ವಿವಿಧ ಬೇಡಿಕೆ ಈಡೇರಿಕೆಗಾಗಿ : ವಿಶ್ವಕರ್ಮ ಸಮಾಜದಿಂದ ಪ್ರತಿಭಟನೆ

ವರದಿ - ಮಂಜುನಾಥ್ ಕೋಳೂರು ಕೊಪ್ಪಳ

ಕೊಪ್ಪಳ : - ಫೆಬ್ರವರಿ 14 ರಂದು ಬುಧವಾರ ಬೆಳಿಗ್ಗೆ ನಗರದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಕೊಪ್ಪಳ ಜಿಲ್ಲಾ ವಿಶ್ವಕರ್ಮ ಸಮಾಜದ ಯುವ ಮುಖಂಡ ಬ್ರಹ್ಮಾನಂದ ಬಡಿಗೇರ್ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಈ ವಿಷಯ ತಿಳಿಸಿದರು. ಕೊಪ್ಪಳ ಜಿಲ್ಲೆಯಲ್ಲಿರುವ ವಿಶ್ವಕರ್ಮ ಸಮಾಜದ ದೇವಸ್ಥಾನಗಳಿಗೆ ಸರ್ಕಾರದಿಂದ ಅನುದಾನ ಬಿಡುಗಡೆ, ಜಿಲ್ಲೆಯಲ್ಲಿರುವ ಸಮಾಜದ ಬಡವರಿಗೆ ಕೈಗಾರಿಕ ಇಲಾಖೆ ವತಿಯಿಂದ ನಿವೇಶನ, ಬಡಿಗಿತನ ಸೇರಿದಂತೆ ಪಂಚ ಕಸುಬು ಮಾಡುವ ವಿಶ್ವಕರ್ಮ ಜನಾಂಗದವರಿಗೆ ಹೆಚ್ಚಿನ ರೀತಿಯಲ್ಲಿ ಕೈಗಾರಿಕ ಇಲಾಖೆ ವತಿಯಿಂದ ಆರ್ಥಿಕ ಸಹಾಯಧನ, ನಗರದಲ್ಲಿ ವಿಶ್ವಕರ್ಮ ವಿದ್ಯಾರ್ಥಿ ನಿಲಯಕ್ಕೆ ಅನುದಾನ, ನಿವೇಶನಕ್ಕೆ 3,00,000 ಸರ್ಕಾರದ ಅನುದಾನ, ಕಾಂತರಾಜ್ ಆಯೋಗದ ವರದಿ ಬಿಡುಗಡೆ, ನಗರದಲ್ಲಿ ಸರ್ಕಾರದಿಂದ ಮೌನೇಶ್ವರ ದೇವಸ್ಥಾನ ನಿರ್ಮಾಣ ಮಾಡಲು ಭೂಮಿ ಅಥವಾ ಜಾಗ ನೀಡಬೇಕು, ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿರುವ ದೇವಸ್ಥಾನಗಳಲ್ಲಿ ವಿಶ್ವಕರ್ಮ ಜನಾಂಗದ ಓರ್ವ ವ್ಯಕ್ತಿಯನ್ನು ದೇವಸ್ಥಾನದ ಕಮಿಟಿಯಲ್ಲಿ ಸದಸ್ಯರನ್ನಾಗಿ ಮಾಡಬೇಕು, ನಗರದಲ್ಲಿ ಜಗದ್ಗುರು ಮೌನೇಶ್ವರರ ದೇವಸ್ಥಾನ ನಿರ್ಮಾಣ ಮಾಡಲು ಸರ್ಕಾರದಿಂದ  

1 ( ಒಂದು )ಕೋಟಿ ಅನುದಾನ, ನಗರದಲ್ಲಿ ಅಮರಶಿಲ್ಪಿ ಜಕಣಾಚಾರಿ ವೃತ್ತ ಮಾಡಲು ನಗರಸಭೆ ವತಿಯಿಂದ ಅನುಮತಿ, ಕಲ್ಯಾಣ ಕರ್ನಾಟಕ ಭಾಗದ ವಿಶ್ವಕರ್ಮ ಸಮಾಜದ ಮುಖಂಡರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ, ಎರಡು ಕೋಟಿ ವೆಚ್ಚದಲ್ಲಿ ಕೈಗಾರಿಕಾ ಘಟಕ ಸ್ಥಾಪನೆ, ಸಾಮಗ್ರಿಗಳ ಬದಲಿಗೆ ಕನಿಷ್ಠ 2 ಲಕ್ಷ ಅನುದಾನ ನೀಡಬೇಕು.ವಿಶ್ವಕರ್ಮ ಜನಾಂಗದ ಪತ್ರಕರ್ತರಿಗೆ ಎಲೆಕ್ಟ್ರಾನಿಕ್ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಉದ್ದಿಮೆಯನ್ನು ಸ್ಥಾಪಿಸಲು ಸಹಾಯಧನ ನೀಡಬೇಕು ಎಂಬುವವು ಪ್ರಮುಖ ಬೇಡಿಕೆಯಾಗಿವೆ 

 ಸರ್ಕಾರ ಈಡೇರಿಸಬೇಕೆಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಹೋರಾಟ ಸಮಿತಿಯ ಪ್ರಮುಖರಾದ ಕಾರ್ತಿಕ್, ವೀರಭದ್ರಪ್ಪ ಬಡಿಗೇರ ಗಿಣಿಗೇರಿ, ಪ್ರಶಾಂತ ವಿಶ್ವಭ್ರಾಹ್ಮಣ, ಮಂಜುನಾಥ ಬಡಿಗೇರಿ, ಶಂಕ್ರಪ್ಪ ಬಡಿಗೇರ ಸೇರಿದಂತೆ ಇತರರು ಭಾಗವಹಿಸಿದ್ದರು.

ಬಾಕ್ಸ್

ಸಂಘದ ಅಭಿಪ್ರಾಯಕ್ಕಿಂತ ಸಮಾಜದ ಅಭಿಪ್ರಾಯವೇ ಮುಖ್ಯ ಈಚಗೆ ವಿಶ್ವಕರ್ಮ ಸಮಾಜದಲ್ಲಿ ಕೆಲವು ಭಿನ್ನಾಭಿಪ್ರಾಯಗಳಿವೆ ನಿಜ, ಆದರೆ ಸಂಘಕ್ಕಿಂತ ಸಮಾಜದ ಒಳಿತಿಗೆ ಎಲ್ಲರೂ ಕಾಳಜಿ ವಹಿಸಬೇಕಿದೆ. ಸಮಾಜವು ವಿವಿಧ ರಂಗಗಳಲ್ಲಿ ಬಹಳ ಹಿಂದೆ ಉಳಿದಿದೆ. ಸಮಾಜವನ್ನ ಮುಖ್ಯವಾಹಿನಿಗೆ ತರಲು ಎಲ್ಲರ ಸಹಕಾರ ಅತ್ಯಗತ್ಯವಾಗಿದೆ. ನಾಳೆ ಸಮಾಜದ ಯುವಕರು ಸೇರಿದಂತೆ ಇತರರ ಬೆಂಬಲದೊಂದಿಗೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ ಮಾಡಲಾಗುವುದು.ಬ್ರಹ್ಮಾನಂದ ಬಡಿಗೇರ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ