ಇಚ್ಛಾಶಕ್ತಿ ಇದ್ದರೆ ಗೆಲುವು ಖಚಿತ : ಸುಭಾಷ್ ಕೊರೇಕರ್
ಮಸ್ಕಿ; ಶಿಕ್ಷಣ ಪಡೆಯಲು ಬಡತನ ಶ್ರಿಮಂತಿಕೆ ಮುಖ್ಯವಲ್ಲ ಇಚ್ಚಾಶಕ್ತಿ ಇದ್ದರೆ ಗುರಿ ಇರಿಸಿಕೊಂಡು ಮುನ್ನಡೆದರೆ ವಿಶ್ವವನ್ನೇ ಗೆಲ್ಲಬುಹುದು ಎಂದು ವೀರರಾಣಿ ಕಿತ್ತೂರು ಚನ್ನಮ್ಮ ಪದವಿ ಪೂರ್ವ ಕಾಲೇಜು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸುಭಾಷ್ ಕೊರೇಕರ್ ಹೇಳಿದರು.
ಪಟ್ಟಣದ ವೀರರಾಣಿ ಕಿತ್ತೂರು ಚನ್ನಮ್ಮ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಕಾಲೇಜಿನ
13 ನೇ ವಾರ್ಷಿಕೋತ್ಸವ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡಿಗೆ ಸಮಾರಂಭದ ಅಧ್ಯಕ್ಷತೆವಹಿಸಿಮಕ್ಕಳ ಆಸಕ್ತಿಗೆ ಅನುಗುಣವಾಗಿ ಪೋಷಕರು ವಿಷಯಗಳನ್ನು ಆಯ್ದು ಕೊಳ್ಳಲು ಸ್ವಾತಂತ್ರ್ಯ ನೀಡಬೇಕು. ಮಕ್ಕಳು ವಿಧೇಯತೆಯನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ವಿದ್ಯೆ ಸಾರ್ಥಕತೆ ಕಾಣುತ್ತದೆ ಎಂದರು. ಯಾವುದೇ ಕೆಲಸದಲ್ಲಿ ನಿಸ್ವಾರ್ಥತೆ ಮತ್ತು ಪ್ರಾಮಾಣಿಕತೆ ಇರಬೇಕು. ವಿದ್ಯಾರ್ಥಿಗಳು ಪರೀಕ್ಷೆಯನ್ನು ಪೂರ್ವ ಸಿದ್ಧತೆ ಯೊಂದಿಗೆ ಎದುರಿಸಿದಾಗ ಪರೀಕ್ಷಾ ಭಯ ದೂರವಾಗುತ್ತದೆ ಎಂದು ಹೇಳಿದರು.
ಕಾಲೇಜಿನ ಪ್ರಾಚಾರ್ಯರಾದ ಲಕ್ಷ್ಮಣ ಕರ್ಲಿ ಪ್ರಾಸ್ತಾವಿಕವಾಗಿ ಮಾತನಾಡಿ ಜೀವನದಲ್ಲಿ ಮೌಲ್ಯಗಳು ಹೆಚ್ಚು ಪ್ರಾಮುಖ್ಯತೆಯನ್ನು ಪಡೆದು ಕೊಳ್ಳುತ್ತವೆ. ವಿದ್ಯಾರ್ಥಿ ಹಂತದಲ್ಲಿಯೆ ಉತ್ತಮ ವೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು. ಸಮಾಜದಲ್ಲಿ ಶಿಕ್ಷಣ ಇಲ್ಲದಿದ್ದರೆ ಬದುಕು ಕಷ್ಟವಾಗುತ್ತದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಉಪನ್ಯಾಸಕರಾದ ಹುಸೇನ್ ಬಾಷಾ, ಎಮ್ ಡಿ ಯುಸುಪ್ ,ಪರಮೇಶ, ತನುಜ ಮತ್ತು ವಿದ್ಯಾರ್ಥಿಗಳಾದ ಭಾಗೀರಥಿ, ಅಮರೇಶ ಶ್ವೇತಾ,ಶೃತಿ,ಶಿವಬಸವ ಅನಿಸಿಕೆ ವ್ಯಕ್ತಪಡಿಸಿದರು ಹಾಗೂ 2022-23 ನೇ ಸಾಲಿನಲ್ಲಿ ಅತೀ ಹೆಚ್ಚು ಅಂಕ ಪಡೆದ ಕೀರ್ತನಾ ಪಾಟೀಲ್ ಮತ್ತು ಯಂಕಮ್ಮ ಬುದ್ದಿನ್ನಿ ಇವರನ್ನು ಸನ್ಮಾನಿಸಲಾಯಿತು. ಶರಣಮ್ಮ ಮತ್ತು ಸಂಗಡಿಗರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು.ಉಪನ್ಯಾಸಕರಾದ ಶರಣಬಸವ ಗೋನಾಳ ಸ್ವಾಗತಿಸಿದರು, ಕು.ಪವಿತ್ರ ವಂದಿಸಿದರು ಹಾಗೂ ಕು.ಬನಶ್ರೀ ನಿರೂಪಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ