"ಮತಾಂತರವೆನ್ನುವುದು ಕ್ಯಾನ್ಸರ್ ಇದ್ದಂತೆ : ಪ್ರಮೋದ್ ಮುತಾಲಿಕ್"
ಕೊಟ್ಟೂರು: ಮತಾಂತರ ಅನ್ನೋದು ಕ್ಯಾನ್ಸರ್ ಪಿಡುಗು ಇದ್ದಂತೆ ಕ್ಯಾನ್ಸರ್ ಪಿಡುಗು ಒಂದು ಸಲ ಬಂತು ಅಂದ್ರೆ ಅದು ಇಡಿ ದೇಹ ಹಾಳು ಮಾಡಿ ಹೋಗುತ್ತದೆ.ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದರು. ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕಿನ ದೂಪದಹಳ್ಳಿ ತಾಂಡಾದಲ್ಲಿ ಕರಿಯಮ್ಮ ದೇಗುಲದ ಕಳಸಾರೋಹಣ ಮತ್ತು ಮೂರ್ತಿ ಸ್ಥಾಪನೆಯನ್ನು ದೀಪ ಬೆಳಗಿಸುವ ಮೂಲಕ ಮತ್ತು ಬಂಜಾರ ಧರ್ಮಗುರುಗಳು ನಗಾರಿ ಬಾರಿಸಿ ಚಾಲನೆ ನೀಡಿದರು ಲಂಬಾಣಿ ಸಮಾಜ ಬುಡಕಟ್ಟು ಜನಾಂಗಕ್ಕೆ ಸೇರಿದವರು ಬಡತನವನ್ನ ಟಾರ್ಗೆಟ್ ಮಾಡಿ ಮತಾಂತರ ಮಾಡುತ್ತಿದ್ದಾರೆ. ಬುಡಕಟ್ಟು ಸಮುದಾಯದ ವಿಶೇಷ ಸಂಪ್ರದಾಯ ಹಾಳು ಮಾಡುತ್ತಿದ್ದಾರೆ. ಬಂಜಾರ ಸಮುದಾಯದ ಜನರು ಜಾಗೃತಿ ಹೊಂದಬೇಕು. ಧರ್ಮಗುರುಗಳು ಬಂಜಾರರಲ್ಲಿ ಜಾಗೃತಿ ಮೂಡಿಸಬೇಕು. ಜನರನ್ನು ಮತಾಂತರದಿಂದ ಹೊರತರಬೇಕಿದೆ. ಕ್ರಿಶ್ಚಿಯನ್ ಮಷಿನರಿಗಳು ವ್ಯವಸ್ಥಿತವಾಗಿ ಕೆಲಸ ಮಾಡುತ್ತಿವೆ. ಮತಕ್ಕಾಗಿ ಮತಾಂತರ ಮಾಡೋದು ತಡೆಯಬೇಕು ಎಂದರು.
ಅಯೋಧ್ಯೆಯ ಬಳಿಕ ಮಥುರಾ, ಕಾಶಿಯಲ್ಲಿ ಪ್ರಾಣ ಪ್ರತಿಷ್ಠಾಪನೆ ಮಾಡಬೇಕು ಅನ್ನೋ ವಿಚಾರ ಪ್ರಧಾನಿ ಮೋದಿ ನಡೆ ವಿಚಾರಕ್ಕೆ, ನಾನು ಮುಸ್ಲಿಂ ಸಮುದಾಯದವರಲ್ಲಿ ಮನವಿ ಮಾಡುವೆ ಸಾವಿರಾರು ದೇವಾಲಯ ಒಡೆದು ಮಸೀದಿಗಳಾಗಿ ಪರಿವರ್ತಿಸಿದ್ದಿರಿ ಕಾಶಿ, ಮಥುರಾ ಸೇರಿ ಮೂರು ದೇವಸ್ಥಾನ ಬಿಟ್ಟು ಕೊಡಿ ಎಂದು ಗುಡುಗಿದರು.
ಬಜೆಟ್ ಬಗ್ಗೆ ಮಾತಾಡಿದ ಅವರು ರಾಜ್ಯದಲ್ಲಿ ಬಜೆಟ್ ಮಂಡನೆ ವಿಚಾರ ಯಾವುದೇ ಸರ್ಕಾರ ಬಜೆಟ್ ಮಂಡಿಸಿದ್ರೂ, ಒಳ್ಳೆಯದು, ಕೆಟ್ಟದು ಬಜೆಟ್ ಅಂತ ಇರುವುದಿಲ್ಲ. ಮಂಡನೆ ಮಾಡಿದ್ದನ್ನು ಜಾರಿಗೆ ತರಬೇಕು. ಈ ಹಿಂದೆ ಪಂಚವಾರ್ಷಿಕ ಯೋಜನೆಗಳು ಅಂತ ಇತ್ತು ಈಗ ಬಜೆಟ್ ಅಂತ ಮಾಡಿದ್ದಾರೆ. ಘೋಷಣೆ ಮಾಡಿದ್ದನ್ನು ಜಾರಿಗೆ ತರಬೇಕು ಎಂದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ