ಪ್ರಾಥಮಿಕ ಆರೋಗ್ಯ ಕೇಂದ್ರ ಆನ್ವರಿಯಲ್ಲಿ ಬೇಟಿ ಬಚಾವ್ ಭೇಟಿ ಪಡಾವೋ ಕಾರ್ಯಕ್ರಮ.

ಹಟ್ಟಿ- ಚಿನ್ನದ ಗಣಿ ಸಮೀಪದ ಅನ್ವರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ.ಕೇಂದ್ರ ಸರ್ಕಾರದ ಯೋಜನೆಗಳಲ್ಲಿ ಒಂದಾದ ಬೇಟಿ ಬಚಾವ್ ಭೇಟಿ ಪಡಾವೋ ಕಾರ್ಯಕ್ರಮವನ್ನು. ಗ್ರಾಮ ಪಂಚಾಯಿತಿ ಅಭಿವೃದ್ಧಿ ಯೋಜನೆ ಅಧಿಕಾರಿಗಳಾದ ಕುಮಾರಿ ದೇವಮ್ಮ ಎಚ್.ಸರಕಾರಿ ಪ್ರೌಢಶಾಲೆಯ ಮುಖ್ಯ ಗುರುಗಳಾದ ಶಂಕ್ರಪ್ಪ ಸಕ್ರಿ ಸರ್.ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಧಿಕಾರಿಗಳಾದ ಕುಮಾರಿ ಸುರೇಖಾ ಪಿ.ಅಂಗನವಾಡಿ ಮೇಲ್ವಿಚಾರಕಿ ಶ್ರೀಮತಿ ಈರಮ್ಮ ಎಚ್.ಶಶಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ಮಾಡಿದರು.

ಬೇಟಿ ಬಚಾವ್ ಭೇಟಿ ಪಡಾವೋ ಯೋಜನೆಯು ಹರಿಯಾಣದ ಪಾಣಿಪತ್ ನಲ್ಲಿ 2015ರಲ್ಲಿ ಜನವರಿಯಲ್ಲಿ ಪ್ರಾರಂಭವಾಯಿತು. ಭಾರತದ 640 ಜಿಲ್ಲೆಗಳನ್ನು ಒಳಗೊಂಡು ಬಿಬಿಬಿಪಿ ಯ ಅಖಿಲ ಭಾರತ ವಿಸ್ತರಣೆಗೆ ಮಾರ್ಚ್ 8-2018 ರಂದು ರಾಜಸ್ಥಾನದ ಝೋಜುಮದಲ್ಲಿ ಪ್ರಾರಂಭವಾಯಿತು.ಇದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ.ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ.ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯಗಳ ಪ್ರಯತ್ನವಾಗಿದೆ.ಭಾರತದಲ್ಲಿ ಮಕ್ಕಳ ಲೈಂಗಿಕ ಅನುಪಾತ ಕ್ಷಣಿಸುತ್ತಿದೆ.ಅದರಲ್ಲೂ ಹೆಣ್ಣುಮಕ್ಕಳ ಲೈಂಗಿಕ ಅನುಪಾತ ಕ್ಷಣಿಸುತ್ತಿದೆ.ಏಕೆಂದರೆ 1000 ಪುರುಷರಿಗೆ ಹೆಣ್ಣು ಮಕ್ಕಳು ಕಡಿಮೆ ಆಗುತ್ತಾರೆ.ಏಕೆಂದರೆ ಭಾರತ ಒಂದು ಪುರುಷ ಪ್ರಧಾನ ರಾಷ್ಟ್ರ.ಹೆಣ್ಣು ಮಕ್ಕಳ ಜನನ ಅಥವಾ ಹೆರಿಗೆಯನ್ನು ತಡೆಯಲಾಗುತ್ತದೆ ಹೆಣ್ಣು ಮಗುವಿನ ಜನನವನ್ನು ಕಡಿಮೆ ಮಾಡುತ್ತಾರೆ.ಇದನ್ನು ತಡೆಗಟ್ಟಬೇಕೆಂದು ಕೇಂದ್ರ ಸರ್ಕಾರವು ಭೇಟಿ ಬಚಾವು ಬೇಟಿ ಪಡಾವೋ ಯೋಜನೆಯನ್ನು ಜಾರಿಗೆ ತಂದಿದೆ ಎಂದು ಅಂಗನವಾಡಿ ಮೇಲ್ವಿಚಾರಕಿ ಈರಮ್ಮ ಎಚ್.ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಬಾಲ್ಯ ವಿವಾಹ ತಡೆಯುವ ಕುರಿತು ಹಾಗೂ ಆರೋಗ್ಯದ ಕುರಿತು ವೈದ್ಯಧಿಕಾರಿಗಳಾದ ಸುರೇಖಾ ಪಿ ಮಾತನಾಡಿದರು.

ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆಯರು.ಹಾಗೂ ಸಹಾಯಕಿಯರು.ಮಕ್ಕಳ ತಾಯಂದಿರು.ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿಯರು.ಮಹಿಳೆಯರು ಭಾಗವಹಿಸಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ