ಶ್ರೀ ಗುರು ಬಸವೇಶ್ವರ ಸ್ವಾಮಿ ದೇವಸ್ಥಾನಕ್ಕೆ, 1 ಕೋಟಿ ರೂಪಾಯಿ ಬೆಳ್ಳಿ ಬಾಗಿಲಿನ ಕವಚ ಅನುಮೋದನೆ





*ಈ ಸಭೆಗೆ ಮೊಟ್ಟ ಮೊದಲ ಬಾರಿಗೆ ಎಂ.ಎಸ್. ದಿವಾಕರ್ ಜಿಲ್ಲಾಧಿಕಾರಿಗಳು ಆಗಮಿಸಿದ್ದು ವಿಶೇ ಷವಾಗಿತ್ತು.*

ಕೊಟ್ಟೂರು: ಪಟ್ಟಣದ  ಹಿರೇಮಠದ ಸ್ವಾಮಿಯ ದೇವಸ್ಥಾನದ ಮುಂಭಾಗದಲ್ಲಿ ಹಿಂದೂ ಧಾರ್ಮಿಕ ದತ್ತಿ ಇಲಾಖೆ ವತಿಯಿಂದ ಗುರುವಾರ ರಂದು ಹಮ್ಮಿಕೊಂಡಿದ್ದ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ವಾರ್ಷಿಕ ರಥೋತ್ಸವದ ಪೂರ್ವ ಭಾವಿ ಸಭೆ ನಡೆಸಲಾಯಿತು.

ಶ್ರೀ ಗುರು ಕೊಟ್ಟೂರೇಶ್ವರ ದೇವರ ದರ್ಶನ ಪಡೆದು ನಂತರ  ಪೂರ್ವ ಭಾವಿ ಸಭೆಯಲ್ಲಿ ಮಾನ್ಯ ಜಿಲ್ಲಾಧಿಕಾರಿಗಳು ಎಂ.ಎಸ್. ದಿವಾಕರ್ ಅವರು ಮಾತನಾಡಿದರು.ಪಟ್ಟಣದ ಆರಾಧ್ಯ ದೈವ ಪವಾಡ ಪುರುಷ  ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ದೇವಸ್ಥಾನದ ಬಾಗಿಲಿನ 1 ಕೋಟಿ ರೂಪಾಯಿ ಬೆಳ್ಳಿ ಕವಚ ಅನೇಕ ದಿನಗಳಿಂದ ನೆನೆಗುದಿ ಗೆ ಬಿದ್ದಿತ್ತು. ಈಗ   ಅನುಮೋದನೆ ಮಾಡಲಾಗಿದೆ. ಮತ್ತು ಜಾತ್ರೆಗೆ ಬರುವ ಭಕ್ತಾಧಿಗಳ ಅನು ಕೂಲಕ್ಕಾಗಿ ನಾಲ್ಕು ದಿಕ್ಕಿನಲ್ಲಿ ಸೂಕ್ತ ಜಾಗದ ವ್ಯವಸ್ಥೆವುಳ್ಳು ಯಾತ್ರೆ ನಿವಾಸಿ ನಿರ್ಮಾಣ ಮಾಡಲಾಗುವುದು.

ಬಂದ ಭಕ್ತರಿಗೆ ಬಟ್ಟೆ ಬದಲಾಯಿ ಸಲು ಸರಿಯಾದ ವ್ಯವಸ್ಥೆ ಮಾಡಲಾಗುವುದು, ಈಗಾಗಲೇ ಕುಡಿಯುವ ನೀರು ಹಾಗೂ ಸ್ವಚ್ಚತೆ ಬಗ್ಗೆ ಪಟ್ಟಣ ಪಂಚಾಯಿತಿಯ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ ಎಂದರು.

ತೇರು ಎಳೆಯುವ ಸಂದರ್ಭದಲ್ಲಿ ತೇರಿನ ಒಳಗಡೆ ಸುಮಾರು 40 ರಿಂದ 50 ಜನ ಸ್ವಾಮಿಗಳು ಇರುತ್ತಾರೆ ಇದನ್ನು ಕಡಿವಾಣ ಹಾಕಿ  ಉತ್ಸವ  ಮೂರ್ತಿಯ ಜೊತೆಗೆ ಸಹಾಯಕ್ಕೆ 4 ಜನ ಸ್ವಾಮಿಗಳು ನೆರೆದರೆ ಗೊಂದಲ ಕಡಿಮೆಯಾಗುತ್ತದೆ.ದಲಿತರು ಜಾತ್ರಾ ಮಹೋತ್ಸವದಲ್ಲಿ 3ರಿಂದ4 ಧಾರ್ಮಿಕ ಕಾರ್ಯಗಳು ನಡೆಸಿಕೊಡುತ್ತಾರೆ  ಆದರೆ ದಲಿತರಿಗೆ ಮಠದ ಒಳಗಡೆ ಇರುವ ನೇರ ಪಾವತಿ ಹೊರಗುತ್ತಿಗೆ  ಹುದ್ದೆಗಳನ್ನು ಜಾತ್ಯತೀತವಾಗಿ ತಾರತಮ್ಯ ಮಾಡದೆ ನೀಡಬೇಕು

ಹಾಗೂ ದೇವಸ್ಥಾನಕ್ಕೆ ಸಂಬಂಧಪಟ್ಟಂತಹ  ಅಸ್ತಿಗಳನ್ನು ಕೆಲ ಪ್ರಭಾವಿಗಳು ವಶಪಡಿಸಿಕೊಂಡಿದ್ದಾರೆ  ಅವುಗಳನ್ನು ಪತ್ತೆ ಹಚ್ಚಿ  ಕಡು ಬಡವರಿಗೆ, ನಿವೇಶನ ಇಲ್ಲದವರಿಗೆ  ನೀಡಬೇಕು ಎಂದು ಡಿಎಸ್ ಎಸ್ ಮುಖಂಡ  ಬದ್ದಿ ಮರಿಸ್ವಾಮಿ ಯವರು ಇವುಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು.

ಬರುವ ಭಕ್ತಾದಿಗಳಿಗೆ ಸೂಕ್ತ ಚಿಕಿತ್ಸೆಯನ್ನು  ಕಲ್ಪಿಸಿ ಕೊಡಬೇಕು  ಹಾಗೂ ಆಂಬುಲೆನ್ಸ್ ವ್ಯವಸ್ಥೆಯನ್ನು ಮಾಡಬೇಕು ಹಾಗೂ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿ ಹೆಸರಿನಲ್ಲಿ ಎತ್ತು ಮತ್ತು ಆಕಳುಗಳನ್ನು ಬಿಡುವ ವಾಡಿಕೆ  ಇದೆ ಇವುಗಳ ರಕ್ಷಣೆಗೆ ಎಂದೆ ಗೋಶಾಲೆಯನ್ನು ನಿರ್ಮಾಣ ಮಾಡಬೇಕೆಂದು ವಕೀಲ ಟಿ. ಹನುಮಂತಪ್ಪ ನವರು ಸಲಹೆ ನೀಡಿದರು.

ದೇವಸ್ಥಾನದ ಕಳಸವು ಈಗಾಗಲೇ ಸಡಿಲ ಗೊಂಡಿದ್ದು ಅದನ್ನು ಸರಿಪಡೆಸಬೇಕು ಎಂಬ ವಿಚಾರವಾಗಿ ಕೊಟ್ರೇಶಪ್ಪ ಮತ್ತು  ಅಧಿಕಾರಿಗಳ ಜೊತೆ ಸಮನ್ವಯ ಮಾತು ನಡೆಯಿತು .ಈ ವಿಷಯವಾಗಿ ಸೂಕ್ತ ಪರಿಹಾರ ಮಾಡಲಾಗುವುದು ಎಂದು ಸಮಾಧಾನದ ಉತ್ತರವನ್ನು ಜಿಲ್ಲಾಧಿಕಾರಿಗಳು ನೀಡಿದರು.

ನಂತರ ಮಾತನಾಡಿದ  ಶಾಸಕ ನೇಮಿರಾಜ್ ನಾಯ್ಕ್  ರವರು ಪಟ್ಟಣದ ಸುತ್ತಲೂ ರಸ್ತೆಗಳಲ್ಲಿ  ದೂಳು ಬರದಂತೆ ನೀರು ಸಿಂಪಡಿಸುವುದು, ರಸ್ತೆಗಳನ್ನು ಸ್ವಚ್ಛಗೊಳಿಸುವುದು , ದುರಸ್ತಿ ರಸ್ತೆಗಳನ್ನು ಬೇಗ ಸರಿಪಡಿಸುವಂತೆ  ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ  ನೀಡಿದರು.

ಮತ್ತು ಪಟ್ಟಣದಲ್ಲಿ ಯಾರು ಕೂಡ  ಬ್ಯಾನರ್ ಹಾಕುವಂತಿಲ್ಲ ಅದು ನಂದೇ ಆದರೂ ಸರಿ ಕಿತ್ತು ಹಾಕಿ ಜಾತ್ರೆಗೆ ಬ್ಯಾನರ್ ಹಾಕುವ  ಅನುಮತಿ  ನೀಡುವಾಗಿಲ್ಲ ಒಂದು ವೇಳೆ ಬ್ಯಾನರ್ ಹಾಕಿದ್ದೆ ಆದರೆ  ಅಂತವರ ವಿರುದ್ಧ ಕಾನೂನು ಕ್ರಮ ವಹಿಸಿ ಎಂದು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು 

ಜಾತ್ರೆಗೆ ಹೆಚ್ಚುವರಿ ಬಸ್ ಗಳನ್ನು ಅಧಿಕಾರಿಗಳ ಕಲ್ಪಿಸಿ ಕೊಡಬೇಕು  ಸಾರಿಗೆ ವ್ಯವಸ್ಥೆಯನ್ನು  ವ್ಯವಸ್ಥಿತವಾಗಿ  ಎಲ್ಲಿ ಟ್ರಾಫಿಕ್ ಆಗದಂತೆ  ನೋಡಿಕೊಳ್ಳಬೇಕು ಎಂದು  ಸಾರಿಗೆ ಅಧಿಕಾರಿಗಳಿಗೆ ತಿಳಿಸಿದರು.

ಈ ಕಾರ್ಯಕ್ರಮದಲ್ಲಿ  ಕೊಟ್ಟೂರೇಶ್ವರ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿಯಾದ ಕೃಷ್ಣಪ್ಪ ಸ್ವಾಗತ ಕೋರಿದರು. ಉಪನ್ಯಾಸಕ ಅರವಿಂದ್ ವಂದಿಸಿದರು.ಕೊಟ್ಟೂರೇಶ್ವರಿ ಪ್ರಾರ್ಥನೆ ಗೀತೆ ಹಾಡಿದರು.

ಈ ಸಂದರ್ಭದಲ್ಲಿ  ಕ್ರಿಯಾಮೂರ್ತಿಗಳಾದ ಶಿವ ಪ್ರಕಾಶ್ ದೇವರು ಕೊಟ್ಟೂರು,ಹರಪ್ಪನಹಳ್ಳಿ ಸಹಾಯಕ ಆಯುಕ್ತ ಟಿ ವಿ ಪ್ರಕಾಶ್,ತಹಶೀಲ್ದಾರ್ ಅಮರೇಶ್, ಡಿವೈಎಸ್ಪಿ ಮಲ್ಲೇಶ್ ಮಲ್ಲಾಪುರ,ಜಿಲ್ಲಾ ಪಂಚಾಯತಿ ಮಾಜಿ ಸದಸ್ಯರಾದ ಎಂ.ಎಂ.ಜೆ ಹರ್ಷವರ್ಧನ್,  ಪಟ್ಟಣ ಪಂಚಾಯತಿಯ ಸದಸ್ಯರು, ಹಾಗೂ ಕಟ್ಟಿಮನಿ ದೈವಸ್ಥರು, ಆಯಾಗಾರರು, ಉಪಸ್ಥಿತರಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ