ಹೀರೋ ಫೈನಾನ್ಸ್ ನಿಂದ ಗ್ರಾಹಕರಿಗೆ ಕಿರಿ ಕಿರಿ..!


ಕೊಟ್ಟೂರು :ಪಟ್ಟಣದಲ್ಲಿ ಉಜ್ಜಿನಿ ರಸ್ತೆಯಲ್ಲಿ ಇರುವ ಶ್ರೀ ಸಾಯಿ ಮೋಟಾರ್ಸ್ ಹೀರೋ ಬೈಕ್ ಶೋ ರೂಮ್ ಹಾಗೂ ಈ ಕಂಪನಿಯ ಫೈನಾನ್ಸ್ ನವರು ಬೈಕ್ ಗ್ರಾಹಕರಿಗೆ ದೌರ್ಜನ್ಯದಿಂದ ವರ್ತಿಸಿ ಕಿರಿ ಕಿರಿ ಉಂಟು ಮಾಡುತ್ತಾರೆ ಎಂದು ನೊಂದ ಗ್ರಾಹಕ ಬುಧವಾರ ಮಾಧ್ಯಮದ ಮೂಲಕ ತಮ್ಮ ಅಳಲನ್ನು ತೋಡಿಕೊಂಡ ಘಟನೆ ನಡೆದಿದೆ.

ಮೂರು ವರ್ಷಗಳ ಹಿಂದೆ ಶ್ರೀ ಸಾಯಿ ಮೋಟರ್ಸ್ ಹೀರೋ ಬೈಕ್ ಶೋ ನಲ್ಲಿ ಯಶೋದಮ್ಮ ಗಂಡ ಯರಿಸ್ವಾಮಿ ಹೆಸರಿನಲ್ಲಿ ಹೀರೋ ಫೈನಾನ್ಸ್ ಮೂಲಕ ಕಂತಿನ ರೂಪದಲ್ಲಿ ಬೈಕ್ ಖರೀದಿ ಮಾಡಲಾಯಿತು ಈ ಫೈನಾನ್ಸ್ ನಲ್ಲಿ ಡೆತ್ ಇನ್ಸೂರೆನ್ಸ್ ಕೂಡ ಮಾಡಿಸಲಾಗಿದ್ದು ಬೈಕ್ ಮಾಲೀಕರಾದ ಯಶೋದಮ್ಮ ರವರು ಎರಡು ವರ್ಷಗಳ ಹಿಂದೆ ಅಕಾಲಿಕ ಮರಣ ಹೊಂದಿರುತ್ತಾರೆ ಇದಕ್ಕೆ ಸಂಬಂಧಪಟ್ಟಂತೆ ಶ್ರೀ ಸಾಯಿ ಮೋಟಾರ್ಸ್ ಶೋರೂಮ್ ನಲ್ಲಿ ಡೆತ್ ಇನ್ಸೂರೆನ್ಸ್ ಕ್ಲೈಮ್ ಮಾಡುವಂತೆ ದಾಖಲಾತಿಗಳನ್ನು ನೀಡಿರುತ್ತೇವೆ ಇದನ್ನು ಪರಿಪೂರ್ಣಗೊಳಿಸದೆ ಇರುವ ಇನ್ಸೂರೆನ್ಸ್ ಕಂಪನಿಯವರು ಮೂರು ವರ್ಷದ ಈ ಸಮಸ್ಯೆಯನ್ನು ಮತ್ತೆ ಈಗ ಚಾಲನೆಗೊಳಿಸಿ ಬೈಕ್ ಸೀಜ್ ಮಾಡುವಂತೆ ಆದೇಶವನ್ನು ನೀಡಿದ್ದಾರೆ ಎಂದು ವಸಲಿ ಮಾಡುವ ಟೀಮ್ ನವರು 

ಬೈಕ್ ಮಾಲೀಕರಾದ ಲೇಟ್ ಯಶೋದಮ್ಮ ಗಂಡ ಯರಿಸ್ವಾಮಿ ಹತ್ತಿರ ಹೋಗಿ ನಡು ರಸ್ತೆಯಲ್ಲೇ ಬೈಕ್ ನಿಲ್ಲಿಸಿ ಅವಚ್ಯ ಶಬ್ದಗಳಿಂದ ನಿಂದಿಸಿ ಬೈಕ್ ಕೊಡುವಂತೆ ಒತ್ತಾಯಿಸಿದ್ದಾರೆ ನನ್ನ ಮಗಳು ಆಸ್ಪತ್ರೆಯಲ್ಲಿ ದಾಖಲಾಗಿದ್ದಾಳೆ ಅಲ್ಲಿಗೆ ಹೋಗಿ ಬಂದು ಬೈಕ್ ವಿಚಾರವಾಗಿ ಚರ್ಚೆ ಮಾಡುತ್ತೇನೆ ಈಗ ಬಿಡಿ ಎಂದು ನೋವಿನಿಂದ ಕೇಳಿಕೊಂಡರು ಸಹ ಅವರ ಸಮಸ್ಯೆಯನ್ನು ಆಲಿಸದೆ ಇರುವ ವಸಲಾತಿ ಟೀಮ್ ನವರು ಬೈಕ್ ಬಿಡುವಂತೆ ದೌರ್ಜನ್ಯ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಹೀರೋ ಶೋರೂಮ್ ನವರು ಮತ್ತು ಹೀರೋ ಫೈನಾನ್ಸ್ ನವರು ಒಟ್ಟಿಗೆ ಕೂಡಿ ಗ್ರಾಹಕರಿಗೆ ತಪ್ಪು ಮಾಹಿತಿ ನೀಡಿ ಬೈಕ್ ಗಳನ್ನು ಖರೀದಿಸುವಂತೆ ಇಲ್ಲ ಸಲ್ಲದ ಇನ್ಸೂರೆನ್ಸ್ ಗಳನ್ನು ಹಾಕುತ್ತಾರೆ ಆದರೆ ಅದಕ್ಕೆ ತಕ್ಕಂತೆ ಯಾವ ಸವಲತ್ತುಗಳು ನೀಡುವುದಿಲ್ಲ ಪಟ್ಟಣದಲ್ಲಿ ಸಾರ್ವಜನಿಕರ ಮೇಲೆ ಆಗುವ ಕಣ್ಣಿಗೆ ಕಾಣದೆ ಇರುವ ಹಣ ದುಬ್ಬರ ಉಂಟುಮಾಡುವ ಇನ್ಸೂರೆನ್ಸ್ ಮತ್ತು ಫೈನಾನ್ಸ್ ಕಂಪನಿಗಳ ಹಾವಳಿಯನ್ನು ತಡೆಯುವಂತೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ವಹಿಸಬೇಕು

ವೀರೇಶ್ ಬಿ ಎಂ

ಕರುನಾಡು ಕಾರ್ಮಿಕರ ಜಿಲ್ಲಾಧ್ಯಕ್ಷರು 


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ