ಹಡಗಲಿ ಗ್ರಾಮದಲ್ಲಿ ವಿಶೇಷವಾಗಿ ನಡೆದ ಸಂವಿಧಾನ ಜಾಗೃತಿ ರಥ (ನೀಲಿ ಮಯವಾದ ಕುಂಭಗಳು)


ಮಸ್ಕಿ : ತಾಲೂಕಿನ ತಲೇಖಾನ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಡಗಲಿ ಗ್ರಾಮದಲ್ಲಿ ಸಂವಿಧಾನ ಜಾಗೃತಿ ರಥ ಅದ್ದೂರಿಯಾಗಿ ಜರುಗಿತು. ಕಾರ್ಯಕ್ರಮದಲ್ಲಿ ಮಹಿಳೆಯರು ವಿಶೇಷವಾಗಿ ಕುಂಭ ಗಳಿಗೆ ನೀಲಿ ಬಣ್ಣದ ವಸ್ತ್ರವ ಜನರ ಗಮನ ಸೆಳೆಯಿತು.

 ಈ ವೇಳೆ,ಮಾತನಾಡಿದ ಗ್ರಾಮ ಪಂಚಾಯಿತಿ ಅಧ್ಯಕ್ಷ ಅವರು, ಪ್ರಪಂಚದ ಅತೀ ದೊಡ್ಡ ಪ್ರಜಾಪ್ರಭುತ್ವ ಹೊಂದಿರುವ ರಾಷ್ಟ್ರ ನಮ್ಮ ಭಾರತ ಅನೇಕ ದೇಶಗಳ ಸಂವಿಧಾನವನ್ನು ನಡೆಸಿ ದೇಶಕ್ಕೆ ಹೊಂದುವಂತೆ ಡಾ. ಬಿ ಆರ್ ಅಂಬೇಡ್ಕರ್ ಸಂವಿಧಾನವನ್ನು ರಚಿಸಿದ್ದಾರೆ ಸಂವಿಧಾನವನ್ನು ಅರಿತು ಕೊಳ್ಳುವುದರಿಂದ ದೇಶಕ್ಕೆ ಒಳಿತಾಗುತ್ತಿದೆ ಮುಂದಿನ ಪೀಳಿಗೆಗೆ ಸಂವಿಧಾನ ಅವಶ್ಯಕ ವಾಗಿರುತ್ತದೆ ಎಂದರು

ಈ ಸಂದರ್ಭದಲ್ಲಿ ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಡೊಳ್ಳು ಕುಣಿತ,ಬಂಜಾರ ಗಾಯನವುವಿಜೃಂಭಣೆಯಿಂದ ನಡೆಯಿತು.

ಅಂಬೇಡ್ಕರ್ ಪ್ರತಿಮೆ ರಥವನ್ನು ಸ್ವಾಗತಿಸಿಕೊಂಡು ತಲೆಖಾನ್ ಗ್ರಾಮ ಪಂಚಾಯತಿಯವರೆಗೂ ಕಲಾತಂಡಗಳಿಂದ ಹಾಗೂ ಸಂಘಟನೆ ಅವರು ಸೇರಿಕೊಂಡು ಅದ್ದೂರಿಯಾಗಿ ಮೆರವಣಿಗೆ ಮೂಲಕ ಜಾಗೃತಿ ಜಾಥಾ ರಥವನ್ನು ನಡೆಸಲಾಯಿತು.

ಈ ಕಾರ್ಯಕ್ರಮದಲ್ಲಿ ತಹಶೀಲ್ದಾರರಾದ ಅರಮನೆ ಸುಧಾ, ದೇವರಾಜ್ ವ್ಯವಸ್ಥಾಪಕರು ಸಮಾಜ ಕಲ್ಯಾಣ ಇಲಾಖೆ ಲಿಂಗಸ್ಗೂರು,ಉಮೇಶ್ ಇಓ ತಾಲೂಕಾ ಪಂಚಾಯತ ಮಸ್ಕಿ,ಗ್ರಾಮ ಪಂಚಾಯಿತಿ ಅಧ್ಯಕ್ಷರು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಲಕ್ಷ್ಮಿಕಾಂತ್ ಮತ್ತು ಸಿಬ್ಬಂದಿ ಹಾಗೂ ಗ್ರಾಮ ಪಂಚಾಯತಿ ಸರ್ವ ಸದಸ್ಯರು, ವಿವಿಧ ಸಂಘಟನೆಯ ಮುಖಂಡರು ಆಶಾ ಕಾರ್ಯಕರ್ತರು, ಶಾಲಾ ಶಿಕ್ಷಕರು,ವಿದ್ಯಾರ್ಥಿಗಳು ಗ್ರಾಮದ ಗುರು ಹಿರಿಯರು ಉಪಸ್ಥಿತರಿದ್ದರು.


 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ