ತಮಿಳು ಲಿಪಿಯ ಸಂಸ್ಕೃತ ಭಾಷೆ ಬಂಡೆಗಲ್ಲು ಶಾಸನ ಅಭಿವೃದ್ಧಿ ಮೆರೆತ ಜನ ಪ್ರತಿನಿಧಿಗಳು ಹಾಗೂ ಪುರಾತತ್ವ ಇಲಾಖೆ,

ವಿಶೇಷ ವರದಿ : ಗ್ಯಾನಪ್ಪ ದೊಡ್ಡಮನಿ 

ಮಸ್ಕಿ : ಪಟ್ಟಣದ ಹೊರವಲಯದ ಸರಕಾರಿ ಪದವಿ ಕಾಲೇಜ್ ಪಕ್ಕದ ಸುಳಿದಿಬ್ಬ ಗುಡ್ಡದಲ್ಲಿ ಜೋಳ ಅರಸರಿಗೆ ಸೇರಿದ ತಮಿಳು ಲಿಪಿಯ ಪ್ರಕಟಿತ ಬಂಡೆಗಲ್ಲು ಶಾಸನ ಪತ್ತೆಯಾಗಿ ಹದಿಮೂರು ವರ್ಷವಾಗಿದೆ ಆದರೆ ಇಲ್ಲಿಯವರೆಗೆ ಶಾಸನ ರಕ್ಷಣೆ ಮಾಡುವ ಇಲಾಖೆ ಮೌನ ವಹಿಸಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗುಲ್ಬರ್ಗ ವಿವಿ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಇತಿಹಾಸ ಪ್ರಾಧ್ಯಾಪಕ ಡಾ.ಚನ್ನಬಸಪ್ಪ ಮಲ್ಲಂದಿನ್ನಿ ಯವರು ಈ ಶಾಸನವನ್ನು ಪತ್ತೆ ಹಚ್ಚಿದರು ಈ ಶಾಸನದಲ್ಲಿ ಸಂಸ್ಕೃತ ಭಾಷೆ ಹಾಗೂ ತಮಿಳು ಲಿಪಿ ಬಳಸಲಾಗಿದೆ. ಉತ್ತರ ಕರ್ನಾಟಕದಲ್ಲಿ ಚೋಳ ಅರಸರ ಮೊದಲ ಶಾಸನ ಇದಾಗಿದೆ. 

ಈ ಹಿಂದೆ ಕೋಲಾರ, ಬೆಂಗಳೂರು, ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಚೋಳ ಅರಸರ ಶಾಸನಗಳು ಪತ್ತೆಯಾಗಿವೆ. ಸುಳಿದಿಬ್ಬಗುಡ್ಡದಲ್ಲಿ ಪತ್ತೆಯಾದ ಶಾಸನ ಚೋಳರ ಅರಸರ ಬಗ್ಗೆ ಹೆಚ್ಚಿನ ಅಧ್ಯಯನಕ್ಕೆ ಆಧಾರವಾಗಿದೆ.

ಕರ್ನಾಟಕದ ಉತ್ತರ ಭಾಗದಲ್ಲಿ ಆಡಳಿತ ನಡೆಸುತ್ತಿದ್ದ ಕಲ್ಯಾಣಿ ಚಾಲುಕ್ಯ ಅರಸ ಇಮ್ಮಡಿ ಜಯಸಿಂಹ (ಕ್ರಿ.ಶ. 1013-1043 ) ಮತ್ತು ತಮಿಳುನಾಡಿನಲ್ಲಿ ಆಳ್ವಿಕೆ ಮಾಡುತಿದ್ದ ತಂಜಾವೂರಿನ ಚೋಳ ಅರಸ ಒಂದನೇ ರಾಜೇಂದ್ರ (ಕಿ.ಶ.1014-1044 ) ಮದ್ಯ ನೆಡೆದ ಯುದ್ದವನ್ನು ಈ ಶಾಸನ ವಿವರಿಸುತ್ತದೆ. 

ಉಭಯ ದೊರೆಗಳು ತಮ್ಮ ಸಾಮ್ರಾಜ್ಯ ವಿಸ್ತರಣೆಗೆ ಮಸ್ಕಿಯಲ್ಲಿ ಕಿ.ಶ.1019-1021 ಮಧ್ಯ ಘೋರ ಯುದ್ದ ನಡೆಸಿದರು ಕಲ್ಯಾಣ ಚಾಳುಕ್ಯರ ಅರಸ ಇಮ್ಮಡಿ ಜಯಸಿಂಹ ಈ ಯುದ್ದದಲ್ಲಿ ಪರಾಭವಗೊಂಡರು ಎಂಬ ಇತಿಹಾಸ ತಜ್ಞರ ಹೇಳಿಕೆ ಗೆ ಮಸ್ಕಿಯ ಈ ಶಾಸನ ಸ್ಪಷ್ಟ ಪುರಾವೆ ಒದಗಿಸುತ್ತದೆ. ಈ ಯುದ್ದದ ಬಗ್ಗೆ ಇಲ್ಲಿಯವರೆಗೆ ಅಧಿಕೃತ ದಾಖಲೆ ಎಲ್ಲೂ ದೊರಕಿರಲಿಲ್ಲ. 

ಜೋಳ ಅರಸ ಒಂದನೇ ರಾಜೇಂದ್ರ ತನ್ನ ವಿಜಯದ ಸವಿನೆನಪಿಗಾಗಿ ಸುಳಿ ದಿಬ್ಬ ಬಳಿಯ ಬಂಡೆ ಕಲ್ಲಿಗೆ ಶಾಸನವನ್ನು ಕೆತ್ತಸಿದ್ದಾನೆ ಇದನ್ನು ರಕ್ಷಣೆ ಮಾಡಿ ಮುಂದಿನ ಪೀಳಿಗೆಗೆ ಉಳಿಸುವ ದೃಷ್ಟಿಯಿಂದ ಜನಪ್ರತಿನಿಧಿಗಳು ಹಾಗೂ ಪುರಾತತ್ವ ಇಲಾಖೆ ಮಾಡಬೇಕು ಎಂದು ಎಂದು ಡಾ ಚನ್ನಬಸಪ್ಪ ಮಲ್ಕಂದಿನ್ನಿ ಯವರು ಹೇಳಿದರು.

*ಬಂಡೆಗಲ್ಲು ಶಾಸನದ ವಿವರ* 

ದೊಡ್ಡ ಕಣ ಶಿಲೆಯ ಬಂಡೆಗೆ ಶಾಸನ ಬರೆಯಲಾಗಿದೆ. ಎಡ ಬದಿಗೆ ಆನೆ, ಎರಡು ಮೀನು, ಸಿಂಹ, ಛತ್ರಿ, ಚಾಮರ, ನಂದಿ, ಬೀಸಣಿಕೆ ದೀಪ ಹಾಗೂ ಅಷ್ಟಮಂಗಲ ಚಿತ್ರಗಳಿವೆ. ಅಂದಿನ ಕಾಲದಲ್ಲಿ ಅರಸರ ಪಟ್ಟಾಭಿಷೇಕ ಮೊದಲಾದ ವಿಶೇಷ ಸಂದರ್ಭಗಳಲ್ಲಿ ಈ ಚಿತ್ರಗಳನ್ನು ಬರೆಸಲಾಗುತ್ತಿತ್ತು. ಬಲ ಬದಿಯ ಶಾಸನದಲ್ಲಿ ಕಿರೀಟದಂತಿರುವ ಚೋಳ ಅರಸ ಒಂದನೇ ರಾಜೇಂದ್ರನನ್ನು ಉಲ್ಲೇಖಿಸಿದ್ದು, 'ಪರ ಕೇಸರಿ ವರ್ಮ' ಎಂಬ ಬಿರುದಿನೊಂದಿಗೆ ಹೊಗಳಿದ್ದನ್ನು ಮಸ್ಕಿಯ ಶಾಸನ ವಿವರಿಸುತ್ತದೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ