"ಮೃತನ ವಾರಸುದಾರರ ಪತ್ತೆ ಕಾರ್ಯಕ್ಕೆ ಸಹಕಾರಿಯಾಗಲಿ "

ಕೊಟ್ಟೂರು : ದಿನಾಂಕ:18/01/2024 ರಂದು ಬೆಳಿಗ್ಗೆ 11-30 ಗಂಟೆಗೆ ಪಿರ್ಯಾದಿದಾರರಾದ ಠಾಣೆಗೆ ಹಾಜರಾಗಿ ಕೊಟ್ಟ ದೂರಿನ ಸಾರಾಂಶವೇನೆಂದರೆ, ದಿನಾಂಕ:18/01/2024 ರಂದು ಬೆಳಿಗ್ಗೆ ಕೊಟ್ಟೂರು ಪಟ್ಟಣದ ಬಿಡಿಸಿಸಿ ಬ್ಯಾಂಕ್ ಮುಂದುಗಡೆ ಇರುವ ಕೋರಿಕೆ ಬಸ್ ನಿಲ್ದಾಣದಲ್ಲಿ ಸುಮಾರು 65-70 ವರ್ಷದ ಅನಾಮಧೇಯ ವ್ಯಕ್ತಿಯ ಮೃತ ದೇಹವಿದ್ದು ಮೃತ ದೇಹವನ್ನು ಪರಿಶೀಲಿಸಿ ನೋಡಲಾಗಿ ಮೃತ ದೇಹದ ಸೋಂಟದ ಮೇಲೆ ಮತ್ತು ಕಣ್ಣುಗಳಿಗೆ ಇರುವೆಗಳು ಹತ್ತಿದ್ದು ಮೃತನ ಸೊಂಟದ ಮೇಲ್ಬಾಗದಲ್ಲಿ ಇರುವೆ ಕಚ್ಚಿದ್ದರಿಂದ ಸೊಂಟದ ಮೇಲ್ಬಾಗದ ಚರ್ಮ ಅಲ್ಲಲ್ಲಿ ಕಿತ್ತಿದ್ದು ಕಂಡುಬರುತಿದ್ದು ಇದನ್ನು ಹೊರತು ಪಡಿಸಿ ಮೃತನ ಮೈ ಮೇಲೆ ಯಾವುದೇ ಗಾಯಗಳು ಕಂಡುಬಂದಿರುವುದಿಲ್ಲವೆಂದು ಮೃತನು ಎಲ್ಲಿಂದಲೋ 

ಕೊಟ್ಟೂರು ಪಟ್ಟಣಕ್ಕೆ ಬಂದು ಅಲ್ಲಲ್ಲಿ ತಿರುಗಾಡುತ್ತಾ ಅವರಿವರು ಕೊಟ್ಟ ಊಟವನ್ನು ಸೇವನೆ ಮಾಡಿ ಕೊಟ್ಟೂರು ಪಟ್ಟಣದಲ್ಲಿ ಅಲ್ಲಲ್ಲಿ ಮಲಗಿಕೊಳ್ಳುತಿದ್ದು ಅದರಂತೆ ದಿನಾಂಕ:17/01/2024 ರಂದು ಬಿಡಿಸಿಸಿ ಬ್ಯಾಂಕ್ ಮುಂದುಗಡೆ ಇರುವ ಬಸ್ ನಿಲ್ದಾಣದಲ್ಲಿ ಮಲಗಿಕೊಂಡು ಸಂಜೆ 7-00 ಗಂಟೆಯಿಂದ ಈ ದಿನ ಬೆಳಿಗ್ಗೆ 9- 30 ಗಂಟೆಯ ಮದ್ಯದ ಅವಧಿಯಲ್ಲಿ ಯಾವುದೋ ಖಾಯಿಲೆಯಿಂದ ಸೂಕ್ತ ಆರೈಕೆ ಇಲ್ಲದೇ ಮೃತಪಟ್ಟಿದ್ದು ಕಾರಣ ಮೃತನ ವಾರಸುದಾರರನ್ನು ಮತ್ತು ಮೃತನ ಹೆಸರು ವಿಳಾಸವನ್ನು ಪತ್ತೆ ಮಾಡಿ ಮೃತನ ಮರಣದ ಬಗ್ಗೆ ಮುಂದಿನ ಕ್ರಮ ಕೈಗೊಳ್ಳುವಂತೆ ಕೊಟ್ಟ ದೂರಿನ ಸಾರಾಂಶದ ಮೇರೆಗೆ ಕೊಟ್ಟೂರು ಠಾಣೆಯ ಯುಡಿಆರ್ ನಂ.02/2024 ಕಲಂ.174 ಸಿಆರ್.ಪಿ.ಸಿ ರೀತ್ಯ ಪ್ರಕರಣವನ್ನು ದಾಖಲಿಸಿದೆ.ಎಂದು ಕೊಟ್ಟೂರು ಪಿಎಸ್ಐ ಗೀತಾಂಜಲಿ ಶಿಂಧೆ ತಿಳಿಸಿದ್ದಾರೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ