ಶ್ರೀ ಲಕ್ಷ್ಮಿಕಾಂತ್ ಶಾಸ್ತ್ರಿ : ಅಗ್ನಿಶಮನ ಅಣಕು ಪ್ರದರ್ಶನ
ಕೊಟ್ಟೂರು: ಶ್ರೀ ಗುರುಬಸವೇಶ್ವರ ವಿದ್ಯಾಭಿವೃದ್ದಿ ಸಂಸ್ಥೆ (ರಿ) ಕೊಟ್ಟೂರು ಗಂಗೋತ್ರಿ ಬಿ.ಎಸ್.ಡಬ್ಲ್ಯೂ ಪದವಿ ಮಹಾವಿದ್ಯಾಲಯ ಕೊಟ್ಟೂರು. ಇವರ ವತಿಯಿಂದ ಕೊಟ್ಟೂರು ತಾಲೂಕು ಅಂಬಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂಗಮೇಶ್ವರ ಗ್ರಾಮದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ಶಿಬಿರ 2023-24 ನ್ನು ಹಮ್ಮಿಕೊಳ್ಳಲಾಗಿದ್ದು.
ಶಿಬಿರದ ಆರನೇ ದಿನವಾದ ದಿನಾಂಕ 7/2/2024 ರಂದು ಬೆಳಗ್ಗೆ 7 ಕ್ಕೆ ಧ್ವಜಾರೋಹಣ ಕಾರ್ಯಕ್ರಮವನ್ನು ಶ್ರೀ ಮರುಳಪ್ಪ ಕೆ, ಉಪನ್ಯಾಸಕರು ಭಾಗಿರಥಿ ಮರಳುಸಿದ್ದನಗೌಡ ಪದವಿ ಪೂರ್ವ ಮಹಾವಿದ್ಯಾಲಯ ಕೊಟ್ಟೂರು ಇವರು ನೆರವೇರಿಸಿದರು.
ನಂತರ ಚಿಂತನ ಮಂಥನ ಕಾರ್ಯಕ್ರಮದಲ್ಲಿ "ತಂದೆ ತಾಯಿಯರ ಕನಸುಗಳನ್ನು ನನಸು ಮಾಡುವಲ್ಲಿ ಮಕ್ಕಳ ಪಾತ್ರ" ವಿಷಯದ ಬಗ್ಗೆ ಎಲ್ಲಾ ಶಿಬಿರಾರ್ಥಿಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಬೆಳಗ್ಗೆ 10.30 ರಿಂದ 11.30 ವರೆಗೆ "ಅಗ್ನಿಶಮನ ಅಣಕು ಪ್ರದರ್ಶನವನ್ನು" ಕೊಟ್ಟೂರು ಅಗ್ನಿಶಾಮಕ ಠಾಣೆಯ ಠಾಣಾಧಿಕಾರಿಗಳಾದ ಶ್ರೀ ಲಕ್ಷ್ಮಿಕಾಂತ್ ಶಾಸ್ತ್ರಿ ರವರು ನೆಡೆಸಿಕೊಟ್ಟರ.
ಈ ಸಂದರ್ಭದಲ್ಲಿ ಉಪನ್ಯಾಸಕರಾದ ಮರುಳಪ್ಪ .ಕೆ, ಶಿಬಿರದ ಸಂಯೋಜಕರಾದ ಶಶಿಕಿರಣ್.ಕೆ , ಸಹ ಶಿಬಿರಾಧಿಕಾರಿಗಳಾದ ಕೊಟ್ರೇಶ್ ಪಿ.ಕೆ.ಎಂ ರವರು ಮತ್ತು ಶಿಬಿರಾರ್ಥಿಗಳು, ಕೊಟ್ಟೂರು ಆಗ್ನಿಶಾಮಕ ಠಾಣೆಯ ಸಿಬ್ಬಂದಿಗಳು ಹಾಗೂ ಸಂಗಮೇಶ್ವರದ ಗ್ರಾಮಸ್ಥರು ಉಪಸ್ಥಿತರಿದ್ದರು.
ನಂತರ ಸಂಜೆಯ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಶ್ರೀ ಸತೀಶ್ ಪಾಟೀಲ್, ಸಹಾಯಕ ಪ್ರಾಧ್ಯಾಪಕರು, ಸರ್ಕಾರಿ ಪದವಿ ಮಹಾವಿದ್ಯಾಲಯ, ಹಡಗಲಿ ಇವರು ನೆಲ ಜಲ ಸಂಸ್ಕ್ರತಿ ವಿಷಯದ ಕುರಿತು ಹಾಗೂ ಪರಿಸರ ನಾಶವಾಗುತ್ತಿದೆ ಪ್ರಸ್ತುತ ದಿನಗಳಲ್ಲಿ ಒಂದು ಘಂಟೆಗೆ 5000 ಸಸ್ಯಗಳು ನಾಶವಾಗುತ್ತಿವೆ ಆದ್ದರಿಂದ ಪರಿಸರ ರಕ್ಷಣೆ ಕುರಿತು ಜಾಗೃತರಾಗಬೇಕಾದ ಅವಶ್ಯಕತೆ ಇದೆ ಎಂದು ಉಪನ್ಯಾಸ ನೀಡಿದರು.
ಶ್ರೀಮತಿ ನಿರ್ಮಲ ಶಿವನಗುತ್ತಿ, ಪ್ರಾಚಾರ್ಯರು, ಭಾಗೀರಥಿ ಪದವಿ ಪೂರ್ವ ಮಹಾವಿದ್ಯಾಲಯ, ಕೊಟ್ಟೂರು ಇವರು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಜನಪದ ಸಾಹಿತ್ಯ ಹಾಗೂ ಮಹಿಳೆಯರ ಸ್ಥಾನಮಾನಗಳ ವಿಷಯದ ಕುರಿತು ಅಧ್ಯಕ್ಷೀಯ ನುಡಿಗಳನ್ನು ನುಡಿದರು.
ಈ ಕಾರ್ಯಕ್ರಮದ ವೇದಿಕೆಯ ಮೇಲೆ ಶ್ರೀ ಗುರುಬಸವರಾಜ ಎ.ಎಂ.ಎಂ ಗಂಗೋತ್ರಿ ಬಿ.ಎಸ್.ಡಬ್ಲ್ಯೂ ಪದವಿ ಮಹಾವಿದ್ಯಾಲಯ, ಕೊಟ್ಟೂರು, ಕೆ.ಎಂ. ಶಿವನಂದಯ್ಯ ಮುಖ್ಯಶಿಕ್ಷರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸಂಗಮೇಶ್ವರ, ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರುಗಳಾದ ಶ್ರೀಮತಿ ಬಿ.ಎಂ. ಶಾಂತಮ್ಮ ಮತ್ತು ಶ್ರೀ ಸಿ.ನಾರನಗೌಡ, ಶ್ರೀ ಎಂ.ಪ್ರವೀಣ ಅಧ್ಯಕ್ಷರು ಹಾಲು ಉತ್ಪಾದಕರ ಸಹಕಾರ ಸಂಘ ಸಂಗಮೇಶ್ವರ, ಆರ್.ಎಂ.ಸಿದ್ಧೇಗೌಡ ರಂಗಭೂಮಿ ಕಲಾವಿದರು ಸಂಗಮೇಶ್ವರ ಇವರುಗಳು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ