ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮದ ಪೂರ್ವಭಾವಿ ಸಭೆ ಯಶಸ್ವಿ

ಮಸ್ಕಿ : ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಸ್ಕಿ ತಾಲೂಕಿನಾದ್ಯಂತ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮದ ನಿಮಿತ್ತ ತಹಶೀಲ್ದಾರರ ನೇತೃತ್ವದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು.

ಭಾರತ ಸಂವಿಧಾನದ ಆಶಯ ಮತ್ತು ಅದರ ಮೌಲ್ಯಗಳ ಕುರಿತು ಜನಸಾಮಾನ್ಯರಿಗೆ ಅರಿವು ಮೂಡಿಸುವ ಆಶಯದಿಂದ ನಡೆಸಲಾಗುತ್ತಿರುವ ಸಂವಿಧಾನ ಜಾಗೃತಿ ಜಾತಾವು ಫೆ.15ರಿಂದ 17 ರವರೆಗೆ ಹಾಗೂ ಕರ್ನಾಟಕ ಸಂಭ್ರಮ-50ರ ಜ್ಯೋತಿ ರಥಯಾತ್ರೆ ಫೆ.15ರಂದು ಪಟ್ಟಣಕ್ಕೆ ತಲುಪಲಿದ್ದು ಎರಡೂ ಕಾರ್ಯಕ್ರಮಗಳನ್ನು ಅಧಿಕಾರಿಗಳು ಎಲ್ಲಾ ನಾಗರಿಕ ಸಹಕಾರದೊಂದಿಗೆ ಶಿಸ್ತುಬದ್ಧವಾಗಿ ಭಾಗವಹಿಸಿ ಯಶಸ್ವಿಗೊಳಿಸಲು ಪ್ರಯತ್ನಿಸಬೇಕು ಎಂದು ತಹಶೀಲ್ದಾರ್ ಸುಧಾ ಅರಮನೆ ತಿಳಿಸಿದರು.

ನಂತರ ಸಂವಿಧಾನದ ಅರಿವು,ಬದುಕು ಕಟ್ಟಿಕೊಳ್ಳಲು ಸಂವಿಧಾನ ಹೇಗೆ ಸಹಕಾರವಾಗಿದೆ ಎಂಬುದನ್ನು ತಿಳಿಯಲು ನಾವು ಇಲ್ಲಿ ಸೇರಿದ್ದೇವೆ.

ಸರ್ವ ಜನಾಂಗದವರು, ಸರ್ವ ಸಂಘಟನೆಯವರು, ಸರ್ವ ಸಮಾಜದ ಮುಖಂಡರು,ಎಲ್ಲರಿಗೂ ಆಹ್ವಾನ ಮಾಡಲು ಆಗುವುದಿಲ್ಲ ಪತ್ರಿಕೆ ಪ್ರಕಟಣೆಯನ್ನು ಆಹ್ವಾನ ಎಂದುಕೊಂಡು ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಯಾರಿಗೂ ಆಹ್ವಾನ ಮಾಡಿಲ್ಲ ಎಂದು ಬೇಸರ ವ್ಯಕ್ತ ಪಡಿಸುವುದು ಬೇಡ ಎಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ದೇವರಾಜ ಹೇಳಿದರು.

ಸರ್ವ ಸಂಘಟನೆಯ ಮುಖಂಡರು ಮಾತನಾಡಿ ಕಾರ್ಯಕ್ರಮ ಶಿಸ್ತು ಬದ್ದವಾಗಿ ಹಾಗೂ ಸುಸಜ್ಜಿತವಾಗಿ ಜರುಗಲು ಸಹಕರಿಸೋಣ,ಜಾಥಾ ಬರುವ ಮಾರ್ಗದಲ್ಲಿ ಸರಾಗವಾಗಿ ಚಲಿಸಲು ಮುಂಜಾಗ್ರತೆ ಕ್ರಮವಹಿಸಿ, ನೀಲಿ ಬಣ್ಣದ ಬಟ್ಟೆ ತೋರಣಗಳನ್ನು ಪಟ್ಟಣದ ಮುಖ್ಯ ದ್ವಾರದಲ್ಲಿ ಕಟ್ಟಿಸಿ, ಕಾರ್ಯಕ್ರಮಕ್ಕೆ ಬಂದಂತಹ ಎಲ್ಲರ ಆರೋಗ್ಯ,ರಕ್ಷಣೆ ಹಿತ ದೃಷ್ಟಿಯಿಂದ ಎಲ್ಲಾ ಬಗೆಯ ಸಿದ್ಧತೆ ಕೈಗೊಳ್ಳಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ತಹಸೀಲ್ದಾರ್ ಸುಧಾ ಅರಮನೆ, ಪುರಸಭೆ ಮುಖ್ಯಾಧಿಕಾರಿ ನರಸರೆಡ್ಡಿ, ಸಮಾಜ ಕಲ್ಯಾಣ ಅಧಿಕಾರಿ ದೇವರಾಜ, ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಬಸಪ್ಪ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಮಹಿಳೆಯರು, ಊರಿನ ಮುಖಂಡರು ಭಾಗಿಯಾಗಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ