* ಹಾಸ್ಯದ ರಸದೌತಣ ಉಣಿಸಿದ : ಸುದ್ದಿ ಮಿತ್ರ ಸಾಂಸ್ಕೃತಿಕ ವೇದಿಕೆ *
"ಸಜ್ಜನರ ಸಹವಾಸ ಹೆಜ್ಜೇನು ಸವಿದಂತೆ": ತಿಪ್ಪೇಸ್ವಾಮಿ ವೆಂಕಟೇಶ್
ಕೊಟ್ಟೂರಿನಲ್ಲಿ ಸುಮಾರು ಎರಡು ದಶಕಗಳಿಂದ ಸಂಗೀತ ಹಾಗೂ ರಸಮಂಜರಿ ಕಾರ್ಯಕ್ರಮಗಳ ನಡೆಸುತ್ತಾ ಬಂದಿರುವ ಕೆ ಎಂ ಚಂದ್ರಶೇಖರ್, ಗೌರಿಹಳ್ಳಿ ಮಂಜುನಾಥ್ ಇವರ ಸುದ್ದಿ ಮಿತ್ರ ಸಾಂಸ್ಕೃತಿಕ ವೇದಿಕೆ ಸಂಸ್ಥೆ ಇವರಿಂದ ಹಾಸ್ಯ ಸಂಭ್ರಮ ಕಾರ್ಯಕ್ರಮವನ್ನು ಭಾನುವಾರ ರಂದು ಎಪಿಎಂಸಿ ಆವರಣದಲ್ಲಿ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ತಿಪ್ಪೇಸ್ವಾಮಿ ವೆಂಕಟೇಶ್ ಅವರು ನೆರವೇರಿಸಿ ಮಾತನಾಡಿ ಈ 21ನೇ ಶತಮಾನದ ಮುಂದಿನ 20 ಶತಮಾನಗಳ ಕಂಪ್ಯೂಟರ್ ಜಗತ್ತು ಆಳುತ್ತಿದ್ದರು. ಇಂದಿನ ದಿನಗಳಲ್ಲಿ ಹಾಸ್ಯ ಸಂಭ್ರಮ ಉಳಿದಿರುವುದು ಕಲಾಭಿಮಾನಿ, ಕಲಾ ಪೋತ್ಸಹಕ ರಿಂದ ಹಾಸ್ಯ ಕಾರ್ಯಕ್ರಮ ಸಂಭ್ರಮಕ್ಕೆ ಮೆರುಗು ಮೂಡಿಸಿತು.
"ಸಜ್ಜನರ ಸಹವಾಸ ಹೆಜ್ಜೇನು ಸವಿ ದಂತೆ"ದುರ್ಜನರ ಸಹವಾಸ ಬಚ್ಚಲು ನೀರು ಸಿಡಿದಂತೆ ಸರ್ವಜ್ಞ" ಅದಕ್ಕೆ ಒಳ್ಳೆಯವರ ಜೊತೆಗೆ ಇರೋಣ ಎಂಬುವ ಸಂದೇಶ ಹೇಳುತ್ತಾ. ನಮ್ಮ ಕೊಟ್ಟೂರಿನಲ್ಲಿ ಪ್ರತಿವರ್ಷ ಇಂತಹ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿರುವ ಈ ಸಂಸ್ಥೆಯವರಿಗೆ ಇನ್ನು ಹೆಚ್ಚಿನ ಮಟ್ಟದಲ್ಲಿ ಬಲ ಸಿಗಲಿ ಎನ್ನುವುದು ನನ್ನ ಆಸೆಯ ಮತ್ತು ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಎಂದು ಕರೆದರು ಪಕ್ಷ ನನ್ನನ್ನು ಬಿಟ್ಟರು ಜನ ನನ್ನನ್ನು ಈಗಲೂ ಜೆಡಿಎಸ್ ಮುಖಂಡ ಎಂದು ಗುರುತಿಸುವುದು ನನ್ನ ಸೌಭಾಗ್ಯ ಎಂದು ಹೇಳಿದರು.
ನಂತರ ಡಿಎಸ್ಎಸ್ ಮುಖಂಡ ಬದ್ದಿ ಮರಿಸ್ವಾಮಿ ಮಾತನಾಡಿ ಪಟ್ಟಣದ ಜನತೆಗೆ ಪ್ರತಿ ವರ್ಷ ಸಂಗೀತ ಮತ್ತು ರಸಮಂಜರಿ ಕಾರ್ಯಕ್ರಮಗಳನ್ನು ಆಯೋಜಿಸಿ ರಸದೌತಣ ಉಣಿಸುವ ಕಾರ್ಯ ಮಾಡುವ ಈ ಸಂಸ್ಥೆಗೆ ಶಾಘಿನಿಯ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ವೆಂಕಟೇಶ್ ತಿಪ್ಪೇಸ್ವಾಮಿ ಯವರು, ವಕೀಲರ ಸಂಘದ ಅಧ್ಯಕ್ಷರು ಜಿಎಂ ಮಲ್ಲಿಕಾರ್ಜುನ್, ಬದ್ದಿ ಮರಿಸ್ವಾಮಿ, ಅಡಿಕಿ ಮಂಜುನಾಥ್,ಕೆ ಕೊಟ್ರೇಶ್, ಬದ್ದಿ ಮಂಜುನಾಥ್, ಪ್ರದೀಪ್ ಕುಮಾರ್,ತಗ್ಗಿನಕೇರಿ ಹನುಮಂತಪ್ಪ ವಕೀಲರು, ಎಬಿಎಂ ಪ್ರವೀಣ್ , ಯು ಎಂ ಎ ರೇವಣ ಸಿದ್ದಯ್ಯ, ಕಬ್ಬಳ್ಳಿ ಪರಸಪ್ಪ, ಸಾತ್ವಾಡಿ ಕೊಟ್ರೇಶ್ ಬತ್ತನ ಹಳ್ಳಿ, ಸಿಪಿಎಂಎಲ್ ಕಮಿನಿಸ್ಟ್ ಪಾರ್ಟಿ ತಾಲೂಕು ಕಾರ್ಯದರ್ಶಿ ಜಿ ಮಲ್ಲಿಕಾರ್ಜುನ್, ಪತ್ರ ಬರಹಗಾರರು ಪಂಚಾಕ್ಷರಿ, ಬಿಡಿಸಿಸಿ ಬ್ಯಾಂಕ್ ಅಂಬಳಿ ಕೊಟ್ರೇಶ್, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರು ಗುರುಮೂರ್ತಿ, ಅಂಗಡಿ ಪ್ರಕಾಶ್ ಮತ್ತಿಹಳ್ಳಿ, ಮರಳು ಸಿದ್ದಯ್ಯ,,ಇನ್ನೂ ಅನೇಕ ಪ್ರಮುಖ ಮುಖಂಡರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ನುರಿತ ಹಾಸ್ಯ ಕಲಾವಿದರಾದ ಗಂಗಾವತಿ ನರಸಿಂಹ ಜೋಶಿ, ಜೀವನ ಸಾಬ್, ಗವಿ ಸಿದ್ದಯ್ಯ ಹಳ್ಳಿಕೇರಿ ಮಠ, ಕನ್ನಡದ ಕಣ್ಮಣಿ ಅನುಷಾ ಕೆ ಹಿರೇಮಠ್, ಈ ಕಾರ್ಯಕ್ರಮಕ್ಕೆ ಆಗಮಿಸಿ ಕಲಾತಂಡದವರು ಕೊಟ್ಟೂರಿನ ಜನರಿಗೆ ಹಾಸ್ಯ ಚಟಾಕಿ ಸಿಡಿಸಿದರು.
ನಿರೂಪಣೆಯನ್ನು ಗುರುಪ್ರಸಾದ್ ಜೆಎಂ ನೆರವೇರಿಸಿದರು
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ