ತಾಲೂಕು ಕಚೇರಿಯಲ್ಲಿ ಕಾಯಕ ಶರಣರ ಜಯಂತಿ ಆಚರಣೆ ತಹಶೀಲ್ದಾ‌ರ್ ಅಮರೇಶ್‌ ಜಿ ಕೆ

"ಕಾಯಕ ಶರಣರ ವಚನಗಳು ಸರ್ವಕಾಲಕ್ಕೂ ಶ್ರೇಷ್ಠ"

ಕೊಟ್ಟೂರು: ಕಾಯಕ ಶರಣರನ್ನು ಅಂದು ಪಂಚಕರ್ಮರು ಅಂತ ಕರೆಯಲಾಗುತ್ತಿತ್ತು. ಅವರು ಕಾಯಕ, ದಾಸೋಹ ಹಾಗೂ ವಚನ ಗಳಿಂದ ಮೂಲಕ ಸಮಾಜವನ್ನು ತಿದ್ದುವಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಂಡವರು ಕಾಯಕ ಶರಣರ ವಚನಗಳು ಸರ್ವಕಾಲಕ್ಕೂ ಶ್ರೇಷ್ಠ ತಹಶೀಲ್ದಾ‌ರ್ ಅಮರೇಶ್ ಜಿ. ಕೆ ಎಂದು ಹೇಳಿದರು.

ಪಟ್ಟಣದ ತಾಲೂಕು ಆಡಳಿತ ಕಚೇರಿ ಯಲ್ಲಿ ಶನಿವಾರದಂದು ಕಾಯಕ ಶರಣರ ಜಯಂತಿಯನ್ನು ಆಚರಿಸಲಾಯಿತು. ಶರಣರ ಭಾವಚಿತ್ರಕ್ಕೆ ತಾಲೂಕು ದಂಡಧಿಕಾರಿಗಳಾದ ಅಮರೇಶ್ ಜಿ.ಕೆ ರವರು ಪುಷ್ಪ ನಮನ ಗಳನ್ನು ಸಲ್ಲಿಸಿ ನಂತರ ಮಾತನಾಡಿದರು ಕಾಯಕ ಶರಣರು ಎಂದು ಕರೆಸಿಕೊಳ್ಳುವ ಮಾದರ ಚೆನ್ನಯ್ಯ, ಮಾದರ ಧೂಳಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ ಹಾಗೂ ಉರಲಿಂಗಪೆದ್ದಿ ಅವರು ತಮ್ಮ ಕಾಯ ಕದಿಂದ ಗುರುತಿಸಿಕೊಂಡವರು ಕಾಯಕದ ಮೇಲೆ ಜಾತಿ ಮಾಡಬಾರದು ಯಾವ ಕಾಯ ಕವು ದೊಡ್ಡದಲ್ಲ ಮನಸ್ಸಿನಿಂದ ಮಾಡುವ ಯಾವ ಕಾಯಕವೂ ಸಣ್ಣದಲ್ಲ ಎಂದು ಸಾರಿದ ಮಹಾನಬಾವರು ಈ ಕಾಯಕ ಶರಣರು ಅವರ ವಚನಗಳು ಸರ್ವಕಾಲಕ್ಕೂ ಶ್ರೇಷ್ಠವಾಗಿದೆ ಎಂದು ಅಭಿಪ್ರಾಯಪಟ್ಟರು.

ಮಾದರ ಚೆನ್ನಯ್ಯ, ರವರು ಬಸವಣ್ಣಗಿಂತ ಹಿರಿಯರಾಗಿದ್ದು, ಚರ್ಮದ ಚಪ್ಪಲಿ ಹೊಲೆಯುವ ಕಾಯಕ ಮಾಡುತ್ತಿದ್ದರು. ಅವರು ತಮ್ಮ ಕಾಯಕದಿಂದಲೇ ಶಿವನನ್ನು ಒಲಿಸಿಕೊಂಡು, ಅಂಬಲಿಯನ್ನು ಸೇವೆಗೆ ನೀಡಿದ ಮಹಾನ್ ಕಾಯಕಯೋಗಿ ಆಗಿದ್ದರು. ತಮ್ಮ ವಚನಗಳ ಮೂಲಕ ಜನಸಾಮಾನ್ಯರಿಗೆ ಸಮಾಜದಲ್ಲಿದ್ದ ಅನೇಕ ಮೇಲು ಕೀಳು ಎಂಬ ಅಸಮಾನತೆಯನ್ನು ದೂರ ಮಾಡುವಲ್ಲಿ ಮಾದರ ಚೆನ್ನಯ್ಯ ರವರು ಅಗ್ರಗಣ್ಯರಾಗಿದ್ದರೆ. 

ಟಿ.ಹನುಮಂತಪ್ಪ (ವಕೀಲರು)ಮಾದಾರ ಧೂಳಯ್ಯ ಒಬ್ಬ ಪ್ರಮುಖ ವಚನಗಾರರಾಗಿದ್ದರು. ಇವರು ತಮ್ಮ ಜೀವನದಲ್ಲಿ ಒಟ್ಟು 300ಕ್ಕೂ ಹೆಚ್ಚು ವಚನಗಳು ರಚಿಸಿದ್ದಾರೆ. ದೋಹರ್ ಕಕ್ಕಯ್ಯ ರವರು ಬರೆದ ಒಟ್ಟು ವಚನಗಳಲ್ಲಿ ಸಿಕ್ಕಿದ್ದು ಕೇವಲ ಆರು ವಚನಗಳು ಮಾತ್ರ ಸಮಗಾರ ಹರಳಯ್ಯ ಹಾಗೂ ಉರಿ ಲಿಂಗಪೆದ್ದಿ ಇಬ್ಬರು

ಮಹಾನ್ ವ್ಯಕ್ತಿಗಳಾಗಿದ್ದರು ಸಮಗಾರ ಹರಳಯ್ಯ ಒಟ್ಟು 366 ವಚನಗಳನ್ನು ರಚಿಸಿದ್ದಾರೆ ಎಂದು ಎಂದು ತಿಳಿದುಬಂದಿದೆ ಈ ಕಾಯಕ ಶರಣರು ತಮ್ಮ ಕಾಯಕದಿಂದಲೇ ಜನರಿಗೆ ಸನ್ಮಾರ್ಗ ತೋರಿಸಿಕೊಟ್ಟವರು ಇಂಥ ಶರಣರ ವಚನಗಳನ್ನು ನಾವೆಲ್ಲರೂ ಬೆಳಸಿ ಕೊಳ್ಳೋಣ ಹೇಳಿದರು.

ಈ ಸಂದರ್ಭದಲ್ಲಿ ಹಾಲಸ್ವಾಮಿ ಕಂದಾಯ ನಿರೀಕ್ಷಕರು ಅಜ್ಜಪ್ಪ ಸಿಆರ್‌ಪಿ ಕೊಲ್ಲಾರಪ್ಪ ಜಿ ಕೊಟ್ರೇಶ್ ಭರ್ಮಪ್ಪ ಮತ್ತು ತಾಲೂಕು ಆಡಳಿತದ ಸಿಬ್ಬಂದಿ ಮತ್ತಿತರರು ಉಪಸ್ಥಿತರಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ