*ಸನ್ನಿಧಿ ಕಾಲೇಜಿನ ಹಿತಾಸಕ್ತಿಗೆ ಭಂಗ ಬರಬಹುದೆಂದು, ವಿದ್ಯಾರ್ಥಿಯಿಂದ ಕೇಸ್ ದಾಖಲು *


ಕೊಟ್ಟೂರು ಪಟ್ಟಣದ ಸನ್ನಿಧಿ ಕಾಲೇಜಿನ ಹತ್ತಿರ ಗಾಂಜಾ ಹೊಡೆದ ಹುಡುಗರು ಮತ್ತು ಸನ್ನಿಧಿ ಕಾಲೇಜಿನ ಕಾರ್ಯದರ್ಶಿಯಾದ ನಾಗಭಾಸ್ಕರರ ಮಧ್ಯೆ ಮಂಗಳವಾರ ರಂದು ಸಂಜೆ ನಡೆದ ಘಟನೆ ನೀರಿಗಾಗಿ ಅಥವಾ ಕಾಲೇಜಿನ ಮುಂದೆ ಬೈಕ್ ಬಿಟ್ಟ ಕಾರಣಕ್ಕೋ ಗಲಾಟೆಯಾಗಿರುವುದು ನಿಜ ಆದರೆ ಗಲಾಟೆಯನ್ನು ಬಿಡಿಸಲು ಬಂದ ವಿದ್ಯಾರ್ಥಿಗಳಲ್ಲಿ ಒಬ್ಬ ವಿದ್ಯಾರ್ಥಿಗೆ ಗಾಯವಾಗಿ ಆ ವಿದ್ಯಾರ್ಥಿ ಕಡೆಯಿಂದ ಪ್ರಕರಣ ದಾಖಲಿಸಿರುವುದು ಎಷ್ಟರ ಮಟ್ಟಿಗೆ ಸರಿ? ಅಸಲಿಗೆ ವಿದ್ಯಾರ್ಥಿಗಳ ಪಾತ್ರವೇ ಇಲ್ಲದ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ಪ್ರಕರಣವನ್ನು ದಾಖಲಿಸಿರುವುದು ವಿದ್ಯಾರ್ಥಿಯ ಭವಿಷ್ಯಕ್ಕೆ ತೊಂದರೆಯಲ್ಲವೇ? ಇಂತಹ ಓದುವ ವಯಸ್ಸಿನಲ್ಲಿ ಈ ರೀತಿ ಪೊಲೀಸ್ ಠಾಣೆ ಹಾಗೂ ನ್ಯಾಯಾಲಯದ ಮೆಟ್ಟಿಲೇರಿಸಿರುವುದರ ಹಿಂದೆ ಸನ್ನಿಧಿ ಕಾಲೇಜಿನ ಹಿತಾಸಕ್ತಿಗೆ ಭಂಗ ಬರಬಹುದೆಂದು ಹೀಗೆ ಮಾಡಿದ್ದಾರೆನ್ನುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಜಗಳ ಆದ ಪಕ್ಷದಲ್ಲಿ ಸನ್ನಿಧಿ ಕಾಲೇಜಿನಿಂದ ಪ್ರಕರಣ ದಾಖಲಿಸಬೇಕೇ ಹೊರತು ವಿದ್ಯಾರ್ಥಿಗಳಿಂದ ಅಲ್ಲ? ಇದನ್ನು ಪೊಲೀಸರಾದರೂ ವಿದ್ಯಾರ್ಥಿಗಳ ಹಿತವನ್ನು ಗಮನದಲ್ಲಿಟ್ಟುಕೊಂಡು ಸೂಕ್ಷ್ಮವಾಗಿ ಗಮನಿಸಬಹುದಾಗಿತ್ತು.

ಮೂಲತಃ ಸನ್ನಿಧಿ ಕಾಲೇಜಿನ ಆಡಳಿತ ಮಂಡಳಿಯ ನಾಗಭಾಸ್ಕರರಾವ್ ಕರ್ನಾಟಕದವರಲ್ಲ, ಪಕ್ಕದ ಆಂಧ್ರಪ್ರದೇಶದವರು. ಇವರಿಗೆ ಕನ್ನಡ ಭಾಷೆ ಅಷ್ಟಾಗಿ ಸರಿಯಾಗಿ ಬರದ ಅಸ್ಪಷ್ಟವಾಗಿ ಮಾತನಾಡಿದ ಕಾರಣವೇ ಗಲಾಟೆಗೆ ಮುಖ್ಯ ಕಾರಣವಾಗಿರಬಹುದು. ಶಿಕ್ಷಣ ಸಂಸ್ಥೆ ನಡೆಸುವವರು ಕನ್ನಡವನ್ನು ಸರಿಯಾಗಿ ಮಾತನಾಡಿದ್ದರೆ ಬಹುಶಃ ಈ ಗಲಾಟೆಯಾಗುತ್ತಿರಲಿಲ್ಲ. ಗಲಾಟೆಯ ಸಂಪೂರ್ಣ ವಿವರ ಸನ್ನಿಧಿ ಕಾಲೇಜಿನ ಸಿ.ಸಿ. ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ ಎಂದು ನಾಗಭಾಸ್ಕರ ರಾವ್ ಹೇಳಿದ್ದಾರೆ. ನೂರಾರು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ಶಿಕ್ಷಣ ಸಂಸ್ಥೆಗಳೇ ಈ ರೀತಿ ವಿದ್ಯಾರ್ಥಿಗಳನ್ನು ಬಳಸಿಕೊಂಡಿರುವುದು ವಿದ್ಯಾರ್ಥಿಗಳ ಭವಿಷ್ಯಕ್ಕೆ ಕಪ್ಪು ಚುಕ್ಕೆ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ. ಪೋಷಕರು ವಿದ್ಯಾರ್ಜನೆಗಾಗಿ ತಮ್ಮ ಮಕ್ಕಳನ್ನು ಶಿಕ್ಷಣ ಸಂಸ್ಥೆಗಳಿಗೆ ಸೇರಿಸುವ ಮುನ್ನ ಆಲೋಚನೆ ಮಾಡಬೇಕು ಇನ್ನುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ ಎಂದು ಸಿ.ಪಿ.ಐ.ಎಂ.ಎಲ್.ನ ತಾಲ್ಲೂಕು ಕಾರ್ಯದರ್ಶಿ ಜಿ.ಮಲ್ಲಿಕಾರ್ಜುನ, ಭಾರತೀಯ ಮಹಿಳಾ ಒಕ್ಕೂಟದ ರಾಜ್ಯ ಕಾರ್ಯದರ್ಶಿ ಕೆ.ರೇಣುಕಮ್ಮ, ಮಾನವ ಹಕ್ಕುಗಳ ಸಂಘಟನೆಯವರು ಪತ್ರಿಕೆಗೆ ತಿಳಿಸಿದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ