ಸರ್ಕಾರಿ ನೌಕರರ ಮಹಾ ಸಮ್ಮೇಳನ ಯಶಸ್ವಿಗೆ ಆಗಮಿಸಲು ಮನವಿ – ಕೆ.ಜಗದೀಶ
ಕೊಟ್ಟೂರು: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಬೆಂಗಳೂರು ಹಾಗೂ ರಾಜ್ಯದ ಎಲ್ಲಾ ಇಲಾಖೆಗಳ ವೃಂದ ಸಂಘಗಳು ಸೇರಿ ದಿನಾಂಕ: 27.02.2024 ರಂದು ಅರಮನೆ ಮೈದಾನ, ಬೆಂಗಳೂರಿನಲ್ಲಿ ಮಹಾ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ. ಈ ಸಮ್ಮೇಳನದಲ್ಲಿ ನೌಕರರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಲಿದ್ದು, ಪ್ರಮುಖವಾಗಿ 1)ಹಳೆ ಪಿಂಚಣಿ ಯೋಜನೆ ಮರುಜಾರಿ 2) 7ನೇ ವೇತನ ಆಯೋಗದ ವರದಿಯ ಅನುಷ್ಠಾನ, 3) ಆರೋಗ್ಯ ಸಂಜೀವಿನಿ ಯೋಜನೆ ಲೋಕಾರ್ಪಣೆ ಈ ಬೇಡಿಕೆಗಳ ಈಡೇರಿಸಲು ಸರ್ಕಾರವನ್ನು ಒತ್ತಾಯಿಸಲು ಬೃಹತ್ ಸಮ್ಮೇಳನವನ್ನು ಆಯೋಜನೆ ಮಾಡಲಾಗಿದ್ದು, ಸದರಿ ಸಮ್ಮೇಳನಕ್ಕೆ ನೌಕರರು ಭಾಗವಹಿಸಿ ಯಶಸ್ವಿಗೊಳಿಸಲು ಕೋರಿ ಕೊಟ್ಟೂರಿನ ತಹಶೀಲ್ದಾರರ ಕಾರ್ಯಾಲಯದ ಅಧಿಕಾರಿ/ಸಿಬ್ಬಂದಿಯವರನ್ನು ಆಹ್ವಾನಿಸುತ್ತಾ, ಆಹ್ವಾನ ಪತ್ರಿಕೆಯನ್ನು ಶಿರಸ್ತೇದಾರರಾದ ಅನ್ನದಾನೇಶ ಬಿ ಪತ್ತಾರ ಇವರಿಗೆ ನೀಡಲಾಯಿತು. ದಿನಾಂಕ: 27.02.2024 ಮತ್ತು 28.02.2024 ರಂದು ಎರಡು ದಿನಗಳ ಅನ್ಯ ಕರ್ತವ್ಯದ ಮೇರೆಗೆ(ಒ.ಒ.ಡಿ) ಸೌಲಭ್ಯವಿದ್ದು, ಕೊಟ್ಟೂರಿನಿಂದ ವಾಹನದ ವ್ಯವಸ್ಥೆಯನ್ನು ಸಹಾ ಮಾಡಲಾಗಿದೆ ಎಂದು ಕೊಟ್ಟೂರು
ತಾಲೂಕಿನ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಜಗದೀಶ.ಕೆ ಇವರು ಮನವಿ ಮಾಡಿದರು. ಈ ಸಮಯದಲ್ಲಿ ಸಂಘದ ಕಾರ್ಯದರ್ಶಿ ಜಿ.ಸಿದ್ದಪ್ಪ, ಖಜಾಂಚಿ ಬಸವರಾಜ, ಉಪಾಧ್ಯಕ್ಷರಾದ ಎಸ್.ಎಂ.ಗುರುಬಸವರಾಜ, ನಿರ್ದೇಶಕರಾದ ವಿನಯ, ರವಿಕುಮಾರ ತಾಲೂಕ ಕಛೇರಿಯ ಸಿಬ್ಬಂದಿ ಇದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ