"ಯೋಗಾಸನ ಮತ್ತು ವನಮಹೋತ್ಸವ ಕಾರ್ಯಕ್ರಮ"
ಕೊಟ್ಟೂರು ಪಟ್ಟಣದ ಗಂಗೋತ್ರಿ ಬಿ ಎಸ್ ಡಬ್ಲ್ಯೂ ಪದವಿ ಮಹಾವಿದ್ಯಾಲಯದ ವತಿಯಿಂದ ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ಅಂಗವಾಗಿ ಮೂರನೇ ದಿನದ ಕಾರ್ಯಕ್ರಮದಲ್ಲಿ ಹಸಿರು ಹೊನಲು ಸೇವಾ ಸಂಸ್ಥೆ ಕೊಟ್ಟೂರು ಇವರ ಸಹಯೋಗದೊಂದಿಗೆ ಯೋಗಾಸನ ಮತ್ತು ವನಮಹೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು.
ರಾಷ್ಟಿಯ ಸೇವಾ ಯೋಜನೆಯ ವಿಶೇಷ ಶಿಬಿರದ ಮೂರನೇ ದಿನವಾದ ದಿನಾಂಕ 4-02-2024. ಬೆಳಿಗ್ಗೆ 6 ಗಂಟೆಗೆ ಶಿಬಿರಾರ್ಥಿಗಳಿಗೆ ಶ್ರೀ ಯುತ ಬಂಜಾರ ನಾಗರಾಜ್ ದೈಹಿಕ ಶಿಕ್ಷಕರು ಇವರಿಂದ ಯೋಗಾಸನದ ಮಹತ್ವ ತಿಳಿಸಿ ತರಬೇತಿಯನ್ನು ನೀಡಿದರು.
ತದನಂತರದಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಶ್ರೀಯುತ ರಜತ್ ಹಾಗೂ ಬಂಜಾರ್ ನಾಗರಾಜ್ ಇವರಿಂದ ರಾಷ್ಟ್ರೀಯ ಸೇವಾ ಯೋಜನೆ ಧ್ವಜಾರೋಹಣ ನಡೆಯಿತು.. ನಂತರದಲ್ಲಿ ಕೊಟ್ಟೂರಿನ ಹಸಿರು ಹೊನಲು ತಂಡದಿಂದ ವನಮಹೋತ್ಸವ ಕಾರ್ಯಕ್ರಮವನ್ನು ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತ ಮಂಡಳಿಯ ನಿರ್ದೇಶಕರಾದ ಶ್ರೀಮತಿ ರಚನಾ ರಜತ್,ರಾಷ್ಟ್ರೀಯ ಸೇವಾ ಯೋಜನೆ ಶಿಬಿರದ ಸಂಯೋಜಕರಾದ ಕೆ ಶಶಿಕಿರಣ್, ಕೊಟ್ರೇಶ್ ಪಿ ಕೆ ಎಂ ಮತ್ತು ಗಂಗೋತ್ರಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕರಾದ ನಾರಾಯಣ ಹೆಚ್ ಉಪಸ್ಥಿತಿ ಇದ್ದರು ಹಾಗೂ ಸಂಗಮೇಶ್ವರದ ಗ್ರಾಮಸ್ಥರು ಹಾಗೂ ಶಿಬಿರಾರ್ಥಿಗಳು ಭಾಗವಹಿಸಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ