"ಬೃಹತ್ ರಕ್ತದಾನ ಶಿಬಿರ ಹಾಗೂ ಉಚಿತ ಆರೋಗ್ಯ ತಪಾಸಣೆ ಕಾರ್ಯಕ್ರಮ "

*ದಾನಗಳಲ್ಲಿಯೇ ಶ್ರೇಷ್ಠದಾನ ರಕ್ತದಾನ*

ಕೊಟ್ಟೂರು: ಪಟ್ಟಣದ ಗಂಗೋತ್ರಿ ಬಿ.ಎಸ್.ಡಬ್ಲ್ಯೂ ಪದವಿ ಮಹಾವಿದ್ಯಾಲಯ ಕೊಟ್ಟೂರು ಇವರ ವತಿಯಿಂದ ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ಶಿಬಿರದ 5 ನೇ ದಿನದ ಅಂಗವಾಗಿ ದಿನಾಂಕ 6.2.2024 ರಂದು ಸಂಗಮೇಶ್ವರ ಗ್ರಾಮದಲ್ಲಿ ಸ್ವಾಮಿ ವಿವೇಕಾನಂದ ರಕ್ತ ಭಂಡಾರ ಇವರ ಸಹಯೋಗದಲ್ಲಿ  ಬೃಹತ್  ರಕ್ತದಾನ ಶಿಬಿರ ಹಾಗೂ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಏರ್ಪಡಿಸಲಾಗಿತ್ತು , 

ಈ ಒಂದು ಶಿಬಿರದಲ್ಲಿ ಸಂಗಮೇಶ್ವರ ಗ್ರಾಮದ ಯುವಕರು, ಗ್ರಾಮಸ್ಥರು ಹಾಗೂ ನಮ್ಮ ಶಿಬಿರಾರ್ಥಿಗಳು ರಕ್ತದಾನ ಮಾಡಿದರು, ದಾನಗಳಲ್ಲಿಯೇ ಶ್ರೇಷ್ಠದಾನ ರಕ್ತದಾನ ಎಂದು ನಮ್ಮ ಕಾಲೇಜಿನ ಆಡಳಿತ ಮಂಡಳಿಯ ಕಾರ್ಯದರ್ಶಿ ಶ್ರೀ ಸಿ . ಬಿ ರಜತ್ ಹೇಳಿ ರಕ್ತದಾನ ಮಾಡಿದರು.

ಹಾಗೆಯೇ ಗ್ರಾಮದ ವಯೋ ವೃದ್ಧರಿಗೆ ಹಾಗೂ ಮಹಿಳೆಯರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನೂ  ಡಾಕ್ಟರ್  ವರುಣ ಸುಖಾಯು ಆಸ್ಪತ್ರೆ ಕೊಟ್ಟೂರು ಮತ್ತು ತಾಲೂಕು ಆಸ್ಪತ್ರೆ ಕೊಟ್ಟೂರು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಅಲಬೂರು ಇವರ ಸಹಯೋಗದೊಂದಿಗೆ ನಡೆಸಲಾಯಿತು, 

ಈ ಸಂದರ್ಭದಲ್ಲಿ  ಡಾಕ್ಟರ್ ಪ್ರವೀಣ ವೈದ್ಯಾಧಿಕಾರಿಗಳು ಪ್ರಾಥಮಿಕ ಆರೋಗ್ಯ ಕೇಂದ್ರ ಅಲಬೂರು , ಅಪ್ರಸಮಲೋಚಕರದ ಶ್ರೀ ಮಾಲತೇಶ , ಶಿಬಿರದ ಸಂಯೋಜಕ ಶಶಿಕಿರಣ ಕೆ, ಸಹಶಿಬಿರಧಿಕಾರಿ ಕೊಟ್ರೇಶ ಪಿ.ಕೆ.ಎಂ. ರಕ್ತದಾನ ಮಾಡಿದರು, 

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರುಗಳಾದ ಶ್ರೀ ಶಿವಾನಂದಯ್ಯ ಸಹ ಶಿಕ್ಷಕರು ಉಪಸ್ಥಿತಿ ಇದ್ದರು. 38 ಯೂನಿಟ್ ರಕ್ತ ಸಂಗ್ರಹವಾಯಿತು,ಜೊತೆಗೆ 150 ಕ್ಕೂ ಹೆಚ್ಚು ಜನರಿಗೆ ಉಚಿತ ಆರೋಗ್ಯ ತಪಾಸಣಾ ಮಾಡಲಾಯಿತು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ