ಸಂವಿಧಾನದ 75ನೇ ವರ್ಷಾಚರಣೆ ಆನ್ವರಿ ಗ್ರಾಮದಲ್ಲಿ ಸಂವಿಧಾನದ ಜಾಗೃತಿ ಜಾಥಾಕ್ಕೆ ಅಭೂತಪೂರ್ವ ಸ್ವಾಗತ.
ಲಿಂಗಸಗೂರು- ಹಟ್ಟಿ ಚಿನ್ನದ ಗಣಿ ಸಮೀಪದ ಆನ್ವರಿ ಗ್ರಾಮದಲ್ಲಿ 75 ನೆಯ ವರ್ಷಾಚರಣೆ ಹಾಗೂ ಸಂವಿಧಾನ ಜಾಗೃತಿ ಜಾಥಾ ಹಾಗೂ ಸ್ತಬ್ಧ ಚಿತ್ರ ಮೆರವಣಿಗೆಯು. ಲಿಂಗಸಗೂರು ತಾಲೂಕ ಆಡಳಿತ.ತಾಲೂಕು ಪಂಚಾಯಿತಿ ಲಿಂಗಸುಗೂರು.ಹಾಗೂ ಸಮಾಜ ಕಲ್ಯಾಣ ಇಲಾಖೆ.ಕಂದಾಯ ಇಲಾಖೆ ಇವರ ನೇತೃತ್ವದಲ್ಲಿ.ಸಂವಿಧಾನ ಜಾಗೃತ ಜಾಥವು
ರೋಡಲ್ ಬಂಡ ಗ್ರಾಮ ಪಂಚಾಯತಿ ಮೂಲಕ ಆಗಮಿಸಿದ.ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸ್ತಬ್ಧಚಿತ್ರದ ರಥವು ವಂದಲಿ ಹೊಸೂರು ಮುಖಾಂತರ ಆನ್ವರಿ ಗ್ರಾಮಕ್ಕೆ ಆಗಮಿಸಿತು. ಸಂವಿಧಾನದ ಜಾಗೃತಿ ಜಾಥಾ ರಥವು ಆಗಮಿಸಿದಂತೆ. ಸ್ಥಳೀಯ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ದೇವಮ್ಮ ಎಚ್(ಪಿಡಿಓ) ಗ್ರಾಮ ಪಂಚಾಯಿತಿ ಅಧ್ಯಕ್ಷರು.ಮುದಿಯಪ್ಪ ಕೋಟ. ಉಪಾಧ್ಯಕ್ಷರಾ ದ ಚಂದಮ್ಮ ಹುಬ್ಬಳ್ಳಿ. ಹಾಗೂ ಸದಸ್ಯರು. ಬಸವರಾಜ್ ಸ್ವಾಮಿ (ಡಿಇಓ).ಬಿಲ್ ಕಲೆಕ್ಟರ್ ಗುರುನಾಥ.ಹಾಗೂ ಪಂಚಾಯತ್ ಸಿಬ್ಬಂದಿಗಳು.
ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಫೋಟೋ ಹಾಗೂ ಸಂವಿಧಾನ ಪೀಠಿಕೆಗೆ ಅವರಿಗೆ ಕಾಯಿ ಕರ್ಪೂರಗಳಿಂದಪೂಜೆ ನೆರವೇರಿಸಿದರು. ಸಂವಿಧಾನ ಜಾಗೃತ ಜಾಥ ಕಾರ್ಯಕ್ರಮದಲ್ಲಿ ಭಾಗವಹಿಸಿದ
ಆನ್ವರಿ.ಹಿರೇನಗನೂರು. ಚಿಕ್ಕನಟ್ಟಿ.ಹಾಗೂ ವಂದಲಿ ಹೊಸೂರು. ಸರಕಾರಿ ಶಾಲೆಯ ಮುಖ್ಯ ಗುರುಗಳು ಹಾಗೂ ಸಹ ಶಿಕ್ಷಕರು.ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿಗಳು. ಹಾಗೂ ಸಿಬ್ಬಂದಿಗಳು. ಅಂಗನವಾಡಿ ಮೇಲ್ವಿಚಾರಕರು ಕಾರ್ಯಕರ್ತರು.ಆಶಾ ಕಾರ್ಯಕರ್ತೆಯರು. ಗ್ರಾಮದ ಹಿರಿಯರು ಯುವಕರು ಹಾಗೂ ಶಾಲಾ ಮುದ್ದು ಮಕ್ಕಳಿಂದ ಕುಂಭ ಕಳಶ ಹಾಗೂ ಲೇಜುಮ್ ಮುಖಾಂತರ ಗ್ರಾಮದ ಮುಖ್ಯಬೀದಿಗಳಲ್ಲಿ ಸ್ತಬ್ಧ ಚಿತ್ರ ಮೆರವಣಿಗೆ ಮಾಡಲಾಯಿತು.
ನಂತರ ಗ್ರಾಮದ ಹೃದಯ ಭಾಗವಾದ ಮಸೀದಿ ಆವರಣದಲ್ಲಿ ಗ್ರಾಮಸ್ಥರ ಸಮ್ಮುಖದಲ್ಲಿ ಸಂವಿಧಾನದ ಪೀಠಿಕೆ ಓದಲಾಯಿತು.
ನಂತರ ಆನ್ವರಿ ಸರಕಾರಿ ಶಾಲೆಯ ಶಿಕ್ಷಕರಾದ ಆರೋಗ್ಯಪ್ಪ ಇವರು ಸಂವಿಧಾನ ಜಾಗೃತಿ ಜಾಥ ಕುರಿತು ಮಾತನಾಡಿ.
ಹಿಂದೂ ಸಂವಿಧಾನದ ದಿನ.ಬ್ರಿಟಿಷರಿಂದ ಬಿಡುಗಡೆ ಪಡೆದ ದಿನ. ಸ್ವಸಂತ್ರ ಹೋರಾಟಗಾರರ ನೆನೆಯುವ ದಿನ.ನಾಡಿನ ಚರಿತ್ರೆ ನೆನೆಯುವ ದಿನ. ಭವ್ಯ ಭಾರತಕ್ಕಾಗಿ ಪಣ ತೊಡುವ ದಿನ. ಎನ್ನುವಂತ ಸಾಲುಗಳನ್ನು ನೆನೆದು.
ಹಿಂದೂ ಧರ್ಮಕ್ಕೆ ಭಗವದ್ಗೀತೆ.ಇಸ್ಲಾಂ ಧರ್ಮಕ್ಕೆ ಕುರಾನ.ಕ್ರೈಸ್ತ ಧರ್ಮಕ್ಕೆ ಬೈಬಲ್.ಸಿಖ್ ಧರ್ಮಕ್ಕೆ ಗುರು ಗ್ರಂಥ ಸಾಹೇಬ. ಜೈನ ಧರ್ಮಕ್ಕೆ ತ್ರಿ ಪೀಠಿಕೆಗಳು.
ಹಾಗೆಯೇ ಭಾರತ ದೇಶಕ್ಕೆ ಪವಿತ್ರವಾದ ಗ್ರಂಥವೇ ಸಂವಿಧಾನ. ಸಂವಿಧಾನವೆಂದರೆ ಇಡೀ ರಾಷ್ಟ್ರವನ್ನು ಒಂದು ಚೌಕಟ್ಟಿನಲ್ಲಿ ಹೇಗೆ ನಿಯಂತ್ರಿಸಬೇಕೆಂಬುದು ತಿಳಿಸಿಕೊಡುವ ವ್ಯವಸ್ಥೆಯನ್ನು ಸಂವಿಧಾನ ಎನ್ನುತ್ತಾರೆ. ಈ ನಮ್ಮ ಸಂವಿಧಾನ ಜಾರಿಯಾಗಿ 75 ವರ್ಷವಾಯಿತು.ಈ 75 ವರ್ಷ ಸವಿನೆನಪಿಗಾಗಿ ಇಂದು ನಮ್ಮೂರಿನಲ್ಲಿ ಸಂವಿಧಾನ ದಿನವನ್ನು ಆಚರಿಸುತ್ತಿದ್ದೇವೆ. ಭಾರತಕ್ಕೆ ಸವಿಧಾನ ಬೇಕು ಎಂದು ಒತ್ತಾಯಿಸಿದವರು. ಮೋತಿಲಾಲ್ ನೆಹರು. ಹಾಗೂ ರಾಷ್ಟ್ರೀಯ ಕಾಂಗ್ರೆಸ್ಸಿನ ಅಧಿವೇಶನಗಳು. ಹಾಗೂ ನಿಮ್ಮಂತೆ ಸೇರಿದ ಜನಸಾಗರವೇ ಸಾವಿದಾನ ಬೇಕೆಂದು ಒತ್ತಾಯಿಸಿದವರು. ನಮ್ಮ ಸಂವಿಧಾನ ಮೊದಲ ರಾಜ್ಯಸಭೆಯು ಡಿಸೆಂಬರ್ 9 1946 ರಂದು ಸಭೆ ಸೇರಿತು. ಡಿಸೆಂಬರ್ 11 1946 ರಂದು ಡಾಕ್ಟರ್ ರಾಜೇಂದ್ರ ಪ್ರಸಾದ ರವರು ಅಧ್ಯಕ್ಷತೆ ವಹಿಸಿದ್ದರು.ಸಂವಿಧಾನ ರಚನಾ ಸಭೆಯಲ್ಲಿ ಜವರಹರಲಾಲ್ ನೆಹರು.ಸರ್ದಾರ್ ವಲ್ಲಬಾಯ್ ಪಟೇಲ್. ಡಾಕ್ಟರ್ ಬಿ ಆರ್ ಅಂಬೇಡ್ಕರ್.ಮೌಲಾನ ಅಬ್ದುಲ್ ಕಲಾಂ.ಸಿ ರಾಜಗೋಪಾಲಾಚಾರ್ಯ.ಟಿ ಟಿ ಕೃಷ್ಣಮಾಚಾರಿ.ಶ್ರೀಮತಿ ಸರೋಜಿನಿ ನಾಯ್ಡು. ಶ್ರೀಮತಿ ಸುಚಿತ್ ಕೃಪನ್ ಲಾನಿ.ಅದೇ ರೀತಿ ಕರ್ನಾಟಕದಿಂದ ಸವಿಧಾನ ಸಭೆಯಲ್ಲಿ ಭಾಗವಹಿಸಿದ ಮಹನೀಯರೆಂದರೆ. ಎಸ್ ನಿಜಲಿಂಗಪ್ಪ ಕೆ ಸಿ ರೆಡ್ಡಿ.ಕೆಂಗಲ್ ಹನುಮಂತಯ್ಯ. ಠಾಕೂರ್ ಸುಬ್ರಮಣ್ಯಂ. ಇತರರು ಸಂವಿಧಾನ ಸಭೆಯಲ್ಲಿ ಭಾಗವಹಿಸಿದ್ದರು.
ಅದೇ ರೀತಿ ಆನ್ವರಿ ಗ್ರಾಮದಲ್ಲಿ ಹಲವಾರು ಸಂಘ ಸಂಸ್ಥೆಗಳಿವೆ ಕರ್ನಾಟಕ ರಕ್ಷಣಾ ವೇದಿಕೆ ಬಸವೇಶ್ವರ ಯುವಕ ಮಂಡಳಿ.ಶ್ರೀಕನಕ ಯುವಕ ಮಂಡಳಿ. ಅಂಬೇಡ್ಕರ್ ಯುವಕ ಮಂಡಳಿ.ಟಿಪ್ಪು ಸುಲ್ತಾನ್ ಯುವಕ ಮಂಡಳಿ.ವಾಲ್ಮೀಕಿ ಯುವಕ ಮಂಡಳಿ.ಹಾಗೂ ಸ್ತ್ರೀಶಕ್ತಿ ಸಂಘಗಳು. ಸಂವಿಧಾನದ ಅಡಿಯಲ್ಲಿ ತಮ್ಮ ಕೆಲಸ ಮಾಡುತ್ತವೆ. ಹಾಗೂ ಸಂಘ-ಸಂಸ್ಥೆಗಳಿಂದ ನಮಗೆ ಒಗ್ಗಟ್ಟು ಉಳಿತಾಯದ ಮನೋಭಾವನೆ. ಜ್ಞಾನಾರ್ಜನೆ.ಉದ್ಯೋಗ. ವೈಯಕ್ತಿಕ ಪ್ರಗತಿಗೆ ಪ್ರೋತ್ಸಸವ ನೀಡುತ್ತವೆ. ಆದರೆ ಎಲ್ಲ ಸಂಘ ಸಂಸ್ಥೆಗಳು ಸಂವಿಧಾನದ ಅಡಿಯಲ್ಲಿ ಕೆಲಸ ಮಾಡುತ್ತವೆ.ಎಂದು ಅರ್ಥಗರ್ಭಿತವಾಗಿ ಮಾತನಾಡಿದರು.
ಸವಿಧಾನ ಜಾಗೃತಿ ಜಾಥಾ ಕಾರ್ಯಕ್ರಮವನ್ನು ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಯಾದ ದೇವಮ್ಮಎಚ್(ಪಿಡಿಓ) ಅಧ್ಯಕ್ಷರಾದ ಮುದಿಯಪ್ಪ ಕೋಟ. ಉಪಾಧ್ಯಕ್ಷರಾದ ಶ್ರೀಮತಿ ಚಂದಮ್ಮ ಹುಬ್ಬಳ್ಳಿ ಬಸವರಾಜ ಸ್ವಾಮಿ ಕಂಪ್ಯೂಟರ್ ಆಪರೇಟರ್. ಗುರುನಾಥ್ ಬಿಲ್ ಕಲೆಕ್ಟರ್.ಶ್ರೀನಿವಾಸ್ ಬಿಎಫ್ ಟಿ.ಹಾಗೂ ಗ್ರಾಮ ಪಂಚಾಯತಿ ಸಿಬ್ಬಂದಿಗಳು ಸಂವಿಧಾನದ ಜಾಗೃತ ಜಾಥ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ