ಕೊಟ್ಟೂರಿನಲ್ಲಿ ಮುಗಿಯದ ಸಿಸಿ ರಸ್ತೆ, ಚರಂಡಿ ಕಳಪೆ ಕಾಮಗಾರಿ ,ಲೋಕೋಪಯೋಗಿ ಇಲಾಖೆ ಅಧಿಕಾರಿ ನಿರ್ಲಕ್ಷೆ..!
ಕೊಟ್ಟೂರು ಪಟ್ಟಣದ ಇಟಗಿ ಮುಖ್ಯ ರಸ್ತೆಯಲ್ಲಿ ಬರುವ ಲಕ್ಷ್ಮಿ ಸ್ಟೀಲ್ ಅಂಗಡಿಯಿಂದ ಹರಿಪ್ರಿಯಾ ಕಲ್ಯಾಣ ಮಂಟಪದವರಿಗೆ ಅರ್ಧಕ್ಕೆ ನಿಂತಿರುವ ಲೋಕೋಪಯೋಗಿ ಇಲಾಖೆ ಸಂಬಂದಿಸಿದ 82. ಮೀಟರ್ ಸಿಸಿ ರಸ್ತೆ ಹಾಗೂ ಚರಂಡಿಯ, ಅಂದಾಜು ಮೊತ್ತ 16 ಲಕ್ಷ ರೂ ಕಾಮಗಾರಿ ಸರಿಯಾಗಿ ನಡೆದಿಲ್ಲ ಎಂದು ಆರೋಪ ಕೇಳಿ ಬಂದಿವೆ.
ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿ ಆರಂಭವಾಗಿ ಸುಮಾರು ವರ್ಷ ಕಳೆದಿದೆ. ಆದರೆ, ಕಾಮಗಾರಿ ಮಾತ್ರ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ.ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಅನುದಾನದ ಅಡಿಯಲ್ಲಿ ಹಲವಾರು ಕಾಮಗಾರಿಗಳು ಇದೇ ರೀತಿಯಾಗಿ ವಿಳಂಬವಾಗುತ್ತಿದೆ.ಎಂದು ಆರೋಪ ಮಾಡಿದ್ದಾರೆ.
ಈ ಮಧ್ಯೆರಸ್ತೆ ಕಾಮಗಾರಿ ಸೇರಿದಂತೆ ಪಟ್ಟಣದ ಇತರೆ ರಸ್ತೆಗಳ ಕಾಮಗಾರಿಯೂ ಏಕಕಾಲಕ್ಕೆ ಯಾವ ರಸ್ತೆಗಳು ಸಹ ಪೂರ್ಣಗೊಂಡಿಲ್ಲ.ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ನಿರ್ಲಕ್ಷೆ ಹಾಗೂ ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಸಂಶಯ ಎದ್ದು ಕಾಣುತ್ತಿದೆ .
ಕಳಪೆ ಕಾಮಗಾರಿಯ ಗುತ್ತಿಗೆದಾರರು ಮತ್ತು ಅಧಿಕಾರಿಗಳ ವಿರುದ್ಧ ಸಂಪೂರ್ಣ ತನಿಖೆಯನ್ನು ಲೋಕಾಯುಕ್ತಕ್ಕೆ ಒಪ್ಪಿಸುವಂತೆ. ಮುಂದಿನ ದಿನಗಳಲ್ಲಿ ಆರ್ ಟಿ ಐ ಮತ್ತು ಡಿಎಸ್ಎಸ್, ಸಿಪಿಐ ಎಂಎಲ್ ಲಿಬರೇಷನ್ ಸಂಘಟನೆಗಳೊಂದಿಗೆ ಪ್ರತಿಭಟನೆ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಕೊಟ್-1
82 ಮೀಟರ್ ಸಿಸಿ ರಸ್ತೆ ಹಾಗೂ ಚರಂಡಿ ಕಾಮಗಾರಿ ಸುಮಾರು ವರ್ಷ ಕಳೆದರೂ ಪೂರ್ಣಗೊಳ್ಳದೆ ಇರುವುದು ಅಧಿಕಾರಿಗಳು, ಜನಪ್ರತಿನಿಧಿಗಳ ಬೇಜವಾಬ್ದಾರಿತನಕ್ಕೆ ಹಿಡಿದ ಕೈಗನ್ನಡಿಯಾಗಿದ್ದು, ವಿಳಂಬ ಮತ್ತು ಕಳಪೆ ಕಾಮಗಾರಿಯಿಂದ ಅಧಿಕಾರಿಗಳನ್ನು ಹಾಗೂ ಟೆಂಡರ್ ದಾರರನ್ನು ಯಾರು ಕೇಳುವವರಿಲ್ಲದಾಗಿದೆ.ಎಂದು ಕಮ್ಯುನಿಸ್ಟ್ ಪಾರ್ಟಿ ಸಿಪಿಎಂಎಲ್ ಲಿಬರೇಷನ್ ಪಕ್ಷದ ತಾಲೂಕು ಕಾರ್ಯದರ್ಶಿ ಜಿ ಮಲ್ಲಿಕಾರ್ಜುನ್ ಆರೋಪ ವ್ಯಕ್ತಪಡಿಸಿದರು.
ಕೊಟ್ -2
ಡಿಎಸ್ಎಸ್ ಸಂಘಟನೆಯಿಂದ ಲೋಕಾಯುಕ್ತ ಕ್ಕೆ ಟೆಂಡರ್ದಾರರಾದ ದೇವಿಪ್ರಸಾದ್ ಹಾಗೂ ಅಧಿಕಾರಿಗಳ ವಿರುದ್ಧ ಹಲವು ಕಾಮಗಾರಿಗಳು ಕಳಪೆ ಕಾಮಗಾರಿಯಾಗಿರುವುದರಿಂದ ಇವರಗಳ ವಿರುದ್ಧ ಲೋಕಾಯುಕ್ತಕ್ಕೆ ಕೇಸ್ ದಾಖಲು ಮಾಡಿದ್ದಾನೆ. ಎಂದು ಡಿಎಸ್ಎಸ್ ತಾಲೂಕು ಅಧ್ಯಕ್ಷ ಪಿ ಚಂದ್ರಶೇಖರ್ ಹೇಳಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ