ವಿಜೃಂಭಣೆಯಿಂದ ಜರುಗಿದ ಭರತ ಹುಣ್ಣಿಮೆ

 

ಕೊಟ್ಟೂರು : ಉಜ್ಜಿನಿಯಲ್ಲಿ ನೆಡೆದ ಭರತ ಹುಣ್ಣಿಮೆಯ ಪ್ರಯುಕ್ತ ಉಜ್ಜಿನಿ ಶ್ರೀ ಜಗದ್ಗುರು ಮರುಳಸಿದ್ದೇಶ್ವರ ಸ್ವಾಮಿಯ ವಿಜಯ ಯಾತ್ರೆಯು ಶುಕ್ರವಾರ ಸಂಜೆ ಆರಂಭಗೊಂಡಿತು ಉಜ್ಜಿನಿಯ ಪಾದಗಟ್ಟೆ ಪ್ರದಕ್ಷಿಣೆ ಮಾಡಿದ ನಂತರ ಸ್ವಾಮಿಯು ಒಬ್ಬತ್ತು ಪಾದಗಟ್ಟೆಗಳಿಗೆ ದಯಮಾಡಿಸಿತು. ಹೊರವಲಯದ ಸಿದ್ದನವರ್ತಿ ವಟ ವೃಕ್ಷದಲ್ಲಿ ದಯಮಾಡಿಸಿದ ನಂತರ ಬೆಳದೇರಿ , ನಾಗೇನಹಳ್ಳಿ, ಬೆನಕನಹಳ್ಳಿ, ಉಜ್ಜಿನಿಯ ಮೂಗಣ್ಣ ಗುಡ್ಡಕ್ಕೆ ತೆರಳಿ ನಂತರ ಕಾಳಾಪುರ ಗ್ರಾಮಕ್ಕೆ ದಯಮಾಡಿಸಿ ನಂತರ ನಡು ಮಾವಿನಹಳ್ಳಿ ,ಹಾರಕನಾಳು ಗ್ರಾಮಕ್ಕೆ ದಯಮಾಡಿಸಿ ನಂತರ ಸ್ವಾಮಿಯು ಉಜ್ಜಿನಿ ಹೊರ ವಲಯದ ಕಾಶಿ ಬಸಪ್ಪ ದೇವಸ್ಥಾನಕ್ಕೆ ಆಗಮಿಸಿ ಹುಣ್ಣಿಮೆ ದಿನವಾದ ಭಾನುವಾರ ಬೆಳಗ್ಗೆ ಶ್ರೀ ಜಗದ್ಗುರು ಮರುಳಸಿದ್ದೇಶ್ವರ ಸ್ವಾಮಿಯು ಶ್ರೀ ಪೀಠಕ್ಕೆ ಆಗಮಿಸುತ್ತದೆ. ಉಜ್ಜಿನಿ ಶ್ರೀ ಮರುಳ ಸಿದ್ದೇಶ್ವರ ಸ್ವಾಮಿಯು ವಿಜಯ ಯಾತ್ರೆಯನ್ನು ಮುಗಿಸಿಸಿಕೊಂಡು ಉಜ್ಜಿನಿ ಪೀಠಕ್ಕೆ ಭಾನುವಾರ ಸ್ವಾಮಿಯು ದಯಮಾಡಿಸಿದಾಗ ಮಠದ ಪರಿವಾರದವರು ಶ್ರೀ ಮರುಳ ಸಿದ್ದೇಶ್ವರ ಸ್ವಾಮಿಗೆ ವಿಜಯ ಯಾತ್ರೆಯಲ್ಲಿ ದೃಷ್ಟಿತಾಗಿತ್ತೆಂದು ದೃಷ್ಟಿ ನಿವಾರಣೆ ಮಾಡಲಾಯಿತು. ನಂತರ ಭಕ್ತಾದಿಗಳು ಶ್ರೀ ಮರುಳ ಸಿದ್ದೇಶ್ವರ ಸ್ವಾಮಿಯ ದರ್ಶನ ಮಾಡಿ ಉಜ್ಜಿನಿ ಸದ್ಧರ್ಮ ಪೀಠದ ಜಗದ್ಗುರು ಶ್ರೀ ಸಿದ್ದಲಿಂಗ ರಾಜ ದೇಶಿ ಕೇಂದ್ರ ಶಿವಾಚಾರ್ಯ ಭಗವತ್ಪಾದ ಮಹಾ ಸ್ವಾಮೀಜಿಗಳವರ ಆಶೀರ್ವಾದ ಪಡೆದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ