ಶ್ರೀ ಗುರು ಬಸವೇಶ್ವರಸ್ವಾಮಿ ದೇವಸ್ಥಾನದ ಹುಂಡಿ ಎಣಿಕೆ ಮೊತ್ತ ರೂ. 48,32,441-00/ರೂ
ಕೊಟ್ಟೂರು: ಪಟ್ಟಣದ ಆರಾಧ್ಯ ದೈವ ಪವಾಡ ಪುರುಷ ಎಂದೇ ಪ್ರಖ್ಯಾತವಾಗಿರುವ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ಹುಂಡಿ ಪೆಟ್ಟಿಗೆ ಎಣಿಕೆ ಕಾರ್ಯ ಬೆಳಿಗ್ಗೆಯಿಂದ ವಿದ್ಯಾರ್ಥಿಗಳು ಎಣಿಕೆ ಪ್ರಾರಂಭಿಸಿದರು.
ದೇವಸ್ಥಾನದ ಹಿಂಭಾಗದಲ್ಲಿ ಹುಂಡಿ ಪೆಟ್ಟಿಗೆಯನ್ನು ಎಣಿಕೆ ಮಾಡುತ್ತಿದ್ದು 6 ದೊಡ್ಡ ಹುಂಡಿ ಪೆಟ್ಟಿಗೆ, 6 ಚಿಕ್ಕ ಹುಂಡಿ ಪೆಟ್ಟಿಗೆ ಸೇರಿ ಒಟ್ಟು 12 ಹುಂಡಿ ಪೆಟ್ಟಿಗೆಯಲ್ಲಿ ಶ್ರೀ ಗುರು ಬಸವೇಶ್ವರಸ್ವಾಮಿ ದೇವಸ್ಥಾನದ ಹುಂಡಿ ಎಣಿಕೆ ಮೊತ್ತ ರೂ. 48,32,441-00 ಇದೆ ಎಂದು ಇಓ ಕೃಷ್ಣಪ್ಪ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ಧರ್ಮ ಕರ್ತರಾದ ಸಿ ಎಚ್ ಎಂ ಗಂಗಾಧರ್, ಅಧೀಕ್ಷಕರಾದ ಆಂಜನೇಯಲು, ಡಿಎಸ್ ಎಸ್ ಮುಖಂಡ ಮರಿಸ್ವಾಮಿ, ವಕೀಲರ ಹನುಮಂತಪ್ಪ, ದೇವಸ್ಥಾನದ ಸಿಬ್ಬಂದಿ, ಗ್ರಾಮೀಣ ಬ್ಯಾಂಕಿನ ಮೆನೇಜರ್ ಶಿವರಾಜ್ ಕುಮಾರ್ ಹಾಗೂ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ