ವಿದ್ಯಾರ್ಥಿಗಳು ಶಿಸ್ತು, ಸಮಯ ಪಾಲನೆ ಪಾಲಿಸಿ : ಉಪ ತಹಶಿಲ್ದಾರ ಸುನೀಲ್ ಕುಮಾರ
ಮಸ್ಕಿ : ತಾಲ್ಲೂಕಿನ ಹಾಲಾಪೂರ ಗ್ರಾಮದ ಜನನಿ ಪದವಿ ಪೂರ್ವ ಕಾಲೇಜ್ ನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮ ನಡೆಯಿತು, ಕಾರ್ಯಕ್ರಮವನ್ನು ಶ್ರೀ ದಂಡಗುಂಡಪ್ಪ ತಾತ ಜಂಗಮರಹಳ್ಳಿ ಉದ್ಘಾಟಿಸಿದರು.
ಕಾರ್ಯಕ್ರಮದ ಮೊದಲಿಗೆ ಮಾತನಾಡಿದ ಉಪ ತಹಶೀಲ್ದಾರ್ ಸುನೀಲ್ ಕುಮಾರ್ ವಿದ್ಯಾರ್ಥಿಗಳು ಜೀವನದಲ್ಲಿ ಮುಖ್ಯವಾಗಿ ಶಿಸ್ತು , ಸಮಯ ಪಾಲನೆಯನ್ನು ಪಾಲಿಸಬೇಕು ಆಗ ಮಾತ್ರ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ ಅದಕ್ಕಾಗಿ ಪ್ರತಿಯೊಬ್ಬ ವಿದ್ಯಾರ್ಥಿಗಳು ಅಳವಡಿಸಿಕೊಂಡು ಸಮಾಜದಲ್ಲಿ ಆದರ್ಶ ವ್ಯಕ್ತಿಗಳಾಗಿ ಬದುಕಿ ಎಂದು ಹೇಳಿದರು.
ನಂತರ ಮಾತನಾಡಿದ ಕವಿತಾಳ ಪಿಎಸೈ ವೆಂಕಟೇಶ ನಾಯಕ ರವರು ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ಈಗಿನಿಂದಲೇ ಸ್ಪರ್ಧಾತ್ಮಕ ಪರೀಕ್ಷೆ ಮನೋಭಾವ ಬೆಳೆಸಿಕೊಂಡು ಉನ್ನತವಾದ ಹುದ್ದೆಯನ್ನು ಪಡೆಯಿರಿ ಎಂದು ಹೇಳಿದರು.
ನಂತರ ಜನನಿ ಕಿರಿಯ ಮತ್ತು ಜನನಿ ಪದವಿ ಪೂರ್ವ ಕಾಲೇಜ್ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಇದೇ ಸಂದರ್ಭದಲ್ಲಿ ಮಾನಪ್ಪ ಪ್ರಾಚಾರ್ಯರು, ಬಸವರಾಜ ಶಿಕ್ಷಕರು, ಮೊಕ್ಷಮ್ಮ ಮಹಿಳಾ ಹೋರಾಟಗಾರರು ಮಾತನಾಡಿದರು, ನಂತರ ಕಾರ್ಯಕ್ರಮದಲ್ಲಿ ಸುಭಾಷ್ ಸಿಂಗ್, ಮೌನೇಶ ತುಗ್ಗಲದಿನ್ನಿ,ಸುಶೀಲಾ ಎಇಇ , ಸಿದ್ದಲಿಂಗಪ್ಪ, ಕಾಲೇಜ್ ಪ್ರಾಚಾರ್ಯ ನಾಗೇಶ ಜಂಗಮರಹಳ್ಳಿ, ಉಪ ಪ್ರಾಚಾರ್ಯ ಸಿದ್ದಾರ್ಥ ಪಾಟೀಲ್, ಸಿದ್ದಪ್ಪ, ಮರಿಸ್ವಾಮಿ, ಯುನಿಸ್ ಅಕ್ರಮ್, ಶ್ರೀಧರ ಗುಡಿ, ಶ್ರೀಕಾಂತಮ, ದಿವ್ಯಕುಮಾರಿ ಇದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ