ಸಂವಿಧಾನ ಜಾಗೃತಿ ಜಾಥಕ್ಕೆ ಕೊಟ್ಟೂರಿನಲ್ಲಿ ಅದ್ದೂರಿ ಸ್ವಾಗತ
.............................................................
* ರಕ್ತದಾನ ಶಿಬಿರ ಕಾರ್ಯಕ್ರಮ *
*ಸುಮಾರು ಮೂರು ಸಾವಿರ ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗಿ *
*ಬಾಲಕಿಯರ ಪ್ರಾಥಮಿಕ ಶಾಲೆ ವತಿಯಿಂದ ಮಹಾ ನಾಯಕ ಧಾರಾವಾಹಿಯ ಸಂವಿಧಾನ ಕುರಿತು ಹಾಡಿಗೆ ಹೆಜ್ಜೆ *
* ಸಂವಿಧಾನ ಪೀಠಿಕೆ ಓದುವುದರ ಮೂಲಕ ಜಾಗೃತಿ *
* ಮಹಿಳೆಯರಿಂದ ಕುಂಭ ಮತ್ತು ಕಳಸ ಮೆರವಣಿಗೆ *
ಕೊಟ್ಟೂರು : ತಾಲೂಕಿನ ಆಡಳಿತ ಮತ್ತು ಪಟ್ಟಣ ಪಂಚಾಯಿತಿ, ಹಾಗೂ ಸಮಾಜ ಕಲ್ಯಾಣ ಇಲಾಖೆ ಸಂಯೋಗದಲ್ಲಿ ನಡೆದ ಸಂವಿಧಾನ ಜಾಗೃತಿ ಜಾಥಾಕ್ಕೆ ತಹಸಿಲ್ದಾರ್ ಅಮರೇಶ್ ಜಾಲಹಳ್ಳಿ ರವರು ಕೆ.ಅಯ್ಯನಹಳ್ಳಿ ಗ್ರಾಮದಲ್ಲಿ ಚಾಲನೆ ನೀಡಲಾಯಿತು.
ನಂತರ ಕೊಟ್ಟೂರು ಪಟ್ಟಣದ ಪ್ರವಾಸಿ ಮಂದಿರದಿಂದ ಜಾಥಕ್ಕೆ ಅದ್ದೂರಿಯಾಗಿ ಸ್ವಾಗತ ಮಾಡಲಾಯಿತು ಈ ಜಾಥದಲ್ಲಿ ಪಟ್ಟಣದ ಸುಮಾರು ಮೂರು ಸಾವಿರ ಶಾಲಾ ಕಾಲೇಜ್ ವಿದ್ಯಾರ್ಥಿ ವಿದ್ಯಾರ್ಥಿನಿಯರು ಒಂದು ಕಿಲೋಮೀಟರ್ ಉದ್ದದ ಜಾಥಾ, ಎತ್ತಿನ ಬಂಡಿಗಳು ಮೆರುಗು ತಂದಿತು , ದಲಿತ ಪ್ರಮುಖ ಮುಖಂಡರು, ಯುವಕರು ಹಾಗೂ ಯುವತಿಯರು, ಭಾಗವಹಿಸಿದರು. ನಂತರ ಪ್ರಮುಖ ರಸ್ತೆಯ ಮಾರ್ಗವಾದ ಬಸ್ ಸ್ಟಾಂಡ್, ಗಾಂಧಿ ಸರ್ಕಲ್, ಉಜ್ಜಿನಿ ಸರ್ಕಲ್, ಮಾರ್ಗವಾಗಿ ಸಾಗಿದ ಜಾಥಾವು ತೆರೆದ ವಾಹನದಲ್ಲಿ ಅಂಬೇಡ್ಕರ್ ರವರ ಹಾಗೂ ಸಂವಿಧಾನ ಸ್ತಬ್ದ ಚಿತ್ರದೊಂದಿಗೆ ನಡೆಯಿತು ಪ್ರಮುಖ ರಸ್ತೆಯಲ್ಲಿ ಜಾಥಾವು ಸಾಗಿ ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ಮಹಾ ನಾಯಕ ಧಾರಾವಾಹಿಯ ಸಂವಿಧಾನದ ಗೀತೆಯೊಂದಿಗೆ ಹೆಜ್ಜೆ ಹಾಕುತ್ತ ಸಂವಿಧಾನಕ್ಕೆ ಇರುವ ಮಹತ್ವದ ಘೋಷಣೆಗಳನ್ನು ಕೂಗುತ್ತಾ ಸಂವಿಧಾನ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.
ಈ ಜಾಥಾವನ್ನು ಉದ್ದೇಶಿಸಿ ಮಾತನಾಡಿದ ಡಿಎಸ್ಎಸ್ ಜಿಲ್ಲಾ ಮುಖಂಡ ಬದ್ದಿ ಮರಿಸ್ವಾಮಿ ಯವರು ಪ್ರಪಂಚದಲ್ಲೆ ಅತ್ಯಂತ ದೊಡ್ಡ ಸಂವಿಧಾನ ಎಂದರೆ ನಮ್ಮ ಭಾರತ ಸಂವಿಧಾನ ಇದು ನೊಂದವರ ಹಾಗೂ ಹಿಂದುಳಿದ ಜನರಿಗೆ ನೆರವಾಗಬೇಕು ಸಂಕಷ್ಟದಲ್ಲಿ ಇರುವರಿಗೆ ಸಾಂತ್ವಾನ ನೀಡುವ ಶಕ್ತಿಯಾಗಬೇಕು ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ದೊರಕಿಸಿಕೊಡುವ ಉದ್ದೇಶದಿಂದ ಡಾ. ಬಿಆರ್ ಅಂಬೇಡ್ಕರ್ ಅವರ ಭಾರತದ ಸಂವಿಧಾನ ಎನ್ನುವ ಅದ್ಭುತ ಶಿಲ್ಪವನ್ನು ರಚಿಸಿದ್ದಾರೆ ಎಂದು ಹೇಳಿದರು
ಸಂವಿಧಾನವು ಪ್ರತಿಯೊಬ್ಬರಿಗೂ ವಾಕ್ ಸ್ವತಂತ್ರ, ಅಭಿವ್ಯಕ್ತಿ ಸ್ವತಂತ್ರ, ಸಮಾನತೆಯ ಸ್ವತಂತ್ರ, ನೀಡಿದೆ ಸಂವಿದಾನದಲ್ಲಿ ವಿಶೇಷವಾಗಿ ಮಹಿಳೆಯರಿಗೆ ಉತ್ತಮ ಸ್ಥಾನ ಮಾನ ವನ್ನು ನೀಡಿದೆ ಇವು ಎಲ್ಲವುಗಳನ್ನು ಅರಿತು ಪ್ರತಿಯೊಬ್ಬರು ಸಂವಿಧಾನವನ್ನು ಗೌರವಿಸಬೇಕು ಎಂದು ಶಿಕ್ಷಕ ತಗ್ಗಿನಕೇರಿ ಕೊಟ್ರೇಶ್ ಮಾತನಾಡಿದರು.
ನೂತನ ಸಹಾಯಕ ಆಯುಕ್ತರು ಚಿದಾನಂದ ಗುರುಸ್ವಾಮಿ ಯವರು ಸಂವಿದಾನದ ಪೀಠಿಕೆಯನ್ನು ಓದುವುದರ ಮೂಲಕ ಜಾಗೃತಿ ಮೂಡಿಸಲಾಯಿತು.ಮತ್ತು ಈ ಸಂದರ್ಭದಲ್ಲಿ ಯಾವುದೇ ಕೆಲಸವನ್ನು ಕೊಟ್ಟರು ಅಚ್ಚುಕಟ್ಟಾಗಿ ಕೆಲಸ ನಿರ್ವಹಿಸುವ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಎ ನಸರುಲ್ಲಾ ಅವರನ್ನು ಸನ್ಮಾನಿಸಲಾಯಿತು.
ಹಸಿರು ಹೊನಲು ಸೇವಾ ಸಂಸ್ಥೆ , ಸಹಯೋಗದಲ್ಲಿ ರಕ್ತದಾನ ಶಿಬಿರ ಕಾರ್ಯಕ್ರಮದಲ್ಲಿ ದಲಿತ ಸಂಘರ್ಷ ಸಮಿತಿ ತಾಲೂಕು ಅಧ್ಯಕ್ಷ ಪಿ ಚಂದ್ರಶೇಖರ್, ಆರ್ ಟಿ ಐ ಕಾರ್ಯಕರ್ತ ಮಧು ನಾಯಕ್ ರಕ್ತದಾನ ನೀಡಿದರು.
ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಜಗದೀಶ್ ದಿಗಡೂರು, ಪಟ್ಟಣ ಪಂಚಾಯಿತಿ ಮುಖ್ಯಧಿಕಾರಿ ಎ. ನಸರುಲ್ಲಾ, ಸಮಾಜ ಇಲಾಖೆ ಜಂಟಿ ನಿರ್ದೇಶಕರು. ಮಂಜುನಾಥ, ಶಿಕ್ಷಕರಾದ ಅಜ್ಜಪ್ಪ, ಬದ್ದಿ ದುರುಗೇಶ್, ವಕೀಲ ಹನುಮಂತಪ್ಪ, ಜಾಗಟಗೇರಿ ವಕೀಲ ಅಂಜಿನಪ್ಪ, ಶಿಕ್ಷಕ ವರ್ಗದವರು ಸಂಘ ಸಂಸ್ಥೆ ಯವರು, ಪೊಲೀಸ್ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು .
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ