ದಲಿತ ನಾಯಕರಿಗೆ ಒಂದು ಬಾರಿಯಾದರೂ ಮುಖ್ಯಮಂತ್ರಿ ಸ್ಥಾನ ನೀಡುವಂತೆ: ತಗ್ಗಿನಕೇರಿ ಹನುಮಂತಪ್ಪ ವಕೀಲರು ಒತ್ತಾಯ
*ಆಶಯ ಹೊತ್ತ ದಲಿತರಿಗೆ ನಿರಾಸೆ ಭಾವನೆ ನೀಡಿದಂತೆ :ಚಲವಾದಿ ಮಹಾಸಭಾದ ರಾಜ್ಯ ಸಹ ಕಾರ್ಯದರ್ಶಿ ಅಜ್ಜಯ ಹೊಟ್ಟೇರ್ ಮನವಿ *
ಕೊಟ್ಟೂರು ತಾಲೂಕಿನ ಪ್ರವಾಸಿ ಮಂದಿರದಲ್ಲಿ ಚಲವಾದಿ ಮಹಾಸಭಾ ಹಾಗೂ ದಲಿತ ಒಕ್ಕೂಟಗಳಿಂದ ಸಮಾಜ ಕಲ್ಯಾಣ ಸಚಿವರಾದ ಡಾಕ್ಟರ್ ಹೆಚ್ ಸಿ ಮಾದೇವಪ್ಪ ಇವರನ್ನು ಲೋಕಸಭೆ ಚುನಾವಣೆಗೆ ಸ್ಪರ್ಧಿಸಲಿಕ್ಕೆ ಒತ್ತಡ ಹೆರುತ್ತಿರುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯನ್ನು ಕರೆಯಲಾಗಿತ್ತು.
ಚಲವಾದಿ ಮಹಾಸಭಾದ ರಾಜ್ಯ ಸಹ ಕಾರ್ಯದರ್ಶಿ ಅಜ್ಜಯ ಹೊಟ್ಟೇರ್ ಅವರು ಮಾತನಾಡಿ ಇಡೀ ರಾಜ್ಯದ ಶೋಷಿತ ಹಾಗೂ ತುಳಿತಕ್ಕೆ ಒಳಪಟ್ಟಿರುವ ದಮನಿತರ ಸಮುದಾಯಗಳ ಪ್ರತಿ ಬಾರಿ ಕೂಡ ಮುಖ್ಯಮಂತ್ರಿ ಸ್ಥಾನದವರೆಗೆ ದಲಿತ ಮುಖಂಡರುಗಳು ದುಡಿಯುತ್ತಾರೆ ಇನ್ನೇನು ಮುಖ್ಯಮಂತ್ರಿ ಸ್ಥಾನ ದೊರೆಯುತ್ತದೆ .ಎಂದು ಆಶಯ ಹೊತ್ತ ದಲಿತರು ನಿರಾಸೆ ಭಾವನೆ ಉಂಟಾಗುತ್ತದೆ. ಈ ಹಿಂದೆ ಸನ್ಮಾನ್ಯ ಶ್ರೀ ಕೆಪಿಸಿಸಿ ರಾಷ್ಟ್ರ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ್ ಖರ್ಗೆ ಅವರು ಮುಖ್ಯಮಂತ್ರಿ ಆಗುವ ಕನಸು ಒತ್ತು ದಲಿತರಿಗೆ ನಿರಾಶ ಭಾವನೆ ಉಂಟುಮಾಡಿದೆ ಅವರನ್ನು ದಿಢೀರನೆ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರನ್ನಾಗಿ ಮಾಡಿದರು ಸಂತೋಷದ ಸಂಗತಿ ಆದರೆ ಮುಖ್ಯಮಂತ್ರಿ ಆಗಲಿಲ್ಲ ಎಂಬ ಕೊರಗು ದಲಿತರನ್ನು ಇಂದಿಗೂ ಕಾಡುತ್ತದೆ ಇದಕ್ಕೆ ಅವಕಾಶ ಏಕೆ ತಪ್ಪುತ್ತದೆ ಎಂಬ ಕೊರಗು ಇಂದಿಗೂ ಇದೆ ಎಂದರು.
ತಗ್ಗಿನಕೇರಿ ಹನುಮಂತಪ್ಪ ವಕೀಲರು ಮಾತನಾಡಿ ನಾನು ಮತ್ತು ನಮ್ಮ ದಲಿತರು ಕೆಪಿಸಿಸಿ ಅಧ್ಯಕ್ಷರಲ್ಲಿ ಹಾಗೂ ಡಿಕೆ ಶಿವಕುಮಾರ್ ಮತ್ತು ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ಕೇಳಿಕೊಳ್ಳುವುದೇನೆಂದರೆ ದಯಮಾಡಿ ತಾವುಗಳು ಅರ್ಹತೆಯನ್ನು ಅರ್ಹತೆ ಇರುವ ದಲಿತ ನಾಯಕರಿಗೆ ಒಂದು ಬಾರಿಯಾದರೂ ಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಕೇಳುತ್ತಾ ಹೆಚ್ ಸಿ ಮಾದೇವಪ್ಪ ಜಿ ಪರಮೇಶಪ್ಪ ಹಾಗೂ ಕೆ ಎಚ್ ಮುನಿಯಪ್ಪ ಇವರನ್ನು ಲೋಕಸಭೆ ಚುನಾವಣೆ ಸ್ಪರ್ಧೆಯಿಂದ ದೂರವಿರಿಸಿ ರಾಜ್ಯದಲ್ಲಿಯೇ ಅವರನ್ನು ಅತ್ಯಂತ ಎತ್ತರಕ್ಕೆ ಬೆಳೆಸಬೇಕು.ಅರೆದಿರುವ ಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಈ ಮೂಲಕ ತಮ್ಮಲ್ಲಿ ಕೇಳಿಕೊಳ್ಳುತ್ತೇವೆ ಎಂದು ಹೇಳಿದರು.
ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮಾರೇಶ್ ವಕೀಲರು ರಾಜ್ಯದಲ್ಲಿರುವ ದಲಿತ ನಾಯಕರನ್ನು ಪದೇಪದೇ ಲೋಕಸಭೆ ಚುನಾವಣೆ ಸ್ಪರ್ಧಿಸಿ ಕೇಂದ್ರ ಸ್ಥಾನಕ್ಕೆ ಕಳಿಸುವುದರಿಂದ ರಾಜ್ಯದಲ್ಲಿ ದಲಿತ ನಾಯಕರ ಕೊರತೆ ಎದ್ದು ಕಾಣುತ್ತದೆ ಎಂದು ಇದಕ್ಕೆ ಅವಕಾಶ ನೀಡಬೇಡಿ ಎಂದು ತಿಳಿಸಿದರು.
ಎಸ್ ಸಿ ಮಾದೇವಪ್ಪ ಕೆಎಚ್ ಮುನಿಯಪ್ಪ ಹಾಗೂ ಜಿ ಪರಮೇಶ್ವರ್ ಇವರನ್ನು ಹೊರತುಪಡಿಸಿ ದಲಿತ ಯುವ ದಲಿತ ಯುವ ಮುಖಂಡರಿಗೆ ಲೋಕಸಭೆ ಚುನಾವಣೆಯಲ್ಲಿ ಅವಕಾಶ ನೀಡಬೇಕೆಂದು ಹೊಸಪೇಟೆ ತಾಲೂಕು ಅಧ್ಯಕ್ಷರಾದ ರಮೇಶ್ ರವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಈ ಸಂದರ್ಭದಲ್ಲಿ ಹನುಮನ ಗೌಡ, ಸಿ ಎಂ ಮಂಜುನಾಥ , ಮತ್ತಳ್ಳಿ ಕೆಂಚಪ್ಪ , ಆರ್‌ಟಿಐ ಕಾರ್ಯಕರ್ತರು ಪರಶುರಾಮ್, ಕೊಲ್ಲರಪ್ಪ ಜಿ, ಕೊಟ್ರೇಶ್ ,ಮತ್ತು ಭರಮಪ್ಪ, ಪ್ರಮುಖ ಮುಖಂಡರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ