*ಕೂಡ್ಲಿಗಿ: ವಿದ್ಯಾರ್ಥಿಗಳು ಪಠ್ಯ ವಿಷಯಗಳ ಸಂಗ್ರಹಣೆ ಮೂಲಕ ಜ್ಞಾನ ದೀಪಗಳಂತೆ ಬೆಳಗಬೇಕು -ಷ.ಬ್ರ. ಪ್ರಶಾಂತ್ ಸಾಗರ್ ಸ್ವಾಮೀಜಿ*

ಕೂಡ್ಲಿಗಿ ಪಟ್ಟಣದ ಹಿರೇಮಠದ ಸಮುದಾಯದ ಭವನದಲ್ಲಿ ಹಮ್ಮಿಕೊಂಡಿದ್ದ ಕಾಲೇಜಿನ ವಾರ್ಷಿಕೋತ್ಸವದ ಸಮಾರಂಭದಲ್ಲಿ ಜ್ಞಾನಕ್ಕಿಂತಲೂ ಮಿಗಿಲಾದದು ಯಾವುದು‌ ಇಲ್ಲವೆಂದು ಕೂಡ್ಲಿಗಿ ಹಿರೇಮಠ ಸಂಸ್ಥಾನದ ಷ.ಬ್ರ. ಪ್ರಶಾಂತ ಸಾಗರ ಶಿವಾಚಾರ್ಯ ಮಹಾಸ್ವಾಮಿಗಳು ನುಡಿದರು. ಪಟ್ಟಣದ ಹಿರೇಮಠ ವಿದ್ಯಾಪೀಠ ಸಂಯುಕ್ತ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವದ ಸಮಾರಂಭದ ಸಾನಿಧ್ಯ ವಹಿಸಿ ಆರ್ಶೀವಚನ ನೀಡಿದರು.

ಈ ಜಗತ್ತಿನಲ್ಲಿ ಎಲ್ಲಾ ಕಡೆ ವಿಷಯ ಅಡಗಿರುತ್ತದೆ. ಅದನ್ನು ತಿಳಿದುಕೊಳ್ಳುವ ಮೂಲಕ ಜ್ಞಾನವನ್ನು ಪಡೆಯಬೇಕು. ಜ್ಞಾನ ನಿಂತ ನೀರಾಗದೆ, ಸದಾ ಹರಿಯುತ್ತಿರಬೇಕು. ಕೇವಲ ಪಠ್ಯ ವಿಷಯಗಳನ್ನು ಅರಿತು ಉನ್ನತ ಶ್ರೇಣಿ ಪಡೆದು ಬೀಗದೆ, ವಿನೀತನಾಗಿ ವಿಷಯ ಸಂಗ್ರಹಣೆ ಮೂಲಕ ಜ್ಞಾನ ದೀಪದಂತೆ ಬೆಳಗಬೇಕು ಎಂದರು. ನೀತಿ ಕಥೆಗಳನ್ನು ವಿದ್ಯಾರ್ಥಿಗಳಿಗೆ ತಿಳಿಸುತ್ತಾ, ನೈತಿಕತೆಯಿಂದ ಎಲ್ಲರೂ, ಕಂಗೊಳಿಸಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಕಠಿಣ ಪರಿಶ್ರಮದಿಂದ ಯಶಸ್ಸನ್ನುಗಳಿಸಬಹುದು. ನಿರಂತರ ಅಧ್ಯಯನದಿಂದ ಪರೀಕ್ಷೆಯಲ್ಲಿ ಉತ್ತಮ ಶ್ರೇಣಿಯನ್ನು ಪಡೆಯಬಹುದು ಎಂದು ಜೆಸಿಐ ಕೂಡ್ಲಿಗಿ ಗೊಲ್ಡನ್ ಜೋನಲ್ 24ರ ರಾಷ್ಟ್ರೀಯ ತರಬೇತುದಾರ ಶಿಕ್ಷಕ ಡಿ. ಪ್ರಕಾಶ್ ಹೇಳಿದರು. ಗುಡೇಕೋಟೆಯ ಮೆಟ್ರಿಕ್ ಪೂರ್ವನಂತರ ವಿದ್ಯಾರ್ಥಿ ನಿಲಯದ ಮೇಲ್ವೀಚಾರಕ ಹುಲಗಪ್ಪ, ಚಂದ್ರಶೇಖರಪುರದ ಮಾಜಿ ಗ್ರಾಪಂ ಸದಸ್ಯ ಪ್ರಸನ್ನ, ಪ್ರಾಂಶುಪಾಲ ಅರವಿಂದ ವಿ. ಕುಲಕರ್ಣಿ ಮಾತನಾಡಿದರು. ಕಜಾಪ ಅಧ್ಯಕ್ಷ ಕೆ.ಯಂ.ವೀರೇಶ್, ಪ್ರಾಸ್ತವಿಕವಾಗಿ ಉಪನ್ಯಾಸಕರಾದ ಟಿ.ದೇವಪ್ಪ, ಸಿದ್ದರಾಮ ಹಿರೇಮಠ ಸ್ವಾಗತಿಸಿದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

8ಕೂಡ್ಲಿಗಿ1: ಪಟ್ಟಣದ ಹಿರೇಮಠ ಸಂಯುಕ್ತ ಪದವಿ ಪೂರ್ವ ಕಾಲೇಜ್ ನಲ್ಲಿ ವಾರ್ಷಿಕೋತ್ಸವದ ಸಮಾರಂಭ ನೆರವೇರಿತು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ