ದ ಸಂ ಸ ಭಿ ಘ ಜಿಲ್ಲಾ ಸಮಿತಿಯಿಂದ ನೂತನ ಪದಾಧಿಕಾರಿಗಳ ಆಯ್ಕೆ.
ಸಿಂಧನೂರ ಪೆ 29 . ದಲಿತ ಸಂಘಟನಾ ಸಮಿತಿ ಭೀಮ ಘರ್ಜನೆ ಜಿಲ್ಲಾ ಸಮಿತಿಯಿಂದ ನೂತನ ಪದಾಧಿಕಾರಿಗಳ ಆಯ್ಕೆ.
ಮಾ.ನಗರದ ಪ್ರವಾಸಿ ಮಂದಿರದಲ್ಲಿ ದಲಿತ ಸಂಘಟನಾ ಸಮಿತಿ ಭೀಮ ಘರ್ಜನೆ ಜಿಲ್ಲಾ ಸಮಿತಿಯಿಂದ ಮಸ್ಕಿ, ಲಿಂಗಸೂರು, ಮಾನವಿ, ಸಿರಿವಾರ ತಾಲೂಕುಗಳ ನೂತನ ಪದಾಧಿಕಾರಿಗಳ ಮತ್ತು ಸಿಂಧನೂರು ತಾಲೂಕು ಘಟಕ ಹಾಗೂ ಗ್ರಾಮ ಘಟಕ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
ಈ ಸಭೆಯ ಅಧ್ಯಕ್ಷತೆಯನ್ನು ದಲಿತ ಸಂಘಟನಾ ಸಮಿತಿ ಭೀಮ ಘರ್ಜನೆಯ ರಾಜ್ಯ ಸಮಿತಿಯ ಮಹಾ ಪ್ರಧಾನ ಕಾರ್ಯದರ್ಶಿ ಹನುಮಂತಪ್ಪ ಹಂಪನಾಳ ವಹಿಸಿ ಮಾತನಾಡಿ ಸಮಿತಿಯ ತತ್ವ ಸಿದ್ದಾಂತಗಳನ್ನು ಎಲ್ಲಾರೂ ಪಾಲಿಸಬೇಕು.ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದನೆ ಮಾಡಬೇಕು ಮತ್ತು ಕಾಲ ಕಾಲಕ್ಕೆ ವರಿಷ್ಠರ ಮಾರ್ಗದರ್ಶನ ಪಡೆದುಕೊಳ್ಳಬೇಕು.ಎಲ್ಲಾರೂ ಸಕ್ರೀಯವಾಗಿ ಕಾರ್ಯನಿರ್ವಹಿಸಬೇಕು ಎಂದರು.
ನಂತರ ರಾಯಚೂರು ಜಿಲ್ಲಾಧ್ಯಕ್ಷರಾದ ಶಿವರಾಜ ಉಪ್ಪಲದೊಡ್ಡಿ ಮಾತನಾಡಿ ಅಗತ್ಯ ಬಿದ್ದಲ್ಲಿ ಹೋರಾಟಕ್ಕೂ ಸೈ ಎನ್ನಬೇಕು. ಇದಕ್ಕೂ ಮುನ್ನ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿಗಳು, ವಿಭಾಗೀಯ ಅಧ್ಯಕ್ಷರು ಮತ್ತು ಮತ್ತು ಇನ್ನಿತರ ಹಿರಿಯರ ಮಾರ್ಗದರ್ಶನ ಪಡೆದುಕೊಂಡು ಹೋರಾಟಗಳನ್ನು ರೂಪಿಸಿಕೋಳ್ಳ ಬೇಕೆಂದರು.ಕಲ್ಯಾಣ ಕರ್ನಾಟಕದ ವಿಭಾಗೀಯ ಗೌರವಾಧ್ಯಕ್ಷರಾಗಿ ಮಾರೇಶ ಭಂಡಾರಿ ಇವರನ್ನು ನೇಮಕ.
ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ವಿಭಾಗೀಯ ಅಧ್ಯಕ್ಷರಾದ ಬಾಲಸ್ವಾಮಿ ತಿಡಿಗೋಳ, ಜಿಲ್ಲಾ ಸಮಿತಿಯ ಕಾರ್ಯಧ್ಯಕ್ಷ ಸುರೇಶ ಎಲೆಕೂಡಗಿ, ಗೌರವಾಧ್ಯಕ್ಷರು ಯಮನೂರಪ್ಪ ಪರಾಪೂರ, ಕೋಶಾಧ್ಯಕ್ಷರು
ಕಂಠಪ್ಪ ಮಾಟೂರು, ಉಪಾಧ್ಯಕ್ಷ ವಿಜ್ಞೇಶ್ ಕೆಂಗಲ್, ಖಜಾಂಚಿ ಆರೋಗ್ಯಪ್ಪ ಮುದುಗಲ್ ಸೇರಿದಂತೆ ಅನೇಕ ಉಪಸ್ಥಿತರಿದ್ದರು.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ