"ಶ್ರೀ ಗುರುಕೊಟ್ಟೂರೇಶ್ವರ ರಥದ ತೇರುಗಾಲಿ ಹೊರಕ್ಕೆ"
ಕೊಟ್ಟೂರು: ಪಟ್ಟಣದ ಆರಾಧ್ಯ ದೈವ ಶ್ರೀ ಗುರುಬಸವೇಶ್ವರ ಸ್ವಾಮಿಯ ಮಹಾರಥೋತ್ಸವದ ಪ್ರಯುಕ್ತ ಬುಧವಾರ ತೇರುಗಾಲಿಯನ್ನು ಸಂಜೆ ೫ ಗಂಟೆಗೆ ಹೊರಗೆ ಹಾಕಿದರು. ಮಾರ್ಚ್ ೪ ರಂದು ವಿಜೃಂಭಣೆಯಿಂದ ಜರುಗಲಿರುವ ಮಹಾರಥೋತ್ಸವದ ಪ್ರಯುಕ್ತ ಸಂಜೆ ಹಿರೇಮಠದಿಂದ ವಾದ್ಯಮೇಳದೊಂದಿಗೆ ತೇರುಗಡ್ಡೆಯಿಂದ ಬಸ್ ನಿಲ್ದಾಣದ ಹತ್ತಿರ ಬಂದು ಸುಸೂತ್ರವಾಗಿ ತಲುಪಿತು. ನೆರೆದಿದ್ದ ಭಕ್ತರು ಶ್ರೀ ಗುರು ಕೊಟ್ಟೂರು ದೊರೆಯೇ ನಿನಗಾರು ಸರಿಯೇ... ಸರಿ ಸರಿ ಎಂದವರ ಹಲ್ಲು ಮುರಿಯೇ ಬಹುಪರಾಕ್... ಎಂಬ ಜಯಘೋಷ ಮೊಳಗಿಸುತ್ತ ರಥದ ಗಡ್ಡೆಯನ್ನು ಹೊರಹಾಕಲಾಯಿತು. ಕ್ರಿಯಾಮೂರ್ತಿಗಳಾದ ಶ್ರೀ ಶಿವಪ್ರಕಾಶ ದೇವರು ರಥದ ಗಡ್ಡೆಯನ್ನು ಹತ್ತಿ ಸುಗಮವಾಗಿ ತೇರುಗಾಲಿ ಹೊರಹಾಕಲಾಯಿತು. ರಾತ್ರಿ ರಥದ ಹತ್ತಿರ ಗುಗ್ಗರಿ ಪೂಜೆ ನಡೆಯುತ್ತದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ