ದುಡಿತು ತಿನ್ನುವುದನ್ನು ಕಲಿಸಿಕೊಟ್ಟ ಸಂತರು ಸೇವಾಲಾಲ್ ಮಹಾರಾಜರು -ಜಯಪ್ರಕಾಸ್ ನಾಯ್ಕ್
ಕೊಟ್ಟೂರು 15.02.2024 :- ತಾಲೂಕ ಕಛೇರಿಯ ಮಹಾತ್ಮ ಗಾಂಧೀಜಿ ಸಭಾಂಗಣದಲ್ಲಿ ಸಂತ ಸೇವಾಲಾಲ್ ರವರ ಜನ್ಮದಿನಾಚರಣೆಯನ್ನು ಆಚರಿಸಲಾಯಿತು. ಸಂತ ಸೇವಾಲಾಲ್ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ ಶ್ರೀಮತಿ ಲೀಲಾ ಎಸ್ ಗ್ರೇಡ್-2 ತಹಶೀಲ್ದಾರರು ಪುಪ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು.
ಲಂಬಾಣಿ ಸಮಾಜದ ಮುಖಂಡರಾದ ಕುಮಾರನಾಯ್ಕ ಇವರು ಸೇವಾಲಾಲರು ಈಗಿನ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಬೆಳಗುತ್ತಿ ಹೋಬಳಿಯ ಸೂರಗೊಂಡನಕೊಪ್ಪ ಎಂಬಲ್ಲಿ ಭೀಮಾನಾಯ್ಕ- ಧರ್ಮಿಣಿ ಭಾಯಿ ಇವರ ಮಗನಾಗಿ 15-ಫೆಬ್ರವರಿ 1739 ರಂದು ಜನಿಸಿದರು. ಸೇವಾಲಾಲರು ತಮ್ಮ ಅನೇಕ ಲೀಲೆಗಳ ಮೂಲಕ ಹಾಗೂ ಜನರ ಸಂಕಷ್ಟಕ್ಕೆ ಸ್ಪಂದಿಸುವ ಮೂಲಕ ಜನರ ಮನಸ್ಸಿನಲ್ಲಿ ಗುರುವಿನ ಸ್ಥಾನವನ್ನು ಪಡೆದರು. ಪಶು ಸಾಕಾಣಿ ಮಾಡುತ್ತಾ ವೃತ್ತಿ ಕೈಗೊಂಡರು ಸಂಗೀತಗಾರ, ಧ್ಯರ್ಯಶಾಲಿ ಯೋಧ, ಮೂಢನಂಬಿಕೆ ವಿರುದ್ಧ ಹೋರಾಡಿದವರು. ಸತ್ಯ, ಅಹಿಂಸೆ, ದಯೆ, ಕರುಣೆಯಗಳನ್ನು ಪಾಲಿಸುವ ಮೂಲಕ ಧರ್ಮಾತೀತರಾಗಿ ಎಂದು ಸಾರಿದರು. ಬಿಕ್ಷೆ ಬೇಡಿ ತಿನ್ನಬೇಡಿ, ಶ್ರಮದ ಮೂಲಕ ದುಡಿದು ತಿನ್ನಿ. ಮಾನವ ಜನ್ಮ ಪವಿತ್ರವಾದದ್ದು, ಇದನ್ನು ಹಾಳಿ ಮಾಡಿಕೊಳ್ಳಬೇಡಿ, ವ್ಯಸನಗಳಿಂದ ದೂರವಿರಿ, ಪ್ರಾಮಾಣಿಕರಾಗಿ ಜೀವಿಸಿ, ಕಷ್ಟದಲ್ಲಿರುವವರಿಗೆ ಸಹಾಯ ಮಾಡಿ ಎಂದು ಮನುಕುಲದ ಏಳಿಗೆಗೆ ಸಂದೇಶವನ್ನು ನೀಡಿದ್ದಾರೆ ಎಂದು ಮಾತನಾಡಿದರು.
ರೈತ ಮುಖಂಡರಾದ ಜಯಪ್ರಕಾಶ್ ನಾಯ್ಕ ಮಾತನಾಡಿದರು. ಕಾರ್ಯಕ್ರಮದಲ್ಲಿ ಲಂಬಾಣಿ ಸಮುದಾಯದ ಮುಖಂಡರಾದ ದೂಪದಹಳ್ಳಿಯ ಬಾಲನಾಯ್ಕ, ಗ್ರಾಮ ಪಂಚಾಯಿತಿ ಸದಸ್ಯ ಗೋಪಿನಾಯ್ಕ, ಮೋತಿಕಲ್ತಾಂಡದ ಚಂದ್ರನಾಯ್ಕ, ದೇವಾನಾಯ್ಕ, ತಿಮ್ಮಲಾಪುರದ ಶೇಖರನಾಯ್ಕ ಹಾಗೂ ಉಪತಹಶೀಲ್ದಾರ್ ಅನ್ನದಾನೇಶ ಬಿ ಪತ್ತಾರ್, ಹನಮಂತ, ವಿಜಯಕುಮಾರ ಪುಟಾಣಿ, ಜ್ಯೋತಿಬಾಯಿ, ಮಂಜಮ್ಮ ಡಿಎ, ಗೌರಮ್ಮ ಹಾಗೂ ಇತರರು ಭಾಗವಹಿಸಿದ್ದರು. ಸಿ.ಮ.ಗುರುಬಸವರಾಜ ಸ್ವಾಗತಿಸಿ ನಿರೂಪಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ