ಸಂಗಮೇಶ್ವರ ಗ್ರಾಮದಲ್ಲಿ ಮೂರನೇ ದಿನ ವಿಶೇಷ ಶಿಬಿರ ಕಾರ್ಯಕ್ರಮ
ಕೊಟ್ಟೂರು ಪಟ್ಟಣದ ಗಂಗೋತ್ರಿ ಬಿ ಎಸ್ ಡಬ್ಲ್ಯೂ ಪದವಿ ಮಹಾವಿದ್ಯಾಲಯ ಕೊಟ್ಟೂರು ಇವರು ಕೊಟ್ಟೂರು ತಾಲೂಕು ಅಂಬಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಸಂಗಮೇಶ್ವರ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿರುವ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರದ ಮೂರನೇ ದಿನವಾದ ದಿನಾಂಕ 4-02-2024 ಬೆಳಗ್ಗೆ 11 ರಿಂದ ಗಂಟೆಯಿಂದ 2.00 ಗಂಟೆವರೆಗೆ ವಿಶೇಷ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ವಿವೇಕಾನಂದ ಸ್ವಾಮಿ ಇವರು ಶಿಬಿರಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷಾ ಕಾರ್ಯಗಾರ ನಡೆಸಲಾಯಿತು. ಸಂಜೆ 7:30 ಕ್ಕೆ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು, ಇದರ ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀ ಅಂಚೆ ಕೊಟ್ರೇಶ ಅಂಚೆ ಇಲಾಖೆ ಕೊಟ್ಟೂರು ಇವರು ಮಾತನಾಡಿ ಪ್ಲಾಸ್ಟಿಕ್ ಬಳಕೆಯನ್ನು ನಿಲ್ಲಿಸಿ ಸಾವಯವ ಕೃಷಿಗೆ ಪ್ರೋತ್ಸಾಹ ನೀಡುವಲ್ಲಿ ಸಗಣಿಗೊಬ್ಬರ ವನ್ನು ಉಪಯೋಗಿಸಲು ಹಾಗೂ ರಾಸಾಯನಿಕ ಗೊಬ್ಬರಗಳನ್ನು ಬಳಸಬಾರದೆಂದು ಸೂಚನೆ ನೀಡಿದರು. ಅದೇ ರೀತಿ ಭೂಮಿ ಮೇಲಿನ ಎಲ್ಲ ಜೀವಿಗಳನ್ನು ಉಳಿಸಲು ಕರೆಕೊಟ್ಟರು. ಜಲ ಸಂಪನ್ಮೂಲಗಳ ರಕ್ಷಣೆಯ ಬಗ್ಗೆ ಎಂದು ತಮ್ಮ ವಿಚಾರ ತಿಳಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ಎಂ ಎಸ್ ಶಿವನಗುತ್ತಿ ಅಭಿವೃದ್ಧಿ ಅಧಿಕಾರಿ ಜೀವ ವಿಮಾ ನಿಗಮ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಬೂದಳ ಆಂಜನೇಯ ಸ್ವಾಮಿ ದೇವಸ್ಥಾನ ಟ್ರಸ್ಟ್ ಅಧ್ಯಕ್ಷರು ವಿಶ್ವನಾಥ ಸ್ವಾಮಿ, ಕೊಟ್ರೇಶ್, ಎಸ್ ಎಂ ಮಂಜುನಾಥಯ್ಯ ಎಲ್ ಮೌನೇಶ್ . ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಗುರುಬಸವರಾಜ ಎ ಎಂ.ಎಂ. ಶಿಬಿರದ ಸಂಯೋಜಕರಾದ ಶ್ರೀ ಶಶಿಕಿರಣ ಕೆ, ಕೊಟ್ರೇಶ ಪಿ.ಕೆ.ಎಂ ಕಾರ್ಯಕ್ರಮದಲ್ಲಿ ಉಪಸ್ಥಿತಿ ಇದ್ದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆದವು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ