ಬೆಳ್ಳಿ ಸಂಭ್ರಮ ಮಕ್ಕಳ ಹಬ್ಬ ೨೦೨೩-೨೪
ಕೊಟ್ಟೂರು ತಾಲೂಕಿನ ನಿಂಬಳಗೇರಿ ಗ್ರಾಮದ ಶ್ರೀ ಕಲ್ಲೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೨೫ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ಮತ್ತು ೨೫ ವರ್ಷಗಳಿಗೆ ಕಾಲಿಟ್ಟ ನೆನಪಿಗಾಗಿ ಬೆಳ್ಳಿ ಸಂಭ್ರಮ ಮಕ್ಕಳ ಹಬ್ಬ ೨೦೨೩-೨೪ ಹೆಸರಿನೊಂದಿಗೆ ಅಯೋಜಿಸಲಾಗಿದ್ದು ಕಾರ್ಯಕ್ರಮದಲ್ಲಿ ವಿಶೇಷವಾಗಿ ಜಿ.ಪ್ರಭಾವತಿ ಇವರ ಮಾರ್ಗದರ್ಶನದಲ್ಲಿ ಚಿಕ್ಕ ಮಕ್ಕಳಿಂದ ರಾಷ್ಟಿçÃಯ ,ನಾಯಕರ, ದಾಸರ, ಶರಣರ ಕವಿಗಳ, ಆಧುನಿಕ , ಆದರ್ಶ ವ್ಯಕ್ತಿಗಳ, ಛದ್ಮವೇಷಗಳನ್ನು ಹಾಗೂ ಸಾಂಸ್ಕೃತಿ ಕಾರ್ಯಕ್ರಮವನ್ನು ಪ್ರದಶಿಸಲಾಯಿತು.
ಕಾರ್ಯಕ್ರಮದಲ್ಲಿ ಎಂ.ಗುರುಸಿದ್ದನಗೌಡ್ರು ಅಧ್ಯಕ್ಷತೆ ವಹಿಸಿ ಮಾತನಾಡಿ ಇಂದಿನ ಸ್ಪರ್ಧಾತ್ಮಕ ದಿನಮಾನದಲ್ಲಿ ಶಿಕ್ಷಣಕ್ಕೆ ಅತ್ಯಂತ ಮಹತ್ವದ್ದು , ಗ್ರಾಮೀಣ ಭಾಗದ ಮಕ್ಕಳ ಗುಣಮಟ್ಟದ ಶಿಕ್ಷಣವನ್ನು ಕೊಡುವ ಪ್ರಯತ್ನ ಈ ಶಾಲೆಯಿಂದ ಆಗಲಿ ಇಲ್ಲಿ ಕಲಿತ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಉದ್ಘಾಟನೆಯ್ನು ಭೀಮಣ್ಣ ಗಜಾಪುರ ಪತ್ರಕರ್ತ ಹಾಗೂ ಸಾಹಿತಿಗಳು ಇವರು ಉದ್ಘಾಟಿಸಿ ಮಾತನಾಡಿದರು. ಕೂಡ್ಲಿಗಿ ತಾಲೂಕಿನ ವಿಶೇಷತೆಯ ಬಗ್ಗೆ ಐತಿಹಾಸಿಕ ಹಿನ್ನಲೆವುಳ್ಳ ಗುಡೆಕೋಟೆ ಜರ್ಮಲಿ ರಾಜ ವಂಶಸ್ಥರ ಹಾಗೂ ವಿಜಯನಗರ ಸಾಮ್ರಾಜ್ಯದ ಉಜ್ಜಯಿನಿಯ ವಿಶೇಷತೆಗಳ ಹೋಲಿಕೆಯನ್ನು ನೀಡಿ ಅದರ ಮಹತ್ವದ ಬಗ್ಗೆ ಪರಂಪರೆಯನ್ನು ಉಳಿಸುವ ಗೌರವಿಸುವಂತೆ ತಿಳಿಸಿದರು. ಆವಾಬ್ದಾರಿ ಇಂದಿನ ಮಕ್ಕಳಾದಗಲಿ ಪಠ್ಯದಲ್ಲಿಬರುವ ಐತಿಹಾಸಿಕ ಹಿನ್ನೆಲೆಯುಳ್ಳ ನೈಜತೆಯನ್ನು ಮಕ್ಕಳಿಗೆತಿಳಿಸುವಂತೆ ಶಿಕ್ಷಕರಿಗೆ ಸಲಹೆ ನೀಡಿದರು.
ಪ್ರಾಸ್ಥಾವಿಕ ಹಾಗೂ ಸ್ವಾಗತವನ್ನು ಸಂಸ್ಥೆಯ ಕಾರ್ಯದರ್ಶಿಯಾದ ಎಸ್.ವೀರಣ್ಣ ಮಾತನಾಡುತ್ತ ಶಾಲೆಯ ೨೫ನೇ ವರ್ಷಕ್ಕೆ ಕಾಲಿಟ್ಟ ನೆನಪಿಗಾಗಿ ಬೆಳ್ಳಿ ಸಂಭ್ರಮ ಈ ಹೆಸರು ೨೫ನೇ ವರ್ಷಕ್ಕೆ ಮಾತ್ರ ಸೀಮಿತವಾಗಿರದೆ ಬೆಲ್ಳಿಯು ಸ್ವಯಂ ಹೊಳಪಿನಿಂದ ಕೂಡಿದೆ ಒಂದು ಲೋಹ ಇದಕ್ಕೆ ಯಾವುದೇ ಬಣ್ಣ ಹಚ್ಚುವ ಅವಶ್ಯಕತೆಯಿಲ್ಲ ಮಕ್ಕಳ ಕಲಿಕೆಯು ಕೂಡ ಹಾಗೆಯೇ ಇರಬೇಕು ಅವರಲ್ಲಿ ನೈಜತೆಯನ್ನು ಮೂಡಿಸಲು ಶಾಲೆಯಲ್ಲಿ ಶಿಕ್ಷಕರು ಮನೆಯಲ್ಲಿ ಪೋಷಕರು ಜವಾಬ್ದಾರಿ ವಹಿಸುವಂತೆ ಇದಕ್ಕೆ ಪೂರಕ ಎನ್ನುವಂತೆ ಇಂತಹವೇದಿಕೆಗಳು ಸಾಕ್ಷಿ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕಿಕೆ.ಶಿವಲೀಲಾ ಹಾಗೂ ಸಿಬ್ಬಂದಿ ವರ್ಗದವರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಮಂಗಳಮ್ಮ ಗ್ರಾಮ ಪಂಚಾಯಿತಿ ಸರ್ವ ಸದಸ್ಯರು ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾದ ಎನ್.ಜಿ.ಮಲ್ಲಿಕಾರ್ಜುನಗೌಡ್ರು , ಉಪಾಧ್ಯಕ್ಷರಾದ ಹನುಮಂತಪ್ಪ ಸರ್ವ ನಿರ್ದೇಶಕರು. ವಿ.ಎಸ್.ಎಸ್.ಎನ್.ಸದಸ್ಯರು ಮಾಜಿ ಅಧ್ಯಕ್ಷರಾದ ಎನ್.ಜಿ.ಚನ್ನಬಸವನಗೌಡ್ರುಹಾಗೂ ಪೋಷಕರು ಭಾಗವಹಿಸಿದಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ