ಮೇಲ್ವರ್ಗದ ಜನರಿಗೆ ಸಹ ಕಾನೂನು ಅರಿವನ್ನು ಮೂಡಿಸಬೇಕು : ಡಿಎಸ್ಎಸ್ ಮುಖಂಡ ಬದ್ದಿ ಮರಿಸ್ವಾಮಿ

 

"ದಲಿತರ ಕುಂದು ಕೊರತೆ ಸಭೆ "

ಕೊಟ್ಟೂರು: ಪಟ್ಟಣದ ಪೊಲೀಸ್ ಠಾಣೆಯ ಆವರಣದಲ್ಲಿ ಪ್ರತಿ ಎರಡನೇ ಭಾನುವಾರರಂದು ಸಿಪಿಐ ಟಿ. ವೆಂಕಟಸ್ವಾಮಿ ಹಾಗೂ ಪಿಎಸ್ಐ ಗೀತಾಂಜಲಿ ಶಿಂಧೆ ರವರ ನೇತೃತ್ವದಲ್ಲಿ ಭಾನುವಾರ ದಲಿತರ ಕುಂದು ಕೊರತೆ ಕುರಿತು ಸಭೆಯನ್ನು ನಡೆಸಲಾಯಿತು.

ಈ ಸಂದರ್ಭದಲ್ಲಿ ಡಿಎಸ್ಎಸ್ ಮುಖಂಡ ಬದ್ದಿ ಮರಿಸ್ವಾಮಿ ಯವರು ಮಾತನಾಡಿ ಹಳ್ಳಿಗಳಲ್ಲಿ ಕ್ಷೌರ ಮಾಡಲು ನಿರಕರಿಸುವುದು, ದೇವಸ್ಥಾನಗಲ್ಲಿ ಪ್ರವೇಶ ಮಾಡಲು ನಿರಕರಿಸುವುದು, ಹೋಟೆಲ್ ಗಳಲ್ಲಿ ತಾರತಮ್ಯ ಮಾಡುವುದು, ಹಾಗೂ ಸಾಮಾಜಿಕ ಜಾಲತಾಣದಲ್ಲಿ ದಲಿತರಿಗೆ ಅಪಮಾನ ಮಾಡುವ ಉದ್ದೇಶದಿಂದ ಕೆಲ ಕಾಲೇಜ್ ವಿದ್ಯಾರ್ಥಿಗಳು ಕೆಟ್ಟ ವಿಡಿಯೋ ಗಳನ್ನು ಮಾಡಿ ಬಿಡುವುದು ಇಂತಹ ಅನೇಕ ಘಟನೆಗಳು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಈಗಲೂ ನಡೆಯುತ್ತಿದೆ ಇದರಿಂದಾಗಿ ಪೊಲೀಸ್ ಇಲಾಖೆಯು ಈ ತರಹದ ಘಟನೆಗಳು ನಡೆಯದಂತೆ ಮೇಲ್ವರ್ಗದ ಜನರಿಗೆ ಸಹ ಕಾನೂನು ಅರಿವನ್ನು ಮೂಡಿಸುವ ಸಭೆಯನ್ನು ನಡೆಸಬೇಕು ಎಂದು ಸಲಹೆಯನ್ನು ನೀಡಲಾಯಿತು.

ಈ ವಿಷಯವಾಗಿ ಮಾತನಾಡಿದ ಸಿಪಿಐ ಟಿ. ವೆಂಕಟಸ್ವಾಮಿ ಯವರು ಈ ತರಹದ ಘಟನೆಗಳು ಕಂಡುಬಂದಲ್ಲಿ ನಮ್ಮ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ ತಕ್ಷಣ ಅಂಥವರ ವಿರುದ್ಧ ಕಾನೂನು ಕ್ರಮ ವಹಿಸಲಾಗುವು, ಈ ಎಲ್ಲ ಘಟನೆಗಳು ನಮಗೆ ಖಚಿತ ಮಾಹಿತಿ ಮೇರೆಗೆ ಕಂಡುಬಂದಿದ್ದೆ ಆದರೆ ಅಂಥವರ ವಿರುದ್ಧ ನಿರ್ಧಾಕ್ಷಣವಾಗಿ ಕಾನೂನು ಕ್ರಮ ವಹಿಸಲಾಗುವುದು ಎಂದು ಹೇಳಿದರು.

ಮುಂಬರುವ ಚುನಾವಣೆಯಲ್ಲಿ ನೀತಿ ಸಂಹಿತೆ ಇರುತ್ತದೆ ಯಾವುದೇ ಅಹಿತಕರ ಘಟನೆಗಳ ನಡೆದಂತೆ ಎಲ್ಲ ಯುವಕರು ಎಚ್ಚರ ವಹಿಸಬೇಕು ಎಂದು ಪಿಎಸ್ಐ ಗೀತಾಂಜಲಿ ಶಿಂಧೆ ರವರು ಹೇಳಿದರು.

 ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಕೆ. ಶಿವರಾಜ್, ಎಲ್. ವಿಷ್ಣು, ರೋಹಿತ್, ಮಾರೇಶ್, ಮಣಿಕಂಠ, ಮಲ್ಲಿಕಾರ್ಜುನ, ಸ್ವಾಮಿ, ಶೇಖರ್, ಮುಂತಾದ ಯುವಕರು ಭಾಗವಹಿಸಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ