ಧ್ಯಾನ - ಮೆಡಿಟೇಶನ್'"ಮೂಲಕ ಮಾನಸಿಕ - ಆಂತರಿಕ ಸ್ಥಿತಿ ಸದೃಢವಾಗಿಸಲು ಸಾಧ್ಯ : ಯಶೋದ .ಎಸ್ .ವಂಟಗೋಡೆ
ವರದಿ - ಮಂಜುನಾಥ ಕೋಳೂರು ಕೊಪ್ಪಳ
ಕೊಪ್ಪಳ :- ಇವತ್ತಿನ ಒತ್ತಡದ ಬದುಕಿನಲ್ಲಿ ಆಧ್ಯಾತ್ಮ ಮತ್ತು ಮೆಡಿಟೇಶನ್ ಅತ್ಯಂತ ಅವಶ್ಯಕತೆ ಇದೆ. ನಮ್ಮ ವಿಚಾರಗಳನ್ನು ಸಕಾರಾತ್ಮಕ ಮಾಡಿಕೊಂಡಾಗ ಮಾತ್ರ ನಾವು " ಆರೋಗ್ಯದಿಂದ ಸಂತೋಷದ - ಖುಷಿಯಿಂದ " ಇರಲು ಸಾಧ್ಯ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀಮತಿ ಯಶೋದ ಎಸ್ ವಂಟಗೋಡೆ ಹೇಳಿದರು. ನಗರದ ದೇವರಾಜ್ ಅರಸ್ ಕಾಲೋನಿಯಲ್ಲಿರುವ ಪ್ರಜಾಪಿತ ಬ್ರಹ್ಮಕುಮಾರಿ ವಿಶ್ವವಿದ್ಯಾಲಯದಲ್ಲಿ ಪೊಲೀಸ್ ಇಲಾಖೆಯ ಸಿಬ್ಬಂದಿಯವರಿಗೆ ಏರ್ಪಡಿಸಲಾದ " ಮಾನಸಿಕ ಒತ್ತಡ ನಿರ್ವಹಣೆಗೆ " ಕಾರ್ಯಕ್ರಮದ ಜ್ಯೋತಿ ಬೆಳಗಿಸುವುದರ ಮುಖಾಂತರ ಉದ್ಘಾಟಿಸಿ ಮಾತನಾಡಿದರು.
ಮನಸ್ಸಿನ ಒತ್ತಡದಿಂದಲೇ ಅನೇಕ ಶಾರೀರಿಕ ರೋಗಗಳು ಹೆಚ್ಚಾಗುತ್ತಿವೆ." ಧ್ಯಾನ - ಮೆಡಿಟೇಶನ್'"ಮೂಲಕ ಮಾನಸಿಕ - ಆಂತರಿಕ ಸ್ಥಿತಿಯನ್ನು ಸದೃಢವಾಗಿಟ್ಟುಕೊಂಡು ಕರ್ತವ್ಯ ನಿರ್ವಹಿಸಲು ಕರೆ ನೀಡಿದರು.
ಕಾರ್ಯಕ್ರಮ ಸಾನಿಧ್ಯವಯಿಸಿ ಮಾತನಾಡಿದ ಬ್ರಹ್ಮಕುಮಾರಿ ಯೋಗಿನಿ ಅಕ್ಕನವರು " ಪವರ್ ಪಾಯಿಂಟ್ ಪ್ರೆಸೆಂಟೇಶನ್ " ಮೂಲಕ ಮಾನಸಿಕ ಒತ್ತಡಕ್ಕೆ ಕಾರಣಗಳು, ಅದರಿಂದಾಗುವ ದುಷ್ಪರಿಣಾಮಗಳನ್ನು ಮತ್ತು ಒತ್ತಡದಿಂದ ಮುಕ್ತರಾಗಲು ನಿವಾರಣೆಗಳನ್ನು ತಿಳಿಸಿಕೊಟ್ಟು ಪ್ರಾಯೇಕವಾಗಿ ಧ್ಯಾನ ಮಾಡುವ ವಿಧಿಯನ್ನು ಹೇಳಿದರು. ನಾವು ಶರೀರದ ಆರೋಗ್ಯಕ್ಕೆ ಗಮನ ಕೊಡುವುದರ ಜೊತೆಗೆ ಮನಸ್ಸಿನ ಆರೋಗ್ಯಕ್ಕೆ ಸ್ವಲ್ಪ ಸಮಯವನ್ನಾದರೂ ಮೀಸಲಿಸಬೇಕೆಂದು ತಿಳಿಸಿದರು .
ಪ್ರತಿನಿತ್ಯ ಈಶ್ವರಿಯ ವಿಶ್ವವಿದ್ಯಾಲಯದಲ್ಲಿ ಬೆಳಗ್ಗೆ 6 ರಿಂದ ಯೋಗ , ಪ್ರಾಣಾಯಾಮ ಮತ್ತು ಧ್ಯಾನ - ಜ್ಞಾನದ ತರಗತಿಗಳು ನಡೆಯುತ್ತಿವೆ , ಸಾರ್ವಜನಿಕರು ಇದರ ಲಾಭವನ್ನು ಪಡೆದುಕೊಳ್ಳಬೇಕೆಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಡಿ ವೈ ಎಸ್ಪಿ ಮುತ್ತಣ್ಣ , ಗಂಗಾವತಿ ಡಿ ವೈ ಎಸ್ಪಿ ಪಾಟೀಲ್ ವೇದಿಕೆಯಲ್ಲಿದ್ದರು. ಕಾರ್ಯಕ್ರಮದಲ್ಲಿ ಬ್ರಹ್ಮಕುಮಾರಿ ಬಿ.ಕೆ ಸ್ನೇಹ ಅಕ್ಕನವರು ಸ್ವಾಗತಿಸಿ - ವಂದಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ