ಬ್ಲಾಸಮ್ ಶೋಯರ್‍ಸ್‌ನಿಂದ ನಿಯಮಗಳ ಉಲ್ಲಂಘನೆ ಕ್ರಮಕ್ಕೆ ರೈತರಿಂದ ಆಗ್ರಹ

ಕೊಟ್ಟೂರು: ರಾಂಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಬ್ಲಾಸಮ್ ಶೋಯರ್‍ಸ್ ಮಿಡಿ ಸೌತೆ ಕಾಯಿ ಫ್ಯಾಕ್ಟರಿ ಇದ್ದು, ಈ ಕಾರ್ಖಾನೆಯಲ್ಲಿ ಉತ್ಪಾದನೆಯಾಗುವ ದ್ರವ ವಸ್ತುಗಳ ಸರಿಯಾಗಿ ನಿರ್ವಹಣೆಯಾಗುತ್ತಿಲ್ಲ. 

ಈ ಫ್ಯಾಕ್ಟರಿಯಿಂದ ಆಸಿಡ್ ಮತ್ತು ಉಪ್ಪು ನೇರವಾಗಿ ೩೦ ಅಡಿ ಗುಂಡಿ ನಿರ್ಮಾಣ ಮಾಡಿ ಅದರೊಳಗೆ ಬಿಡುತ್ತಿದ್ದಾರೆ. ಇದು ವಿಷಾಕಾರಿಯಾಗಿದ್ದು, ತನ್ನ ಸುತ್ತಮುತ್ತಲಿನ ಭೂಮಿಯನ್ನೆಲ್ಲಾ ವಿಷವಾಗಿ ಪರಿವರ್ತನೆ ಮಾಡಿರುತ್ತದೆ. ಈ ವಿಷ ದ್ರವದಿಂದ ಬೋರ್‌ವೆಲ್‌ಗಳಲ್ಲಿ ವಿಷನೀರು ಬರುತ್ತಿದ್ದು ರೈತರು ಕಂಗಾಲಾಗಿದ್ದಾರೆ. ಅಲ್ಲದೇ ಈ ನೀರು ಜಾನುವಾರುಗಳಿಗೂ ಕೂಡಾ ವಿಷವಾಗಿದೆ.

ಪಕ್ಕದಲ್ಲಿರುವ ಹಳ್ಳವಿದ್ದು, ಮಳೆಗಾಲದಲ್ಲಿ ಅತಿ ಹೆಚ್ಚು ನೀರು ಸಂಗ್ರಹಣೆಯಾಗಿ ಜಾನುವಾರುಗಳಿಗೆ ಉಪಯುಕ್ತವಾಗಿದ್ದು, ಈ ಹಳ್ಳವೂ ಸಹ ಈಗ ಕಲುಷಿತವಾಗಿದೆ. ಈ ಕಲುಷಿತ ನೀರನ್ನು ಕುಡಿದ ಜಾನುವಾರುಗಳು ಮರಣ ಹೊಂದಿರುತ್ತವೆ ಎಂದು ಈ ಹಿಂದೆ ಹಲವು ದೂರುಗಳು ಸಲ್ಲಿಕೆಯಾಗಿದ್ದವು. ಈಗ ಅಕ್ಕಪಕ್ಕದ ಜಮೀನುಗಳು ಬೆಳೆ ಬರದ ಹಾಗೆ ಆಗಿದೆ. ಈ ರೀತಿಯ ಕಂಪನಿಗಳನ್ನು ನಡೆಸುವಾಗ ಸರ್ಕಾರದ ನಿಯಮಾವಳಿಗಳನ್ನು ಹಾಗೂ ಪರಿಸರ ಮತ್ತು ನೈರ್ಮಲ್ಯ ಇಲಾಖೆಗಳಿಂದ ನಿರ್ದೇಶನಗಳನ್ನು ಸರಿಯಾಗಿ ಪಾಲಿಸದೇ ಇರುವುದರಿಂದ ಕಂಪನಿಯ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯು ಹಿಂದಿನ ಜನತಾ ದರ್ಶನದಲ್ಲಿ ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದ್ದು, 

ಈ ಅರ್ಜಿಯನ್ನು ಪರಿಶೀಲಿಸಿದ ರಾಂಪುರ ಗ್ರಾಮ ಪಂಚಾಯಿತಿ ಪಿ.ಡಿ.ಒ. ಬ್ಲಾಸಮ್ ಶೋಯರ್‍ಸ್ ಕಂಪನಿಗೆ ಈ ಬಗ್ಗೆ ಸೂಕ್ತ ವಿವರಣೆಯನ್ನು ಏಳು ದಿನಗಳೊಳಗಾಗಿ ನೀಡಲು ನೋಟೀಸ್ ನೀಡಿದ್ದಾರೆ. ಈ ರೀತಿಯಾಗಿ ಅಕ್ಕಪಕ್ಕದ ಜಮೀನುಗಳನ್ನು ವಿಷವಾಗಿ ಪರಿವರ್ತನೆ ಮಾಡುತ್ತಿರುವ ಬ್ಲಾಸಮ್ ಶೋಯರ್‍ಸ್ ಕಂಪನಿಯನ್ನು ಹಲವು ದೂರುಗಳ ಹಿನ್ನೆಲೆಯಲ್ಲಿ ಮುಚ್ಚಬೇಕೆಂದು ಕೂಗು ಕೇಳಿಬರುತ್ತಿವೆ. ಜಿಲ್ಲಾಧಿಕಾರಿಗಳು ಇತ್ತ ಗಮನ ಹರಿಸಿ ರೈತರಿಗೆ ಆಗುತ್ತಿರುವ ತೊಂದರೆಗಳನ್ನು ಪರಿಹರಿಸಬೇಕೆಂದು ರಾಜ್ಯ ರೈತ ಸಂಘದ ಉಪಾಧ್ಯಕ್ಷ ಎನ್.ಭರಮಣ್ಣ ಆಗ್ರಹಿಸಿದ್ದಾರೆ

.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ