ಸಂವಿಧಾನದ 75 ವರ್ಷ ಪೂರೈಸಿದ ನಿಮಿತ್ತ ಜಾಗೃತಿ ಜಾಥಾ: ತಹಶೀಲ್ದಾರ್ ಅಮರೇಶ್ ಜಿ ಕೆ
ಕೊಟ್ಟೂರು: ಸಂವಿಧಾನ ರಚಿಸಿ 75 ವರ್ಷ ಪೂರೈಸಿದೆ ಈ ಹಿನ್ನಲೆಯಲ್ಲಿ ಸರ್ಕಾರದ ಆದೇಶದ ಮೇರೆಗೆ ರಾಜ್ಯಾದ್ಯಂತ ಎಲ್ಲ ಕಡೆ ಸಂವಿಧಾನ ಜಾಗೃತಿ ಜಾಥಾ ಚಲಿಸುತ್ತಿದೆ ಇದರ ಸಂಬಂಧ
ಇದೆ ತಿಂಗಳು ಪ್ರೆ.20 ರಂದು ಕೊಟ್ಟೂರು ತಾಲೂಕು ಸೇರಿದಂತೆ ಎಲ್ಲ ಗ್ರಾಮ ಪಂಚಾಯಿತಿಯಲ್ಲಿ ಸಂವಿಧಾನ ಜಾಗೃತಿ ಜಾಥಾ ಚಲಿಸಲು ಸಕಲ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ತಹಸೀಲ್ದಾರ್ ಅಮರೇಶ್ ರವರು ಪ್ರಕಟಣೆ ಮೂಲಕ ತಿಳಿಸಿದರು
ಈ ಜಾಥಾವು ಕೆ ಅಯ್ಯನಹಳ್ಳಿ ಗ್ರಾಮ ಪಂಚಾಯಿತಿ ಯಿಂದ ಪ್ರಾರಂಭಗೊಂಡು ಸಂವಿಧಾನದ ಮಹತ್ವ ಮತ್ತು ಅದರ ಮೌಲ್ಯಗಳನ್ನು ಅರಿವು ಮೂಡಿಸುವ ರಾಷ್ಟ್ರೀಯ ಏಕತೆಯನ್ನು ಎತ್ತಿ ಹಿಡಿಯುವುದು ಈ ಸಂವಿಧಾನದ ಜಾಗೃತಿ ಜಾಥದ ಮುಖ್ಯ ಉದ್ದೇಶವಾಗಿದೆ ಎಂದರು
ಪ್ರೆ.20 ರಂದು ಶ್ರೀ ಗುರು ಮರಿಕೊಟ್ಟೂರೇಶ್ವರ ದೇವಸ್ಥಾನ ಬೆಳ್ಳಿಗೆ 11 ಗಂಟೆಗೆ ಸಂವಿಧಾನ ಜಾಗೃತಿ ಜಾಥ ಆಗಮಿಸಲಿದ್ದು ಮಾನ್ಯ ಶಾಸಕರು ಈ ಜಾಥಾಕ್ಕೆ ಚಾಲನೆ ನೀಡಲಿದ್ದಾರೆ ಈ ಜಾಥಾವು ಮೂರು ದಿನಗಳಲ್ಲಿ 14 ಗ್ರಾಮ ಪಂಚಾಯಿತಿಯಲ್ಲಿ ಸಂಚರಿಸಲಿದೆ ಸದರಿ ಜಾಥದಲ್ಲಿ ಬೈಕ್ ರ್ಯಾಲಿ, ಸೈಕಲ್ ರ್ಯಾಲಿ, ಟ್ರ್ಯಾಕ್ಟರ್ ರ್ಯಾಲಿ, ಎತ್ತಿನ ಬಂಡಿ ರ್ಯಾಲಿ , ಆಟೋ ರ್ಯಾಲಿ, ಮುಂತಾದ ರ್ಯಾಲಿಗಳನ್ನು ಆಯೋಜಿಸಲಾಗಿದೆ ಮತ್ತು ಪಟ್ಟಣ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರುಗಳು ಎಲ್ಲ ಶಾಲಾ ಕಾಲೇಜು ಪ್ರಾಂಶುಪಾಲರು, ಮುಖ್ಯೋಪಾಧ್ಯಾಯರು, ಸಹ ಶಿಕ್ಷಕರು, ವಿದ್ಯಾರ್ಥಿಗಳು, ಅಂಗನವಾಡಿ ಶಾಲಾ ಶಿಕ್ಷಕಿಯರು, ಸಹಾಯಕರು, ಸ್ತ್ರೀಶಕ್ತಿ , ಸ್ವಯಂ ಸಂಘ-ಸಂಸ್ಥೆಗಳ ಮಹಿಳೆಯರು ಭಾಗವಹಿಸಲಿದ್ದಾರೆ.
ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಶಾಲೆಗಳಲ್ಲಿ ಸಂವಿಧಾನ ಮಹತ್ವ ಮತ್ತು ಹಕ್ಕುಗಳ ಕುರಿತು ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಿರಿ ಅದರಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಥಮ ದ್ವಿತೀಯ ಮತ್ತು ತೃತೀಯ ಬಹುಮಾನವನ್ನು ನೀಡಲಾಗುವುದು ಸದರಿ ಸಂವಿಧಾನ ಜಾಗೃತಿ ಜಾಥ ಕಾರ್ಯಕ್ರಮದಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಸಂವಿಧಾನ ಜಾಗೃತಿ ಕುರಿತು ನೃತ್ಯ, ಕೋಲಾಟ, ಇತರ ಸಂಗೀತ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ.
ಈ ಜಾಥದಲ್ಲಿ ಎಲ್ಲ ಕನ್ನಡ ಪರ, ದಲಿತಪರ, ರೈತಪರ , ವಿವಿಧ ಸಂಘಟನೆಗಳ ಎಲ್ಲ ಸಮಾಜದ ಮುಖಂಡರುಗಳು, ಭಾಗವಹಿಸಬೇಕೆಂದು ಪ್ರಕಟಣೆ ಮೂಲಕ ಕೋರಲಾಗಿದೆ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ