*ಧನಗರವಾಡಿ ಶಾಲಾ ಮಕ್ಕಳ ಆಹಾರ ಮೇಳ*
ಮಸ್ಕಿ:ವಿವಿಧ ಬಗೆಯ ಆಹಾರಗಳ ಪ್ರಾಮುಖ್ಯತೆ ತಿಳಿಸಲು ಮಸ್ಕಿ ಪಟ್ಟಣದ ಧನಗರವಾಡಿ ಪ್ರಾಥಮಿಕ ಶಾಲೆಯಲ್ಲಿ ಆಹಾರ ಮೇಳ ಆಯೋಜಿಸಲಾಗಿತ್ತು.
ವಿದ್ಯಾರ್ಥಿಗಳು ತಮ್ಮ ತಮ್ಮ ಮನೆಯಲ್ಲಿ ಸ್ವತಃ ತಯಾರಿಸಿದ ತಿಂಡಿ ತಿನಿಸುಗಳು, ಆಹಾರ ತರುವ ಮುಖದ ಮೂಲಕ ಶಾಲೆಯಲ್ಲಿ ವ್ಯವಹಾರದ ಜ್ಞಾನ ಆಹಾರದ ಕೊರತೆ ತಿಳಿಸುವ ಮೂಲಕ ಶಾಲೆಯ ಮಕ್ಕಳು ಗಮನ ಸೆಳೆದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯ ಶಿಕ್ಷಕ ಬಾಲಸ್ವಾಮಿ ಹಂಪನಾಳ ಸುಮಾರು ೨೦೦ ಪದಾರ್ಥಗಳು ಮತ್ತು ತಿಂಡಿ ತಿನಿಸುಗಳನ್ನು ಸ್ವತಃ ವಿದ್ಯಾರ್ಥಿಗಳು ತಯಾರು ಮಾಡಿ ತಂದಿದ್ದು ಈ ತರ ಒಂದೇ ಶಾಲೆಯಲ್ಲಿ ಆಹಾರ ಸಿಗುವುದು ತುಂಬಾ ಅಪರೂಪ. ಇಲ್ಲಿ ಉಳುಮೆ ಮಾಡಿ ತಂದಂತ ತರಕಾರಿ ಕೆಮಿಕಲ್ ಮುಕ್ತ ಆಹಾರ ವ್ಯವಹಾರದ ಬಗ್ಗೆ ಜ್ಞಾನದ ಬಗ್ಗೆ ವಿದ್ಯಾರ್ಥಿಗಳು ತಮ್ಮ ತಮ್ಮ ಶೈಲಿಯಲ್ಲಿ ತಿಳಿಸಿಕೊಟ್ಟರು ಎಂದರು.
ಶಂಕರಗೌಡ ನೌಕರ ಸಂಘದ ಅಧ್ಯಕ್ಷ ಮಸ್ಕಿ ತಾಲೂಕು ಮಾತನಾಡಿ, ಒಂದು ಜೋಳದ ರೊಟ್ಟಿ ಸಾಮಾನ್ಯವಾಗಿ ಯಾವ ರೀತಿ ರೆಡಿ ಮಾಡುವುದು ಎಂದು ಸುಮಾರು ಜನಗಳಿಗೆ ತಿಳಿದುರುವುದಿಲ್ಲ ಅಂತಹ ವಿಷಯ ವಿದ್ಯಾರ್ಥಿಗಳು ಜೋಳದ ರೊಟ್ಟಿ ರೆಡಿ ಮಾಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಶಂಕರಗೌಡ, ಪಂಪಾಪತಿ ಹೂಗಾರ, ಬಾಲ ಸ್ವಾಮಿ, ಅಮರೇಶ ಪತ್ರಕರ್ತ ಹಾಗೂ ಶಿಕ್ಷಕಿಯರು, ಶಿಕ್ಷಕರು, ವಿದ್ಯಾರ್ಥಿಗಳ ಪೋಷಕರು ಮತ್ತಿತರರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ