಯಕ್ಷರು,ಅಮೀರ್ ಸಾಬ್ ಗ್ರಾ.ಪಂ ಸದಸ್ಯರು, ಬಸವರಾಜ್ ಮರಕಲದಿನ್ನಿ,ನಾಗರಾಜ್ ಗುರಿಕಾರ,ಆನಂದ ಪರಡ್ಡಿ,ಆನಂದ ಭಜಂತ್ರಿ,ಮೌನೇಶ್ ಮೆದಿಕಿನಾಳ,ರಾಘವೇಂದ್ರ, ಅಮರೇಶ್,ಬಸವ ಸೇರಿದಂತೆ ಕ್ರಿಕೆಟ್ ಪಂದ್ಯಾವಳಿ ಸಮಿತಿಯ ಸದಸ್ಯರು ಸೇರಿದಂತೆ ಊರಿನ ಪ್ರಮುಖ ಮುಖಂಡರು ಕ್ರಿಕೆಟ್ ಯುವಪ್ರೇಮಿಗಳು ಇದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ