ಇತಿಹಾಸ ಸೃಷ್ಟಿಸಿದ ಸಂವಿಧಾನ ಜಾಗೃತಿ ಜಾಥಾ ಭವ್ಯ ಮೆರವಣಿಗೆ ಕಾರ್ಯಕ್ರಮ

ಮಸ್ಕಿ : 75ನೇ ಸಂವಿಧಾನ ಜಾರಿ ಅಮೃತ ಮಹೋತ್ಸವ ನಿಮಿತ್ತ ಸರ್ಕಾರ ಹಮ್ಮಿಕೊಂಡಿರುವ ಸಂವಿಧಾನ ಜಾಗೃತಿ ಜಾಥಾದ ಭವ್ಯ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅದ್ದೂರಿಯಾಗಿ ನಡೆಯಿತು.

ರಾತ್ರಿ 10ಕ್ಕೆ ಪಟ್ಟಣಕ್ಕೆ ಆಗಮಿಸಿದ ರಥಕ್ಕೆ ನೂರಾರು ಮಹಿಳೆಯರು -ಪೂರ್ಣಕುಂಭ ಹಾಗೂ ಕಳಸದೊಂದಿಗೆ ಜಾಥಾವನ್ನು ಸ್ವಾಗತಿಸಿದರು.ಪಟ್ಟಣದ ಅಂಬೇಡ್ಕರ್ ಪ್ರತಿಮೆ ಬಳಿ ತಹಶೀಲ್ದಾರ್ ಸುಧಾ ಆರಮನೆ,ತಾಲ್ಲೂಕು ಪಂಚಾಯಿತಿ ಇಒ ಉಮೇಶ, ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಜಿ ಉಮೇಶ ಸಿದ್ನಾಳ, ಪುರಸಭೆ ಮುಖ್ಯಾಧಿಕಾರಿ ನರಸರೆಡ್ಡಿ, ಸರ್ಕಲ್ ಇನ್‌ಸ್ಪೆಕ್ಟರ್ ಮಲ್ಲಿಕಾರ್ಜುನ ಸೇರಿ ಅನೇಕ ಹಿರಿಯ ಅಧಿಕಾರಿಗಳು ಸಂವಿಧಾನ ಜಾಗೃತಾ ರಥಕ್ಕೆ ಮಾಲಾರ್ಪಣೆ ಮಾಡಿದರು.

ಪಟ್ಟಣದಲ್ಲಿ ಜೈ ಭೀಮ ಘೋಷಣೆಯು ಪ್ರತಿಧ್ವನಿಸಿತು. ಹಗಲು ವೇಷ, ಹಲಗೆ ಮೇಳಾ, ಡೊಳ್ಳು ಕುಣಿತ, ಸುಡಗಾಡು ಸಿದ್ಧರ ಜಾನಪದ ನೃತ್ಯ ಸೇರಿದಂತೆ ವಿವಿಧ ಜಾನಪದ ತಂಡಗಳು ಮೆರವಣಿಗೆಗೆ ಮೆರುಗು ನೀಡಿದವು.ಸಂವಿಧಾನ ಜಾಗೃತಿ ರಥದ ಕಾರ್ಯಕ್ರಮ ದಲ್ಲಿ ಸಾರ್ವಜನಿಕರು ಸಂಘಟನೆಗಳು ಬಾಬಾ ಸಾಹೇಬ್ ಅಂಬೇಡ್ಕರ್ ರವರ ಅಭಿಮಾನಿಗಳಿಂದ ರಸ್ತೆಗಳು ತುಂಬಿ ತುಳುಕುತ್ತಿದ್ದವು. 

ತಡರಾತ್ರಿಯವರೆಗೂ ಜನಸಾಗರವೇ ಸ್ಥಳದಲ್ಲಿ ನೆರೆದಿತ್ತು. ನೂರಾರು ಮುಖಂಡರು ತಾಲ್ಲೂಕಿನ ವಿವಿಧ ಹಳ್ಳಿಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಾಲ್ಗೊಂಡಿದ್ದರು. ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಗಳು ರಾತ್ರಿ 2 ಗಂಟೆವರೆಗೆ ಜರುಗಿದವು ಇದೆ ಮೊದಲು ಬಾರಿಗೆ ತಡ ರಾತ್ರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧಿಕಾರಿಗಳು ಸಂಘಟನೆಗಳು, ಸಾರ್ವಜನಿಕರು  ಭಾಗವಹಿಸಿ ಯಶಸ್ವಿಗೆ ಸಾಕ್ಷಿ ಯಾಗಿದ್ದು ಇತಿಹಾಸವೇ ಸರೀ ಎಂದರೆ ತಪ್ಪಾಗಲಾರದು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ